MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಲಾಲ್‌ ಬಹದ್ದೂರ್‌ ಶಾಸ್ತ್ರಿ ಕುರಿತ ಅಪರೂಪದ ಸಂಗತಿಗಳು ಇಲ್ಲಿವೆ

ಲಾಲ್‌ ಬಹದ್ದೂರ್‌ ಶಾಸ್ತ್ರಿ ಕುರಿತ ಅಪರೂಪದ ಸಂಗತಿಗಳು ಇಲ್ಲಿವೆ

ಅಕ್ಟೋಬರ್‌ 2 ಲಾಲ್‌ ಬಹದ್ದೂರ್‌ ಶಾಸ್ತಿ್ರ ಅವರ ಜನ್ಮದಿನವೂ ಹೌದು. ದೇಶದ ಇಬ್ಬರು ಅತ್ಯಂತ ಗೌರವಾನ್ವಿತರ ಜನ್ಮ ದಿನಾಚರಣೆ ಎಂಬ ಸಡಗರ ನಮ್ಮದು. ದೇಶ ಕಂಡ ಪ್ರಾಮಾಣಿಕ ಮತ್ತು ಸರಳ ರಾಜಕಾರಣಿಗಳಲ್ಲಿ ಶಾಸ್ತ್ರೀಜಿ ಪ್ರಮುಖರು. ಪ್ರಧಾನಿ ಪಟ್ಟಕ್ಕೇರಿದರೂ ತಮ್ಮ ಪ್ರಾಮಾಣಿಕತೆಯನ್ನು ಮೆರೆದವರು.

5 Min read
Suvarna News
Published : Oct 02 2023, 02:14 PM IST
Share this Photo Gallery
  • FB
  • TW
  • Linkdin
  • Whatsapp
18

ಪ್ರತಿವರ್ಷ ಅಕ್ಟೋಬರ್‌ 2ರಂದು ದೇಶದ ಜನ ರಾಷ್ಟ್ರಪಿತ ಮಹಾತ್ಮ ಗಾಂ​ಧೀೕಜಿಯವರ ಗುಣಗಾನ ಮಾಡುತ್ತಾರೆ. ಹಾಗೇ ಮತ್ತೊಬ್ಬ ಶ್ರೇಷ್ಠ ಮುತ್ಸದ್ಧಿ ಲಾಲ್‌ ಬಹದ್ದೂರ್‌ ಶಾಸ್ತ್ರೀಜಿಯವರನ್ನೂ ನೆನೆಯುತ್ತಾರೆ. ಶಾಸ್ತ್ರೀಜಿ ಈ ದೇಶ ಕಂಡ ಅಪ್ರತಿಮ ನಾಯಕ. ಸಜ್ಜನ ನೇತಾರ. ಅವರ ಬದುಕಿನ ಕೆಲವು ಅಪರೂಪದ ಘಟನೆಗಳು ಇತ್ತೀಚೆಗಷ್ಟೇ ಬಿಡುಗಡೆಯಾದ ‘ತಾಷ್ಕೆಂಟ್‌ ಡೈರಿ’ ಎಂಬ ಕೃತಿಯಲ್ಲಿ ದಾಖಲಾಗಿದೆ. ಆ ಕೆಲವು ಘಟನೆಗಳನ್ನು ಓದುಗರಿಗಾಗಿ ಇಲ್ಲಿ ಮೊಗೆದು ಕೊಟ್ಟಿದ್ದೇವೆ.

28

ಬಡತನದಲ್ಲಿ ಬೆಳೆದ ಶಾಸ್ತ್ರೀಜಿ

ಭಾರತದ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತಿ್ರಯವರದ್ದು ಮೇರು ವ್ಯಕ್ತಿತ್ವ. ಎರಡು ದಶಕಗಳ ನೆಹರೂ ಆಡಳಿತ ಕೊನೆಗೊಂಡಾಗ ಭಾರತವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಎದುರಾಗಿತ್ತು. ಆ ಸಮಯದಲ್ಲಿ ದೇಶದ ಜನರಿಗೆ ಬೇಕಾಗಿದ್ದದ್ದು ಒಬ್ಬ ದಕ್ಷ ಮತ್ತು ಸಜ್ಜನ ರಾಜಕಾರಣಿ. ದೇಶದ ಆರ್ಥಿಕತೆಗೆ ಶಕ್ತಿ ತುಂಬಬಲ್ಲ ಪ್ರಾಮಾಣಿಕ ವ್ಯಕ್ತಿ. ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ನಾಯಕ. ಭಾರತದ ಜನ ಲಾಲ್‌ ಬಹದ್ದೂರ್‌ ಶಾಸ್ತಿ್ರಯವರಲ್ಲಿ ಈ ಎಲ್ಲಾ ಗುಣಗಳನ್ನು ಕಂಡಿದ್ದರು. ಹಾಗಾಗಿ ದೇಶ ಶಾಸ್ತ್ರೀಜಿಯವರನ್ನು ಪ್ರಧಾನಿ ಸ್ಥಾನಕ್ಕೆ ಬಯಸಿತ್ತು. ಕಾಂಗ್ರೆಸ್ಸಿಗರಿಗೂ ನೆಹರೂರವರ ಸಾಮರ್ಥ್ಯಕ್ಕೆ ಸರಿಸಾಟಿಯಾಗಬಲ್ಲ ನಾಯಕರಾಗಿ ಕಂಡದ್ದು ಲಾಲ್‌ ಬಹದ್ದೂರ್‌ ಶಾಸ್ತ್ರೀಜಿಯವರು. ಶಾಸ್ತ್ರೀಜಿ ದೇಶದ ಚುಕ್ಕಾಣಿ ಹಿಡಿದರು. ಹಾಗೆ ನೋಡಿದರೆ ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ನಿಧನರಾದ ಭಾರತದ ಏಕೈಕ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತಿ್ರ. ಬಡತನ ಅವರಿಗೆ ಸಹನೆ, ತಾಳ್ಮೆ ಮತ್ತು ವಿನಯವನ್ನು ಕಲಿಸಿತ್ತು.
 

38

ಅಮೆರಿಕದ ಬೆದರಿಕೆಗೂ ಬಗ್ಗಲಿಲ್ಲ

ಅವರು ಆಡಳಿತ ನಡೆಸಿದ್ದು ಕೇವಲ 18 ತಿಂಗಳು ಮಾತ್ರ. ಅಷ್ಟುಸಣ್ಣ ಅವಧಿ​ಯಲ್ಲೇ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ದೇಶವನ್ನೂ ಮುನ್ನಡೆಸಿದರು. ದೇಶದಲ್ಲಿನ ಆಹಾರ ಕೊರತೆಯನ್ನು ನೀಗಿಸಿದರು. ಹಿಂದಿ-ಇಂಗ್ಲಿಷ್‌ ಭಾಷಾ ಗೊಂದಲವನ್ನು ಬಗೆಹರಿಸಿದರು. ಕಾಶ್ಮೀರದ ಹಜರತ್‌ಬಾಲ್‌ನಂತಹ ಸಮಸ್ಯೆಯನ್ನು ಹೂವೆತ್ತಿದಂತೆ ಪರಿಹರಿಸಿದರು. ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಗಟ್ಟಿದನಿಯಲ್ಲಿ ಹೇಳಿದರು. ಶಾಸ್ತ್ರೀಜಿ ಪ್ರಧಾನಿಯಾಗಿದ್ದಾಗ ನೆರೆಯ ಚೀನಾದ ಕ್ಯಾತೆಗೆ ಬಗ್ಗಲಿಲ್ಲ. ವಿಶ್ವಸಂಸ್ಥೆಯ ಒತ್ತಡಕ್ಕೂ ಮಣಿಯಲಿಲ್ಲ. ಅಮೆರಿಕದ ಬೆದರಿಕೆಗೆ ಕ್ಯಾರೇ ಎನ್ನಲಿಲ್ಲ. ಕೊನೆಗೆ ಶಾಂತಿ ಮಂತ್ರ ಜಪಿಸುತಾ ್ತತಾಷ್ಕೆಂಟಿಗೆ ಹೋಗಿ ಅಲ್ಲಿ ತಮ್ಮ ಜೀವವನ್ನೇ ಬಲಿಕೊಟ್ಟರು.
 

