MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • DVG Award 2025: ಇತರೆಲ್ಲಾ ಭಾಷೆಗಳು ಸೊಸೆಯಾಗಲಿ, ಕನ್ನಡವೇ ಸದಾ ತಾಯಿಯ ಸ್ಥಾನದಲ್ಲಿರಲಿ: ತನಾಶಿ

DVG Award 2025: ಇತರೆಲ್ಲಾ ಭಾಷೆಗಳು ಸೊಸೆಯಾಗಲಿ, ಕನ್ನಡವೇ ಸದಾ ತಾಯಿಯ ಸ್ಥಾನದಲ್ಲಿರಲಿ: ತನಾಶಿ

ನಗರದ ಗಾನಭಾರತಿ ಕಲಾ ಸಮುಚ್ಚಯದ ರಮಾ ಗೋವಿಂದ ಕಲಾವೇದಿಕೆಯಲ್ಲಿ ಭಾನುವಾರ 'ಡಿವಿಜಿ ಬಳಗ ಪ್ರತಿಷ್ಠಾನ'ದ ವತಿಯಿಂದ ನೀಡುವ ಪ್ರತಿಷ್ಠಿತ 'ಡಿವಿಜಿ ಪ್ರಶಸ್ತಿ 2025' ಸ್ವೀಕರಿಸಿ ಖ್ಯಾತ ಸಾಹಿತಿ, ಕವಿ ಟಿ.ಎನ್.ಶಿವಕುಮಾರ್ (ತನಾಶಿ) ಮಾತನಾಡಿದರು.

2 Min read
Ravi Janekal
Published : Jun 22 2025, 06:35 PM IST
Share this Photo Gallery
  • FB
  • TW
  • Linkdin
  • Whatsapp
14
ತನಾಶಿ ಅವರಿಗೆ ಡಿವಿಜಿ ಪ್ರಶಸ್ತಿ 2025 ಪ್ರದಾನ
Image Credit : Asianet News

ತನಾಶಿ ಅವರಿಗೆ ಡಿವಿಜಿ ಪ್ರಶಸ್ತಿ 2025 ಪ್ರದಾನ

ಯಾವುದೇ ಭಾಷೆಯನ್ನು ನಾವು ತಿರಸ್ಕರಿಸಬೇಕಿಲ್ಲ. ಅಥವಾ ಅಗೌರವ ತೋರಿಸಬೇಕಿಲ್ಲ. ಎಲ್ಲ ಭಾಷೆಗಳ ಸತ್ವ ಹೀರಿ ಬೆಳೆದಿದೆ ನಮ್ಮ ತಾಯ್ನುಡಿ. ಇತರ ಭಾಷೆಗಳನ್ನು ಸೊಸೆ ಎಂದುಕೊಳ್ಳೋಣ. ಕನ್ನಡವೇ ಸದಾ ನಮ್ಮ ತಾಯಿಯ ಸ್ಥಾನದಲ್ಲಿರಲಿ' ಎಂದು ಖ್ಯಾತ ಸಾಹಿತಿ, ಕವಿ ಟಿ.ಎನ್.ಶಿವಕುಮಾರ್ (ತನಾಶಿ) ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕನ್ನಡ ಸಂವಾದದ ಸೊಗಸು ಕಣ್ಮರೆಯಾಗುತ್ತಿದೆ. ಅನಗತ್ಯವಾದ ಇಂಗ್ಲಿಷ್ ಪದಗಳನ್ನು ಬಳಸುವ ಪ್ರವೃತ್ತಿ ಹೆಚ್ಚಾಗಿದೆ. ನಾವು ಕನ್ನಡಿಗರು, ನಾವೇ ಕನ್ನಡ ಬಳಸದಿದ್ದರೆ ಹೇಗೆ? ಇತರ ಭಾಷೆಗಳಿಗೆ ಗೌರವ, ಮರ್ಯಾದೆ ಕೊಡೋಣ. ಆದರೆ ಕನ್ನಡವನ್ನು ಅಮ್ಮನ ಸ್ಥಾನದಲ್ಲಿ ಉಳಿಸಿಕೊಳ್ಳೋಣ' ಎಂದರು.

24
ಡಿವಿಜಿ ಪ್ರಶಸ್ತಿ 2025 ಪ್ರದಾನ
Image Credit : Asianet News

ಡಿವಿಜಿ ಪ್ರಶಸ್ತಿ 2025 ಪ್ರದಾನ

ಕನ್ನಡದ ಹಲವು ಮಹತ್ವದ ಕವಿಗಳ ಕೊಡುಗೆ ಮೆಲುಕು ಹಾಕಿದ ಅವರು, 'ನೀವು ವೇದ, ಪುರಾಣ, ರಾಮಾಯಣ, ಮಹಾಭಾರತ ಓದದಿದ್ದರೂ ಪರವಾಗಿಲ್ಲ. ಆದರೆ ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನು ಮಾತ್ರ ತಪ್ಪದೆ ಓದಿ. ಅದರಲ್ಲಿ ಎಲ್ಲದರ ಸಾರವಿದೆ. ಬದುಕಿನ ಸೂಕ್ಷ್ಮಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಸುತ್ತಲೇ ಕಷ್ಟಗಳನ್ನು ಸಹಿಸುವ ಮನಸ್ಥಿತಿಗೆ ನಮ್ಮನ್ನು ಸಜ್ಜುಗೊಳಿಸುತ್ತದೆ' ಎಂದು ತಿಳಿಸಿದರು.

