ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್: ರಾಜ್ಯದಲ್ಲಿ ರೌದ್ರಾವತಾರ - ವಿದೇಶದಲ್ಲಿ ಶಾಂತಾವತಾರ
ಬೆಂಗಳೂರು (ಮಾ.13): ರಾಜ್ಯದಲ್ಲಿ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ನಡುವೆ ನಡೆದ ಜಟಾಪಟಿ ಕೋರ್ಟ್ ಮೆಟ್ಟಿಲೇರಿದ ಮೇಲೆ ತಣ್ಣಗಾಗಿದೆ. ಸುಮಾರು 10 ದಿನಗಳ ಕಾಲ ಜಟಾಪಟಿ ಮುಂದುವರೆಸಿದ್ದ ಐಪಿಎಸ್ ಅಧಿಕಾರಿ ರೂಪಾ ಅವರು ಪತಿ ಮನೀಶ್ ಮೌದ್ಗಿಲ್ ಅವರೊಂದಿಗೆ ವಿದೇಶಕ್ಕೆ ಪ್ರವಾಸಕ್ಕೆಂದು ಹೋಗಿದ್ದಾರೆ. ಅಲ್ಲಿ ಖುಷಿಯಾಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪತಿಯೊಂದಿಗೆ ಸಂತಸದಿಂದಿರುವ ಫೋಟೋಗಳನ್ನು ನೋಡಿರುವ ಜನರು ಶುಭಾಷಯ ಕೋರಿ ಹೀಗೆಯೇ ಖುಷಿಯಾಗಿರಿ ಎಂದು ಹಾರೈಸಿದ್ದಾರೆ.
ಸದ್ಯ ಪತಿ ಮುನಿಶ್ ಮೌದ್ಗಿಲ್ ಜೊತೆ ಅಮೆರಿಕಾಗೆ ಪ್ರವಾಸ ಬೆಳಸಿದ ಡಿ. ರೂಪಾ, ಮೈಕ್ರೋಸಾಫ್ಟ್ ಕಂಪನಿಗೆ ಕೂಡ ಭೇಟಿ ನೀಡಿದ್ದಾರೆ.
ಮೈಕ್ರೋಸಾಫ್ಟ್ ಕಚೇರಿ ಬಳಿಕ ನದಿ ಕಿನಾರೆಯಲ್ಲಿ ಮುದ್ದಾದ ಫೋಟೋಗಳನ್ನು ದಂಪತಿ ಕ್ಲಿಕ್ಕಿಸಿಕೊಂಡಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹೀಗೆಯೇ ಚೆನ್ನಾಗಿರಿ, ಅವರಿವರ ಮನೆಹಾಳರ ಕಿತಾಪತಿಗಳಿಗೆ ಹೀಗೆಯೇ ಟಕ್ಕರ್ ಕೊಡ್ಡುತ್ತಿರಿ. ಹೆಣ್ತನದ ರೂಪಕದ ನೆರಳಲ್ಲಿ ಗೋಸುಂಬೆ ಅವತಾರ ಬದುಕುವ ಅತೃತ್ಮ ಆತ್ಮಗಳಿಗೆ ತಿಲಾಂಜಲಿ ಇಡಿ! ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಸುಖ ಸಂಸಾರ ನಿಮ್ಮದಾಗಲ್ಲಿ ನೂರಾರು ವರ್ಷಗಳು ಹೀಗೆ ಸಂತೋಷದಿಂದ ಇರಿ ಮೇಡಂ.. ದೇವರು ಆಯುಷ್ಯ ಆರೋಗ್ಯ ಚನ್ನಾಗಿ ಕೊಡಲಿ ಹಾಗೆ ಯಾರ ಕಣ್ಣು ತಾಕದಿರಲಿ ಎಂದು ಹಾರೈಸಿದ್ದಾರೆ.
ಕಾಮಿನಿ (ಅಂದರೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ) ಅಲ್ಲಿಗೆ ಬರದಿದ್ದರೆ ಸಾಕು ಎಂಬರ್ಥದಲ್ಲಿ ಕಮೆಂಟ್ ಮಾಡಿರುವುದು ಕಾಣಬಹುದು.
ಭ್ರಷ್ಟಾಚಾರದ ವಿರುದ್ದ ನಿಮ್ಮ ಹೋರಾಟ ಹೀಗೆ ಮುಂದುವರೆಯಲಿ...ರೋಹಿಣಿ ಅಂತಹವರು ಸಾವಿರ ಜನರು ಬಂದರು ನಿಮಗೆ ಏನೂ ಮಾಡೊಕ್ಕಾಗೋಲ್ಲ ಮೇಡಮ್...ನಿಮ್ಮ ಕೆಲಸಕ್ಕೆ ನಮ್ಮದೋಂದು ಸಲಾಂ ಮ್ಯಾಮ್.
ನಿಮ್ಮ ಮುಖದಲ್ಲಿ ತುಂಬ ದಿನಗಳ ನಂತರ ನಗು ಮೂಡಿದೆ ಸದಾ ಕಾಲ ಇದೇ ಸಂತೋಷ ಇರಲಿ ನೆಟ್ಟಿಗರು ರೂಪಾ ಅವರಿಗೆ ಹಾರೈಸಿದ್ದಾರೆ.
ಕುಟುಂಬ ಒಡೆಯುವವರ ಮೇಲೆ ಚೆನ್ನಾಗಿ ಚಾಟಿ ಬೀಸಿದ್ದೀರಿ. ಹಾಗೆ ಕಾನೂನು ದೃಷ್ಟಿಯಿಂದ ಹೋರಾಟ ಮಾಡಲು ಕೂಡ ತಾವು ಹಿಂಜರಿದವರಲ್ಲ. ಈ ದಿಟ್ಟ ನಡೆ ನಮ್ಮೆಲ್ಲರಿಗೆ ಪ್ರೇರಣೆ ಮೇಡಂ. ಸಾಹೇಬ್ರು ಬಗ್ಗೆ ಸ್ವಲ್ಪ ಕಾಳಜಿ ವಹಿಸಿ.