48

ಶಾಸ್ತ್ರೀಯವರು ಸೆರೆಮನೆಯಿಂದ ಮನೆಗೆ ಬರುವ ವೇಳೆಗೆ ಮಗಳು ತೀರಿಕೊಂಡಿದ್ದಳು

1930ರ ನಂತರ ಶಾಸ್ತ್ರೀಜಿಯವರು ಸಂಪೂರ್ಣವಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು. ಸ್ವಾತಂತ್ರ್ಯದ ಕನವರಿಕೆಯಲ್ಲಿ ಶಾಸ್ತ್ರೀಜಿಯವರು ಸ್ವಂತ ಮನೆæಯನ್ನೇ ಮರೆಯಬೇಕಾಯಿತು. ಒಮ್ಮೆ ಶಾಸ್ತ್ರೀಜಿಯವರು ಸೆರೆಮನೆಯಲ್ಲಿದ್ದಾಗ ಅವರ ಮಗಳು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ವಿಷಯ ತಿಳಿದ ಜೈಲಧಿಕಾರಿಗಳು ಶಾಸ್ತ್ರೀಜಿಯವರನ್ನು ಹದಿನೈದು ದಿನಗಳ ಕಾಲ ಪೆರೋಲ್‌ ಮೇಲೆ ಬಿಡುಗಡೆ ಮಾಡಿ ಮನೆಗೆ ಕಳಿಸಿದರು. ಶಾಸ್ತ್ರೀಜಿಯವರು ಮನೆಗೆ ಬರುವ ವೇಳೆಗಾಗಲೇ ಮಗಳು ತೀರಿಕೊಂಡಿದ್ದಳು. ಕಾರಣ ವೈದ್ಯರು ಆಕೆæಗೆ ಕೆಲವು ಔಷ​ಧಗಳನ್ನು ಬರೆದುಕೊಟ್ಟಿದ್ದರು. ಆಗಿನ ಕಾಲಕ್ಕೆ ಆ ಔಷ​ಗಳು ತೀರಾ ದುಬಾರಿಯಾಗಿತ್ತು. ಶಾಸ್ತ್ರೀಜಿಯವರ ಬಳಿಯಾಗಲಿ ಅಥವಾ ಅವರ ಶ್ರೀಮತಿಯವರ ಬಳಿಯಾಗಲೀ ಆ ಔಷಧ​ಗಳನ್ನು ಕೊಂಡುಕೊಳ್ಳುವಷ್ಟುಹಣವಿರಲಿಲ್ಲ. ಶಾಸ್ತ್ರೀಜಿ ಮಗಳ ಅಂತ್ಯ ಸಂಸ್ಕಾರ ಮುಗಿಸಿ ಪೆರೋಲ್‌ ಅವ​ಧಿಗೂ ಮುನ್ನವೇ ಮತ್ತೆ ಸೆರೆಮನೆ ಸೇರಿದರು. ಇದು ಮಗಳ ಕಥೆಯಾದರೆ, ಇದಾದ ಸ್ವಲ್ಪ ದಿನಗಳಲ್ಲೇ ಶಾಸ್ತ್ರೀಜಿಯವರ ಪತ್ನಿ ಲಲಿತಾಶಾಸ್ತಿ್ರಯವರೂ ಸಹ ಪೌಷ್ಠಿಕ ಆಹಾರದ ಕೊರತೆಯಿಂದ ಹಾಸಿಗೆ ಹಿಡಿದಿದ್ದರು.

ಜೈಲಿನಲ್ಲಿದ್ದ ಶಾಸ್ತ್ರೀಜಿಯವರು ವಿಷಯ ತಿಳಿದು ದಿನವೂ ಒಂದು ಲೋಟ ಹಾಲು ಕುಡಿಯುವಂತೆ ಪತ್ನಿಗೆ ಪತ್ರವೊಂದನ್ನು ಬರೆದರು. ಆದರೆ ಲಲಿತಾ ಶಾಸ್ತಿ್ರಯವರ ಬಳಿ ಹಾಲನ್ನು ಕೊಳ್ಳಲು ಹಣವಿರಲಿಲ್ಲ. ಆದರೆ ಪತಿಯ ಮಾತನ್ನು ಮೀರಬಾರದು ಎಂಬ ಕಾರಣಕ್ಕೆ ಒಂದು ಪುಟ್ಟಗಂಧದ ಬಟ ್ಟಲಿನಲ್ಲಿ ನಿತ್ಯ ಹಾಲನ್ನು ಕುಡಿಯಲಾರಂಭಿಸಿದರು. ಗಂಧದ ಬಟ್ಟಲೊಂದರಲ್ಲಿ ಅದೆಷ್ಟುಹಾಲು ಹಿಡಿಸೀತು? ನಂತರ ಶಾಸ್ತ್ರೀಜಿಯವರಿಗೆ ಪತ್ರವೊಂದನ್ನು ಬರೆದರು. ಅದರಲ್ಲಿ ತಾನು ನಿತ್ಯ ಹಾಲು ಕುಡಿಯುತ್ತಿರುವುದಾಗಿಯೂ ತನ್ನ ಬಗ್ಗೆ ಹೆಚ್ಚೇನೂ ಚಿಂತಿಸದೆ ಬದ್ಧತೆ ಮತ್ತು ಸಮರ್ಪಣಾ ಮನೋಭಾವದಿಂದ ಉಗ್ರವಾಗಿ ಹೋರಾಡಿ ಬ್ರಿಟಿಷರನ್ನು ಈ ದೇಶದಿಂದ ಹೊರದಬ್ಬಬೇಕೆಂದೂ ತಿಳಿಸಿದ್ದರು. ಶಾಸ್ತ್ರೀಜಿಯವರು ಜೈಲಿನಿಂದ ಬಂದ ನಂತರ ಗಂಧದ ಬಟ್ಟಲಿನ ವಿಚಾರ ತಿಳಿದು ಅತ್ಯಂತ ಭಾವುಕರಾಗಿದ್ದರು.

58

ಕುಟುಂಬ ನಿರ್ವಹಣೆಗೆ 40 ರೂಪಾಯಿ ಸಾಕೆಂದರು!

ಅದು ಸ್ವಾತಂತ್ರ್ಯ ಹೋರಾಟದ ಸಮಯ. ಗೋಪಾಲಕೃಷ್ಣ ಗೋಖಲೆಯವರು ‘ದಿ ಸರ್ವೆಂಟ್‌ ಆಫ್‌ ಇಂಡಿಯಾ ಸೊಸೈಟಿ’ಯನ್ನು ಸ್ಥಾಪಿಸಿದ್ದರು. ಅದು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಜೊತೆಗೆ ಚಳವಳಿಯಲ್ಲಿ ಭಾಗವಹಿಸುತ್ತಿದ್ದ ಹೋರಾಟಗಾರರಿಗೆ ಆರ್ಥಿಕ ನೆರವು ನೀಡುವ ಉದ್ದೇಶವನ್ನೂ ಹೊಂದಿತ್ತು. ಶಾಸ್ತ್ರೀಜಿಯವರ ಕುಟುಂಬವೂ ಆ ನೆರವನ್ನು ಪಡೆದುಕೊಳ್ಳುತ್ತಿತ್ತು. ಮನೆ ನಡೆಸಲು ಅವರ ಕುಟುಂಬಕ್ಕೆ ತಿಂಗಳಿಗೆ 50 ರುಪಾಯಿ ನೀಡಲಾಗುತ್ತಿತ್ತು. ಆಗ ಶಾಸ್ತ್ರೀಜಿಯವರು ಜೈಲಿನಿಂದ ಅವರ ಪತ್ನಿಗೆ ಪತ್ರವೊಂದನ್ನು ಬರೆದಿದ್ದರು.

ಅದರಲ್ಲಿ ‘ಸೊಸೈಟಿಯಿಂದ ಪ್ರತಿ ತಿಂಗಳೂ ಸರಿಯಾಗಿ ಹಣ ಬರುತ್ತಿದೆಯೇ? ಆ ಹಣ ಸಂಸಾರವನ್ನು ಸರಿದೂಗಿಸಲು ಸಾಕಾಗುತ್ತಿದೆಯೇ?’ ಎಂಬ ಪ್ರಶ್ನೆ ಕೇಳಿದ್ದರು. ಅದಕ್ಕೆ ಲಲಿತಾ ಶಾಸ್ತಿ್ರಯವರು ಮರುಪತ್ರವನ್ನು ಬರೆದು ‘ಸೊಸೈಟಿ ಕಳಿಸುತ್ತಿರುವ ಹಣ ಪ್ರತಿ ತಿಂಗಳೂ ತಪ್ಪದೇ ಬರುತ್ತಿದೆ. ಇನ್ನೂ ಹೆಚು ್ಚ ಹೇಳಬೇಕೆಂದರೆ ಅವರು ಕಳಿಸುತ್ತಿರುವ ಐವತ್ತು ರುಪಾಯಿಗಳಲ್ಲಿ ನಾನು ನಲವತ್ತು ರುಪಾಯಿಯನ್ನು ಮಾತ್ರ ಖರ್ಚು ಮಾಡಿ, ಹತ್ತು ರುಪಾಯಿಯನ್ನು ಉಳಿಸಿ ಕೂಡಿಡುತ್ತಿದ್ದೇನೆ’ ಎಂದು ತಿಳಿಸಿದ್ದರು. ಕೂಡಲೇ ಶಾಸ್ತ್ರೀಜಿಯವರು ಸೊಸೈಟಿಗೆ ಪÜತ್ರ ಬರೆದು ತಮ್ಮ ಕುಟುಂಬದ ನಿರ್ವಹಣೆಗೆ ನಲವತ್ತು ರುಪಾಯಿ ಸಾಕೆಂದೂ ಉಳಿದ ಹತ್ತು ರುಪಾಯಿಯನ್ನು ಕಷ್ಟದಲ್ಲಿರುವ ಇತರೆ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಬೇಕೆಂದು ಮನವಿ ಮಾಡಿದ್ದರು.

68

ಉದಾತ್ತ ಗುಣಗಳೇ ಮಾದರಿ

ಶಾಸ್ತ್ರೀಜಿಯವರು ಪ್ರಧಾನಮಂತ್ರಿಗಳಾಗಿದ್ದಾಗ ಅದೊಂದು ದಿನ ಬಿಹಾರದಿಂದ ಒಂದಷ್ಟುಜನ ಅವರನ್ನು ಭೇಟಿ ಮಾಡಲು ಅನುಮತಿ ಕೇಳಿದ್ದರು. ಶಾಸ್ತ್ರೀಜಿಯವರು ಅವರಿಗೆ ಸಂಜೆ ನಾಲ್ಕು ಗಂಟೆಗೆ ಬರುವಂತೆ ತಿಳಿಸಿದ್ದರು. ನಾಲ್ಕು ಗಂಟೆಗೆ ಸರಿಯಾಗಿ ಅವರೆಲ್ಲರೂ ಪ್ರಧಾನಿಗಳ ನಿವಾಸದಲ್ಲಿ ಹಾಜರಿದ್ದರು. ಶಾಸ್ತ್ರೀಜಿಯವರು ಸಂಸತ್‌ ಭವನದಲ್ಲಿ ನಡೆಯುತ್ತಿದ್ದ ಸಭೆಯೊಂದರಲ್ಲಿ ಭಾಗಿಯಾಗಿದ್ದರು. ಸಭೆ ಮುಗಿಯುವುದು ಸ್ವಲ್ಪ ತಡವಾಯಿತು. ಸಭೆ ಮುಗಿದ ಕೂಡಲೇ ಮನೆಗೆ ಬಂದರು.

ಆದರೆ ಅದಾಗಲೇ ಬಿಹಾರದಿಂದ ಬಂದಿದ್ದ ಜನ ಪ್ರಧಾನಿಗಳಿಗೆ ಕಾದು ಅಲ್ಲಿಂದ ಹೊರಟುಬಿಟ್ಟಿದ್ದರು. ಮನೆಗೆ ಬಂದ ಕೂಡಲೇ ತಮ್ಮನ್ನು ಭೇಟಿ ಮಾಡಲು ಬಂದಿದ್ದ ಜನಗಳ ಬಗ್ಗೆ ಶಾಸ್ತ್ರೀಜಿಯವರು ಅವರ ಕಾರ್ಯದರ್ಶಿಯವರನ್ನು ಕೇಳಿದರು. ಅದಕ್ಕೆ ಕಾರ್ಯದರ್ಶಿ ‘ಅವರೆಲ್ಲರೂ ಈಗಷ್ಟೇ ಹೊರಟುಹೋದರು. ಬಹುಶಃ ಈಗ ಅವರೆಲ್ಲರೂ ಮನೆಯಿಂದ ತುಸು ದೂರದಲ್ಲಿರುವ ಬಸ್‌ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರಬಹುದು’ ಎಂದು ಹೇಳಿದರು. ಕೂಡಲೇ ಶಾಸ್ತ್ರೀಜಿಯವರು ಸರಸರನೆ ನಡೆದುಕೊಂಡೇ ಬಸ್‌ ನಿಲ್ದಾಣದತ್ತ ಹೊರಟುಬಿಟ್ಟರು. ಅವರ ಕಾರ್ಯದರ್ಶಿ ಆ ಎಲ್ಲರನ್ನೂ ಇಲ್ಲಿಗೇ ಕರೆಸುತ್ತೇನೆ ಎಂದರೂ ಪ್ರಧಾನಿಗಳು ಕೇಳಲಿಲ್ಲ. ಖುದ್ದಾಗಿ ಬಸ್‌ ನಿಲ್ದಾಣದಲ್ಲಿ ಅವರೆಲ್ಲರನ್ನೂ ಭೇಟಿ ಮಾಡಿ ಮನೆಗೆ ಕರೆದುಕೊಂಡು ಬಂದು ಮಾತನಾಡಿಸಿದರು.

78

ಮೀನಾ ಕುಮಾರಿ ಗೊತ್ತೇ ಇರಲಿಲ್ಲ

ಒಮ್ಮೆ ಬಾಲಿವುಡ್‌ನ ಬ್ಲಾಕ್‌ ಬಸ್ಟರ್‌ ಸಿನೆಮಾ ‘ಪಾಕೀಜಾ‚’ದ ಚಿತ್ರೀಕರಣವಾಗುತ್ತಿತ್ತು. ಆ ಕಾಲದ ಬಾಲಿವುಡ್‌ನ ಕನಸಿನ ರಾಣಿ ಖ್ಯಾತ ನಟಿ ಮೀನಾ ಕುಮಾರಿ ಚಿತ್ರದ ನಾಯಕಿಯಾಗಿದ್ದರು. ಮೀನಾ ಕುಮಾರಿ ಆ ಸಮಯದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದರು. ಆ ಚಿತ್ರೀಕರಣಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ತುಂಬಾ ಒತ್ತಾಯ ಮಾಡಿ ಶಾಸ್ತ್ರೀಜಿಯವರನ್ನು ಆಹ್ವಾನಿಸಿದ್ದರು. ಶಾಸ್ತ್ರೀಜಿ ಆಗ ಕೇಂದ್ರದಲ್ಲಿ ಗೃಹ ಸಚಿವರಾಗಿದ್ದರು. ಅವರಿಗೆ ಇಲ್ಲ ಎನ್ನಲಾಗಲಿಲ್ಲ. ಹಾಗಾಗಿ ಚಿತ್ರೀಕರಣದ ಸೆಟ್‌ಗೆ ಬಂದರು. ಅಲ್ಲೊಂದು ಅದ್ದೂರಿ ಸಮಾರಂಭ ಏರ್ಪಾಡಾಗಿತ್ತು. ಅದರಲ್ಲಿ ಬಾಲಿವುಡ್‌ನ ಅನೇಕ ಸೆಲೆಬ್ರೆಟಿ ನಟ-ನಟಿಯರಿದ್ದರು.

ಸಮಾರಂಭದ ಪ್ರಾರಂಭದಲ್ಲಿ ನಟಿ ಮೀನಾ ಕುಮಾರಿ ಶಾಸ್ತ್ರೀಜಿಯವರಿಗೆ ಹಾರ ಹಾಕಿ ನಂತರ ಶಾಸ್ತ್ರೀಜಿಯವರ ಬಗ್ಗೆ ನಾಲ್ಕಾರು ಮಾತುಗಳನ್ನಾಡಿದರು. ಕೂಡಲೇ ಇಡೀ ಸಭಾಂಗಣ ದೀರ್ಘ ಕರತಾಡನವಾಯಿತು. ಶಾಸ್ತ್ರೀಜಿಯವರು ಪಕ್ಕದಲ್ಲಿ ಕುಳಿತಿದ್ದ ತಮ್ಮ ಮಾಧ್ಯಮ ಸಲಹೆಗಾರ ಕುಲದೀಪ್‌ ನಯ್ಯರ್‌ರನ್ನು ಆಕೆ ಯಾರು ಎಂದು ಕೇಳಿದರು. ನಯ್ಯರ್‌ ಆಶ್ಚರ್ಯ ವ್ಯಕ್ತಪಡಿಸುತ್ತಾ ಅವರೇ ಮೀನಾ ಕುಮಾರಿ ಎಂದು ತಿಳಿಸಿದರು. ನಂತರ ಶಾಸ್ತ್ರೀಜಿ ಮಾತನಾಡಲು ವೇದಿಕೆಗೆ ಬಂದರು. ಒಂದಿಷ್ಟೂಅಳುಕಿಲ್ಲದೆ ಶಾಸ್ತ್ರೀಜಿ ‘ಮೀನಾ ಕುಮಾರಿಯವರೇ, ದಯವಿಟ್ಟು ನನ್ನನ್ನು ಕ್ಷಮಿಸಿ. ಮೊದಲ ಬಾರಿಗೆ ನಾನು ನಿಮ್ಮ ಹೆಸರನ್ನು ಕೇಳುತ್ತಿದ್ದೇನೆ’ ಎಂದರು. ಹಿಂದಿ ಸಿನೆಮಾ ರಂಗದ ಸೌಂದರ್ಯ ರಾಣಿ ಮೀನಾ ಕುಮಾರಿ ಮುಜುಗರಕ್ಕೆ ಒಳಗಾಗಿದ್ದರು.
 