ನನ್ನ ಮನೆಗೆ ಬೆಂಕಿ ಬಿದ್ದ ನಂತರದ 16 ವರ್ಷ ನಾನು ಏನೂ ಬರೆಯಲಿಲ್ಲ. ಸತತವಾಗಿ ದೇಶ ಸುತ್ತಿದ್ದೇನೆ. ಬದುಕಿನ ಕಷ್ಟಗಳ ಅರಿವು ನನಗಿದೆ. ಎದುರಾಗುವ ಎಲ್ಲರೂ ನನಗೆ ಗುರುಸ್ವರೂಪರೇ. ಎಲ್ಲರಿಂದಲೂ ಏನಾದರೂ ಒಂದು ಕಲಿತಿದ್ದೇನೆ ಎಂದು ನೆನಪಿಸಿಕೊಂಡರು.

ಸಹಿತವಾದದ್ದು ಸಾಹಿತ್ಯ. ಎಲ್ಲವನ್ನೂ ಒಳಗೊಳ್ಳಲು, ಎಲ್ಲರನ್ನೂ ಬೆಸೆಯಲು ಸಾಹಿತ್ಯಕ್ಕೆ ಸಾಧ್ಯ ಎಂದರು.

Related Articles

Related image1
Now Playing
ಕನ್ನಡ ಸಾಹಿತ್ಯಕ್ಕೆ ಅಂತರಾಷ್ಟ್ರೀಯ ಮನ್ನಣೆ । Banu Mushtaq wins International Booker Prize for Heart Lamp
Related image2
ಸಾಹಿತ್ಯ ಸಮ್ಮೇಳನಗಳು ಕನ್ನಡದ ಅಭಿವೃದ್ಧಿಗೆ ಪ್ರೇರಕವಾಗಲಿ: ವೀರಪ್ಪ ಮೊಯ್ಲಿ
34
ಡಿವಿಜಿ ಪ್ರಶಸ್ತಿ 2025 ಪ್ರದಾನ
Image Credit : Asianet News

ಡಿವಿಜಿ ಪ್ರಶಸ್ತಿ 2025 ಪ್ರದಾನ

ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ಸಂಗೀತ ವಿದ್ವಾಂಸ ಡಾ ರಾ.ಸ.ನಂದಕುಮಾರ್ ಮಾತನಾಡಿ, 'ಸಂಗೀತಾಭ್ಯಾಸ ಆರಂಭಿಸುವ ಮಕ್ಕಳಿಗೆ ಅನುಕೂಲವಾಗುವಂತೆ ಸ್ವರಬದ್ಧವಾದ ಸಣ್ಣ ಕೃತಿಗಳನ್ನು ರಚಿಸಿಕೊಡಿ. ಸಾಹಿತ್ಯ ಸರಸ್ವತಿ ಸಂಗೀತದಲ್ಲಿ ವಿಸ್ತರಿಸಲಿ. ಸಂಗೀತವು ಸಾಹಿತ್ಯದ ಜೊತೆಗಿದ್ದಾಗ ಹೆಚ್ಚು ಜನರನ್ನು ತಲುಪುತ್ತದೆ' ಎಂದು ಅಭಿಪ್ರಾಯಪಟ್ಟರು.

ಖ್ಯಾತ ವಾಗ್ಮಿ ಜಿ.ಎಸ್.ನಟೇಶ್ ಅವರ ತನಾಶಿ ಅವರ ವಚನಗಳನ್ನು ವಾಚಿಸಿ ಅರ್ಥ ವಿವರಿಸಿದರು. ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಹಾಗೂ ಸರ್ವಜ್ಞನ ವಚನಗಳನ್ನು ವಾಚಿಸಿ ಅರ್ಥ ವಿವರಿಸಿದರು.

44
ತನಾಶಿ ಮಾತು
Image Credit : Asianet News

ತನಾಶಿ ಮಾತು

ತುಮಕೂರಿನ ಚಿಣ್ಣರಾದ ಆರ್ಯ ಭಟ್, ಗಾರ್ಗಿ ಭಟ್ ಮಂಕುತಿಮ್ಮನ ಕಗ್ಗದ ಕೆಲವು ಕಗ್ಗಗಳ ವಾಚಿಸಿ ಸೊಗಸಾಗಿ ವ್ಯಾಖ್ಯಾನಿಸಿದರು. ಅವರ ಪ್ರಯತ್ನ ಸಭಿಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ತನಾಶಿ ಅವರ ಕೆಲ ರಚನೆಗಳನ್ನು ಖ್ಯಾತ ಗಾಯಕ ಶ್ರೀಹರ್ಷ ಹಾಡಿದರು. ಡಿವಿಜಿ ಬಳಗದ ಸಂಚಾಲಕ ಕನಕರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಮೈಸೂರು
ಕನ್ನಡ ಭಾಷೆ
ಕನ್ನಡ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved