ಗಾಲಿ ಜನಾರ್ದನ್ ರೆಡ್ಡಿಯ 53 ಕೆಜಿ ಬಂಗಾರ ತುಕ್ಕು ಹಿಡಿಯುತ್ತಾ? ಹೈಕೋರ್ಟ್ ಅರ್ಜಿ ಏನಾಯ್ತು!
ಕರ್ನಾಟಕ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ವೇಳೆ ಜಪ್ತಿ ಮಾಡಿದ್ದ 53 ಕೆ.ಜಿ. ಬಂಗಾರ ತುಕ್ಕು ಹಿಡಿಯುತ್ತಿದ್ದು ಅದನ್ನು ವಾಪಸ್ ನೀಡುವಂತೆ ಅವರ ಮಕ್ಕಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ, ತೆಲಂಗಾಣ ಹೈಕೋರ್ಟ್ ಏನು ತೀರ್ಪು ಕೊಟ್ಟಿದೆ ಎಂದು ತಿಳ್ಕೊಳ್ಳೋಣ ಬನ್ನಿ.

ಕೊಪ್ಪಳ ಜಿಲ್ಲೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು, ಓಬುಳಾಪುರಂ ಮೈನಿಂಗ್ ಕೇಸಲ್ಲಿ ಆರೋಪಿಯಾಗಿದ್ದಾರೆ. ಜೊತೆಗೆ ಅವರ ಮಗ ಕಿರೀಟಿ ರೆಡ್ಡಿ, ಮಗಳು ಬ್ರಾಹ್ಮಣಿ ಹಾಕಿರೋ ಅರ್ಜಿಗಳನ್ನ ತೆಲಂಗಾಣ ಹೈಕೋರ್ಟ್ ವಜಾ ಮಾಡಿದೆ. ಓಎಂಸಿ ಕೇಸಲ್ಲಿ ತಮ್ಮ ಮನೆಲಿ ಸೀಜ್ ಮಾಡಿರೋ 53 ಕೆಜಿ ಬಂಗಾರ ಹಾಗೂ ಆಭಗರಣಗಳು ತುಕ್ಕು ಹಿಡಿದು ಹಾಳಾಗಿ ಹೋಗುತ್ತಿವೆ ಎಂದು ಗಾಲಿ ಜನಾರ್ದನ್ ರೆಡ್ಡಿ ಆತಂಕ ಪಟ್ಟಿದ್ದಾರೆ.
ತನಿಖಾ ಅಧಿಕಾರಿಗಳು ಜಪ್ತಿ ಮಾಡಿರುವ ಚಿನ್ನಾಭರಣಗಳು, ಬೆಳ್ಳಿ-ಬಂಗಾರದ ವಸ್ತುಗಳು ಜೊತೆಗೆ ಜಪ್ತಿ ಮಾಡಿರುವ 5 ಕೋಟಿ ರೂಪಾಯಿ ಬೆಲೆ ಬಾಳೋ ಬಾಂಡ್‌ಗಳನ್ನು ಬಿಡುಗಡೆ ಮಾಡಬೇಕು ಎಂದು ಗಾಲಿ ಜನಾರ್ದನ್ ರೆಡ್ಡಿ ಅವರ ಮಗಳು ಜಿ.ಬ್ರಾಹ್ಮಣಿ, ಮಗ ಜಿ.ಕಿರೀಟಿರಡ್ಡಿ ಅರ್ಜಿ ಹಾಕಿದ್ದರು.
ಆದರೆ ಈ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್ ವಜಾ ಮಾಡಿದೆ. ಬಂಗಾರ, ನಗಗಳು ತುಕ್ಕು ಹಿಡಿದು ಬೆಲೆ ಕಳೆದುಕೊಳ್ಳಿವೆ ಎಂಬ ಗಾಲಿ ಜನಾರ್ಧನರೆಡ್ಡಿ ಅವರ ಕುಟುಂಬದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಈ ಕೇಸ್ ವಿಚಾರಣೆ ಮುಗಿದ ಮೇಲೆನೇ ಅದರ ಮೇಲೆ ಹಕ್ಕು ನಿಮಗೆ ಪಡೆದುಕೊಳ್ಳಲು ಅವಕಾಶವಿದೆ ಎಂದು ತಿಳಿಸಿದೆ. ಇದು ಕ್ರಿಮಿನಲ್ ಹಣದಲ್ಲಿ ಖರೀದಿ ಮಾಡಿದ ನಗಗಳ ಮೇಲೆ ಜಾರಿನಿರ್ದೇಶನಾಲಯ (ಇಡಿ) ಕೂಡ ಹಕ್ಕು ಕೇಳುತ್ತಿದೆ. ಅದಕ್ಕೆ ಈ ಹಂತದಲ್ಲಿ ಸೀಜ್ ಮಾಡಿರೋ ನಗಗಳನ್ನ ಕೊಡೋಕೆ ಆಗಲ್ಲ ಅಂತ ಸ್ಪಷ್ಟವಾಗಿ ಹೇಳಿದೆ. ಈ ಕೇಸ್ ವಿಚಾರಣೆ ಮುಗಿದ ಮೇಲೆ ನಗಗಳನ್ನ ತಗೊಳ್ಳೋಕೆ ಅರ್ಜಿ ಹಾಕಬಹುದು ಎಂದು ತಿಳಿಸಿತು.