88

ರೈಲ್ವೆ ಕ್ರಾಸಿಂಗ್‌ನಲ್ಲಿ ಒಂದು ದಿನ

ಅದೊಂದು ದಿನ ದೆಹಲಿಯ ಕುತುಬ್‌ ಮಿನಾರ್‌ನಲ್ಲಿ ಪ್ರಧಾನಿ ನೆಹರೂರವರ ಕಾರ್ಯಕ್ರಮವೊಂದು ಆಯೋಜನೆಗೊಂಡಿತ್ತು. ಕಾರ್ಯಕ್ರಮ ಮುಗಿಸಿ ಎಲ್ಲ ಮಂತ್ರಿಗಳು ಮತ್ತು ಅಧಿ​ಕಾರಿಗಳು ವಾಪಸ್‌ ಬರುತ್ತಿದ್ದರು. ಶಾಸ್ತ್ರೀಜಿ ಸಹ ತಮ್ಮ ಕಾರಿನಲ್ಲಿ ಬರುತ್ತಿದ್ದರು. ಆಗ ಅವರು ಕೇಂದ್ರದ ಗೃಹಮಂತ್ರಿ. ಕಾರಿನ ಮುಂದಿನ ಸೀಟಿನಲ್ಲಿ ಚಾಲಕ ಮತ್ತು ಒಬ್ಬ ಭದ್ರತಾ ಸಿಬ್ಬಂದಿ. ಹಿಂದಿನ ಆಸನಲ್ಲಿ ಶಾಸ್ತ್ರೀಜಿ ಮತ್ತು ಅವರ ಮಾಧ್ಯಮ ಸಲಹೆಗಾರರಿದ್ದರು. ಅವರ ಕಾರು ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಬಳಿ ಬಂತು. ಅಲ್ಲೊಂದು ರೈಲ್ವೆ ಕ್ರಾಸಿಂಗ್‌. ಇವರು ಬರುವುದಕ್ಕೆ ಸರಿಯಾಗಿ ರೈಲ್ವೆ ಕ್ರಾಸಿಂಗ್‌ನ ಬಾಗಿಲು ಮುಚ್ಚಿಬಿಟ್ಟಿತು. ಶಾಸ್ತ್ರೀಜಿಯವರು ಕಿಟಕಿಯಿಂದ ಹಾಗೇ ಹೊರಗೆ ನೋಡಿದರು.

ಅಲ್ಲೇ ಹತ್ತಿರದಲ್ಲಿ ವ್ಯಾಪಾರಿಯೊಬ್ಬ ಕಬ್ಬನ್ನು ಅರೆಯುತ್ತಾ ಕಬ್ಬಿನ ರಸವನ್ನು ಮಾರುತ್ತಿದ್ದ. ಕೂಡಲೆ ಶಾಸ್ತ್ರೀಜಿ ತಮ್ಮ ಮಾಧ್ಯಮ ಸಲಹೆಗಾರರಿಗೆ ‘ರೈಲ್ವೆ ಗೇಟು ತೆಗೆಯುವವರೆಗೆ ಕಬ್ಬಿನ ಹಾಲು ಕುಡಿದು ಬರಬಹುದಲ್ಲವೇ?’ ಎಂದು ಹೇಳಿ ಕಾರಿನ ಬಾಗಿಲು ತೆಗೆದು ಸರಸರನೆ ಆ ಕಬ್ಬಿನ ಗಾಡಿಯತ್ತ ಹೆಜ್ಜೆ ಹಾಕಿದರು. ಮಾಧ್ಯಮ ಸಲಹೆಗಾರರಿಗೆ ಏನು ಹೇಳಬೇಕು ಎನ್ನುವುದೇ ತಿಳಿಯದಾಗಿತ್ತು. ಅವರು ಸುಮ್ಮನೆ ಶಾಸ್ತ್ರೀಜಿಯವರನ್ನು ಹಿಂಬಾಲಿಸಿದರು. ಇಬ್ಬರೂ ಒಂದೊಂದು ಗ್ಲಾಸ್‌ ಕಬ್ಬಿನ ಹಾಲು ಕುಡಿದರು. ಶಾಸ್ತ್ರೀಜಿ ತಮ್ಮ ಕಿಸೆಯಿಂದ ಹಣ ತೆಗೆದುಕೊಟ್ಟರು. ಸುತ್ತಮುತ್ತ ಯಾರೂ ಇವರನ್ನು ಗಮನಿಸಲಿಲ್ಲ. ಕಬ್ಬಿನ ಹಾಲಿನ ವ್ಯಾಪಾರಿಗೂ ಇವರು ಯಾರು ಎಂದು ತಿಳಿಯಲಿಲ್ಲ. ಅಲ್ಲದೆ ಶಾಸ್ತ್ರೀಜಿಯವರೂ ತಾವು ಯಾರೆಂದು ಆ ವ್ಯಾಪಾರಿಯ ಬಳಿ ಹೇಳಲಿಲ್ಲ.
 

About the Author

SN
Suvarna News
ಭಾರತ
ಕರ್ನಾಟಕ ಸುದ್ದಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved