Karnataka Rain Pictures: ಮುಳುಗಿದ ಹಲವು ಗ್ರಾಮ, ಜನಜೀವನ ಅಸ್ತವ್ಯಸ್ತ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಹಾಮಳೆಯಾಗುತ್ತಿದ್ದು, ಆಗಿರುವ ಅವಾಂತರ ಒಂದೆಡರಡಲ್ಲಿ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಜನ ಹೈರಾಣರಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಆಗಸ್ಟ್ ತಿಂಗಳ ಮೊದಲ ವಾರ ರಾಜ್ಯದ ಕರಾವಳಿ ಮತ್ತು ಒಳನಾಡಿನಲ್ಲಿ ಭರ್ಜರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು. ಮಂಗಳವಾರದಿಂದ ಶನಿವಾರದವರೆಗೆ ರಾಜ್ಯದ ಹಲವು ಜಿಲ್ಲೆಗಳಿಗೆ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ‘ಆರೆಂಜ್’ ಮತ್ತು ‘ಯೆಲ್ಲೋ ಅಲರ್ಚ್’ ಘೋಷಣೆಯಾಗಿದೆ.
ಉತ್ತರ ಕನ್ನಡದಲ್ಲಿ ಭಾರೀ ಮಳೆಗೆ ಅಲ್ಲಲ್ಲಿ ಅನಾಹುತವಾಗಿದೆ. ಭರ್ತಿಯಾದ ಕಡವಿನ ಕಟ್ಟಾ ಡ್ಯಾಂ ನಿಂದ ನೀರು ತುಂಬಿ ಹರಿಯುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಾದ್ಯಂತ ಸುರಿದ ಭಾರಿ ಮಳೆ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ವಿಜಯನಗರದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತಿದೆ ಅನ್ನದಾತರ ಬದುಕು ಸಾಲ ಮಾಡಿ ಹತ್ತಿ ಬೆಳೆ ಬೆಳೆದಿರುವ ಧರ್ಮಸಾಗರ ರೈತರು ತೀವ್ರ ಮಳೆಯ ಹೊಡೆತಕ್ಕೆ ಅನ್ನದಾತರ ಬದುಕು ದೇವರೆ ಕಾಪಾಡಬೇಕು ಎನ್ನುವಂತಾಗಿದೆ.
ಉತ್ತರ ಕನ್ನಡದ ಜಿಲ್ಲೆಯ ಸಾರದಹೊಳೆ ಪ್ರವಾಹ. ಇಕ್ಕೆಲಗಳ ಮನೆಗಳು ಜಲಾವೃತ. ಭಾರೀ ಮಳೆಯಿಂದಾಗಿ ಭಟ್ಕಳದಲ್ಲಿ ಜಲಪ್ರಳಯವಾಗಿದೆ