ಜನಾರ್ಧನರೆಡ್ಡಿ ಅಸಲಿ ಕೇಸ್ ಏನು?
ಅಕ್ರಮ ಗಣಿಗಾರಿಕೆ ಮೂಲಕ ಜನರ ದುಡ್ಡನ್ನ ಲೂಟಿ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಗಾಲಿ ಜನಾರ್ದನ್ ರೆಡ್ಡಿ ಜೊತೆಗೆ ಇನ್ನೂ 9 ಜನರ ಮೇಲೆ ಸಿಬಿಐ 2009ರಲ್ಲಿ ಕೇಸ್ ದಾಖಲು ಮಾಡಿತು. 2011 ಸೆಪ್ಟೆಂಬರ್ 5ಕ್ಕೆ ಜನಾರ್ದನ್ ರೆಡ್ಡಿ ಅವರನ್ನು ಅರೆಸ್ಟ್ ಮಾಡಿ ಜೈಲಿಗೆ ಹಾಕಿಲಾಯಿತು. ಕರ್ನಾಟಕದ ಬಳ್ಳಾರಿ, ಆಂಧ್ರಪ್ರದೇಶದ ಕಡಪ, ಅನಂತಪುರ ಜಿಲ್ಲೆಗಳಿಗೆ ಹೋಗಬಾರದು ಎನ್ನುವ ಷರತ್ತು ಹಾಕಿ ಸುಪ್ರೀಂ ಕೋರ್ಟ್ 2015 ಜನವರಿ 20ಕ್ಕೆ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಓಬಳಾಪುರಂ ಮೈನಿಂಗ್ ಕಂಪನಿ (ಓಎಂಸಿ) ಕೇಸ್ ವರ್ಷಾನುಗಟ್ಟಲೆ ನಡೆಯುತ್ತಿದೆ. ಈ ನಡುವೆ ಸುಪ್ರೀಂ ಕೋರ್ಟ್ ಯಾವುದೇ ಕಾರಣಕ್ಕೂ ವಿಚಾರಣೆ ಮುಗಿಸಬೇಕು ಎಂದು ತಾಕೀತು ಮಾಡಿದೆ. ಅಕ್ರಮ ಗಣಿಗಾರಿಕೆ ಮೂಲಕ 884.13 ಕೋಟಿ ರೂಪಾಯಿ ಜನರ ದುಡ್ಡನ್ನ ಲೂಟಿ ಮಾಡಿದ್ದಾರೆ ಎಂದು ಸಿಬಿಐ ಕೇಸ್ ದಾಖಲು ಮಾಡಿದೆ.
2011 ಸೆಪ್ಟೆಂಬರ್ 5ಕ್ಕೆ ಓಬುಳಾಪುರಂ ಮೈನಿಂಗ್ ಕೇಸಲ್ಲಿ ಗಾಲಿ ಜನಾರ್ದನ್ ರೆಡ್ಡಿನ ಸಿಬಿಐ ಅರೆಸ್ಟ್ ಮಾಡಿದ್ದಾಗ ಅವರ ಮನೆ ಮೇಲೆ ನಡೆಸಿದ ದಾಳಿಯಲ್ಲಿ 53 ಕೆಜಿ ತೂಕದ ಸುಮಾರು 105 ಬಂಗಾರದ ಆಭರಣಗಳು, ದುಡ್ಡು, ಬಾಂಡ್‌ಗಳನ್ನ ಸಿಬಿಐ ಸೀಜ್ ಮಾಡಿತು. ಬಾಂಡ್‌ಗಳನ್ನ ಬಿಡುಗಡೆ ಮಾಡಬಾರದು ಎಂದು ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್‌ಗೆ ಲೆಟರ್ ಬರೆದಿದೆ.