ರಾಜ್ಯದಲ್ಲಿ ನಾಳೆಯಿಂದ ಮುಂಗಾರು ಅಬ್ಬರ; 5 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ
ಜೂನ್ 10ರಿಂದ 13ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ.
- FB
- TW
- Linkdin
Follow Us
)
ರಾಜ್ಯದಲ್ಲಿ ನಾಳೆಯಿಂದ ಮುಂಗಾರು ಚುರುಕು ಪಡೆಯಲಿದ್ದು, ಮುಂದಿನ ಕೆಲ ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 10ರಿಂದ 13ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಯಲ್ಲೋ ಅಲರ್ಟ್ ಜಿಲ್ಲೆಗಳ ವಿವರ ಇಲ್ಲಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ರಾಜ್ಯದಾದ್ಯಂತ ನಾಳೆಯಿಂದಲೇ ಮುಂಗಾರು ಮಳೆಯ ಅಬ್ಬರ ಶುರುವಾಗಲಿದೆ. ರಾಜ್ಯದ ಕರಾವಳಿ ಭಾಗ, ಉತ್ತರ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ಕೆಲವು ಕಡೆ ಸಾಧಾರಣ ಮತ್ತು ಉತ್ತಮ ಮಳೆಯಾಗಲಿದೆ. ಇನ್ನು ಜೂನ್ 11ರಂದು ಬಳ್ಳಾರಿ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ (Yellow Alert) ಘೋಷಿಸಲಾಗಿದೆ.
ಅದೇ ರೀತಿ ಜೂನ್ 12ರಂದು ವಿಜಯನಗರ, ಕೊಡಗು, ದಾವಣಗೆರೆ, ಚಿಕ್ಕಬಳ್ಳಾಪುರ, ಬಳ್ಳಾರಿ, ವಿಜಯಪುರ, ಕಲಬುರ್ಗಿ, ಬೆಳಗಾವಿ, ಬಾಲಕೋಟೆ ಹಾಗೂ ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಕೂಡಾ ಎಲ್ಲೋ ಅಲರ್ಟ್ ನೀಡಲಾಗಿದೆ.
ಇದು ಮುಂಗಾರು ಮಾರುತಗಳ ಭಾರೀ ಚಲನೆಯ ಪ್ರಭಾವದಿಂದಾಗಿ ತೀವ್ರ ಮಳೆಯನ್ನು ನಿರೀಕ್ಷೆ ಮಾಡಬಹುದಾಗಿದೆ. ಹವಾಮಾನ ಇಲಾಖೆ ಅನಾಹುತಗಳನ್ನು ತಡೆಗಟ್ಟಲು ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಇನ್ನು ಮಳೆಯ ಸಂದರ್ಭದಲ್ಲಿ ಹಳ್ಳಗಳನ್ನು ದಾಟಿ ಹೋಗಿ ನೀರು ಬರುವಾಗ ದಾಟುವ ಪ್ರಯತ್ನ ಮಾಡಬಾರದು. ನದಿ ಮತ್ತು ಹಳ್ಳಗಳ ನಡುಗಡ್ಡೆಗಳನ್ನು ಪ್ರವೇಶ ಮಾಡದಂತೆ ಹವಾಮಾನ ಇಲಾಖೆ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಜಂಟಿಯಾಗಿ ಎಚ್ಚರಿಕೆ ನೀಡಿವೆ.