ಬೆಂಗಳೂರು ಉದ್ಯಮಿ ಹನಿಟ್ರಾಪ್ ಬಲೆ, ₹1.5 ಕೋಟಿಗೆ ಬೇಡಿಕೆ ಇಟ್ಟ ಇನ್‌ಫ್ಲುಯೆನ್ಸರ್ ವಿರುದ್ಧ ಕೇಸ್
ಬೆಂಗಳೂರು ಉದ್ಯಮಿ ಹನಿಟ್ರಾಪ್ ಬಲೆ, ₹1.5 ಕೋಟಿಗೆ ಬೇಡಿಕೆ ಇಟ್ಟ ಇನ್‌ಫ್ಲುಯೆನ್ಸರ್ ವಿರುದ್ಧ ಕೇಸ್, ಉದ್ಯಮಿ ಜೊತೆಗಿನ ಖಾಸಗಿ ಫೋಟೋಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ ಬೇಡಿಕೆ ಇಡಲಾಗಿದೆ. ಉದ್ಯಮಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಳಿಲಿಸಿದ್ದಾರೆ.

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವಿರುದ್ದ ದೂರು
ಬೆಂಗಳೂರಿನ 31ರ ಹರೆಯದ ಉದ್ಯಮಿಯನ್ನು ಹನಿಟ್ರಾಪ್ ಬಲೆಗೆ ಬೀಳಿಸಿ ಬರೋಬ್ಬರಿ 1.5 ಕೋಟಿ ರೂಪಾಯಿಗೆ ಬೇಡಿಕೆ ಘಟನೆ ನಡೆದಿದೆ. ಜಯನಗರದ ಪೊಲೀಸ್ ಠಾಣೆಯಲ್ಲಿ ಉದ್ಯಮಿ ದೂರು ದಾಖಲಿಸಿದ್ದಾರೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.
ಏನಿದು ಪ್ರಕರಣ?
ತಮ್ಮ ಕ್ಲೀನಿಕ್ ಪ್ರಚಾರಕ್ಕಾಗಿ ಸೋಶಿಯಲ್ ಮೀಡಿಯಾ ಹುಡುಕಾಡುತ್ತಿರುವಾಗ ಇನ್‌ಫ್ಲುಯೆನ್ಸರ್ ಸಾಧಾನ ಶೆಟ್ಟಿ ಉದ್ಯಮಿ ಕಾರ್ತಿಕ್ ಪುಥ ಗಮನಕ್ಕೆ ಬಂದಿದ್ದಾರೆ. ಹೀಗಾಗಿ ಸಾಧಾನ ಶೆಟ್ಟಿಯನ್ನು ಸಂಪರ್ಕಿಸಿ ಪ್ರಚಾರದ ವಿಡಿಯೋಗೆ ಮನವಿ ಮಾಡಲಾಗಿತ್ತು. ಆದರೆ ಸಾಧನಾ ಶೆಟ್ಟಿ ಹೆಚ್ಚು ಆತ್ಮೀಯವಾಗಿ ಮಾತನಾಡಲು ಆರಂಭಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಹಸ್ಯವಾಗಿ ವಿಡಿಯೋ ರೆಕಾರ್ಡ್
ಕಾರ್ತಿಕ್ ನೀಡಿರುವ ದೂರಿನಲ್ಲಿ ಕೆಲ ಘಟನೆಗಳನ್ನು ಉಲ್ಲೇಖಿಸಿದ್ದಾರೆ. ಹಲವು ಬಾರಿ ಕಾಫಿ ಶಾಪ್ ಸೇರಿದಂತೆ ಇತೆರೆಡೆ ಭೇಟಿಯಾಗಿದ್ದೇವೆ. ಈ ವೇಳೆ ಸಾಧಾನ ಶೆಟ್ಟಿ ರಹಸ್ಯವಾಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದಾರೆ. ಆತ್ಮೀಯತೆಯಿಂದ ಚಾಟಿಂಗ್ ಮಾಡಿದ್ದಾರೆ. ಕೆಲ ಫೋಟೋ, ವಿಡಿಯೋಗಳನ್ನು ಮುಂದಿಟ್ಟುಕೊಂಡು ಇದೀಗ ಸಾಧಾನ ಶೆಟ್ಟಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಉದ್ಯಮಿ ಕಾರ್ತಿಕ್ ಆರೋಪಿಸಿದ್ದಾರೆ.
1.5 ಕೋಟಿ ರೂಪಾಯಿಗೆ ಬೇಡಿಕೆ
ಭೇಟಿಯ ಕೆಲ ಫೋಟೋ, ವಿಡಿಯೋಗಳು, ರಹಸ್ಯವಾಗಿ ಸೆರೆಹಿಡಿದ ವಿಡಿಯೋಗಳನ್ನು ತನ್ನ ಪತ್ನಿಗೆ ಕಳುಹಿಸಿ ಸಂಸಾರ ಹಾಳು ಮಾಡುವುದಾಗಿ ಸಾಧಾನ ಶೆಟ್ಟಿ ಬೆದರಿಸಿದ್ದಾಳೆ. ಫೋಟೋ, ವಿಡಿಯೋ ಲೀಕ್ ಮಾಡದಂತೆ ತಡೆಯಲು 1.5 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ ಎಂದು ಕಾರ್ತಿಕ್ ಆರೋಪಿಸಿದ್ದಾರೆ.
5 ಲಕ್ಷ ನಗದು, 5 ಲಕ್ಷ ಟ್ರಾನ್ಸ್‌ಫರ್, ಚಿನ್ನ ಸೇರಿ ಆಭರಣ
1.5 ಕೋಟಿ ರೂಪಾಯಿ ಬೇಡಿಕೆಗೂ ಮೊದಲು ಸಾಧಾನ ಶೆಟ್ಟಿಗೆ 5 ಲಕ್ಷ ರೂಪಾಯಿ ನಗದು ಹಣ, 5 ಲಕ್ಷ ರೂಪಾಯಿ ಖಾತೆಗೆ ವರ್ಗಾವಣೆ ಮಾಡಿದ್ದೇನೆ ಎಂದು ದೂರಿನಲ್ಲಿ ಕಾರ್ತಿಕ್ ಹೇಳಿದ್ದಾರೆ. ಒಟ್ಟು 10 ಲಕ್ಷ ರೂಪಾಯಿ ಹಾಗೂ 1.05 ಲಕ್ಷ ರೂಪಾಯಿ ಮೌಲ್ಯದ ಚಿನ್ನಜ ಉಂಗುರ ಹಾಗೂ ಸರ, 1.5 ಲಕ್ಷ ರೂಪಾಯಿ ಮೌಲ್ಯದ ಐಫೋನ್ ಕೊಡಿಸಿದ್ದೇನೆ ಎಂದು ಕಾರ್ತಿಕ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣ ದಾಖಲು, ಗಂಭೀರ ಸ್ವರೂಪ ಪಡೆದ ಪ್ರಕರಣ
ಹನಿ ಟ್ರಾಪ್ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇಧರ ನಡುವೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾಧಾನ ಶೆಟ್ಟಿಯನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಹಲವು ಬಾರಿ ಕ್ಲಿನಿಕ್‌ಗೆ ಬಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಹೇಳಿದ್ದಾರೆ.
ಪ್ರಕರಣ ದಾಖಲು, ಗಂಭೀರ ಸ್ವರೂಪ ಪಡೆದ ಪ್ರಕರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

