ಹೈ ಆದೇಶ ಪ್ರಶ್ನಿಸಿದ್ದ ಎಚ್‌ಡಿಕೆಗೆ ಬೇರೆ ಪೀಠದಲ್ಲಿ ವಾದಿಸಿ ಎಂದ ಸುಪ್ರೀಂ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧದ ಅರಣ್ಯ ಭೂಮಿ ಒತ್ತುವರಿ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಎಚ್‌ಡಿಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾ. ಪಂಕಜ್ ಮಿಥಲ್ ನೇತೃತ್ವದ ಪೀಠ ಮುಂದೆ ವಾದ ಮಂಡಿಸಲು ಸೂಚಿಸಲಾಗಿದೆ.
13

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧದ ಅರಣ್ಯ ಭೂಮಿ ಒತ್ತುವರಿ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು.
23
ಅರ್ಜಿಯು ನ್ಯಾ.ಸುಂದರೇಶ್ ಅವರ ನೇತೃತ್ವದ ಪೀಠದಲ್ಲಿ ವಿಚಾರಣೆ ಬಂದಿತ್ತು. ಈ ವೇಳೆ, ನ್ಯಾ.ಪಂಕಜ್ ಮಿಥಲ್ ನೇತೃತ್ವದ ಪೀಠ ಮುಂದೆ ವಾದ ಮಂಡಿಸಲು ಸುಂದರೇಶ್ ಅವರ ನೇತೃತ್ವದ ಪೀಠವು ಸೂಚನೆ ನೀಡಿತು. ಈ ಹಿಂದೆ ಪಂಕಜ್ ಮಿಥಲ್, ನ್ಯಾ.ಎಸ್ ವಿ ಎನ್ ಭಟ್ಟಿ ಪೀಠದಲ್ಲಿ ವಿಚಾರಣೆ ನಡೆದಿತ್ತು.
33
ರಾಮನಗರ ಜಿಲ್ಲೆಯ ಕೇತಮಾರನಹಳ್ಳಿಯ ಅರಣ್ಯ ಭೂಮಿ ಒತ್ತುವರಿ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆರೋಪಿಯನ್ನಾಗಿಸಿ ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಎಚ್‌ಡಿಕೆ ಅವರು ಸುಪ್ರೀಂ ಕೋರ್ಟ್‌ನ ಕದ ತಟ್ಟಿದ್ದರು.
Latest Videos