MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಅಂದ್ಕೊಂಡಂತೆ ಆದ್ರೆ 6 ಹಳ್ಳಿ ಜನರಿಗೆ ತಪ್ಪುತ್ತೆ ನೀರಿನ ಸಮಸ್ಯೆ! ಇಂದಿರಮ್ಮನ ಕೆರೆ ಕಾಮಗಾರಿ ಆರಂಭ ಯಾವಾಗ?

ಅಂದ್ಕೊಂಡಂತೆ ಆದ್ರೆ 6 ಹಳ್ಳಿ ಜನರಿಗೆ ತಪ್ಪುತ್ತೆ ನೀರಿನ ಸಮಸ್ಯೆ! ಇಂದಿರಮ್ಮನ ಕೆರೆ ಕಾಮಗಾರಿ ಆರಂಭ ಯಾವಾಗ?

ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ800 ಎಕರೆ ಜಾಗದಲ್ಲಿರುವ ಇಂದಿರಮ್ಮನ ಕೆರೆಯ ಎಡದಂಡೆ ಕಾಲುವೆ ಕಾಮಗಾರಿ ಅಂದುಕೊಂಡಂತೆ ನಡೆದರೆ 6 ಹಳ್ಳಿ ಜನರಿಗೆ ನೀರಿನ ಸಮಸ್ಯೆ ತಪ್ಪುತ್ತೆ. ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮನಸು ಮಾಡಬೇಕಷ್ಟೇ. 

2 Min read
Suvarna News
Published : Jul 26 2024, 03:40 PM IST| Updated : Jul 26 2024, 03:53 PM IST
Share this Photo Gallery
  • FB
  • TW
  • Linkdin
  • Whatsapp
14

ಧಾರವಾಡ ತಾಲೂಕಿನ ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮದಲ್ಲಿರುವ ಇಂದಿರಮ್ಮನ ಕರೆ ( ಹುಲಿಕೇರಿ ) ಈ ಕೆರೆ ಬರೊಬ್ಬರಿ 800 ಎಕರೆ ಪ್ರದೇಶದ ವಿಸ್ತಿರ್ಣವನ್ನು ಹೊಂದಿದ್ದು ಅದರಲ್ಲಿ 350 ಎಕರೆಯಲ್ಲಿ ನೀರು ಸಂಗ್ರಹವಾಗುತ್ತದೆ. ಈ ಕೆರೆಯಿಂದ ಅಳ್ನಾವರ ಪಟ್ಟಣದ ಸೇರಿದಂತೆ ಸುಮಾರುಬ 10 ಹಳ್ಳಿಗಳಿಗೆ ಕುಡಿಯಲು ನೀರನ್ನ ಬಳಕೆ ಮಾಡಲಾಗುತ್ತಿತ್ತು ಆದರೆ ಕಳೆದ 2019 ರಲ್ಲಿ ಬಂದ ಭೀಕರ ಪ್ರವಾಹದ ಮಳೆಗೆ ಕೆರೆ ಕೋಡಿ ಒಡೆದು ಸಾಕಷ್ಡು ಹಾನಿಯನ್ನ ಮಾಡಿತ್ತು ಆದರೆ ಅದರ ಜೊತೆಗೆ ಎಡದಂಡೆ ಕಾಲುವೆಯ ಕಿನಾಲು ಕೂಡಾ ಕೊಚ್ಚಿಹೋಗಿತ್ತು ಆಗಿನಿಂದಲೂ ಹಿಡಿದು ಇಲ್ಲಿಯವರೆಗೆ ಅಂದರೆ ನಾಲ್ಕು ವರ್ಷದಿಂದ ಅಧಿಕಾರಿಗಳ ನಿರ್ಲಕ್ಷಕ್ಕೆ ಆ ಕಿನಾಲನ್ನು ದುರಸ್ತಿ ಮಾಡದೆ ಇರೋದರಿಂದ ಆ 6 ಗ್ರಾಮಗಳಿಗೆ ಕುಡಿಯುವ ನೀರು ಸಿಗ್ತಿಲ್ಲ.

24

ಜಿಲ್ಲೆಯಲ್ಲೇ ಅತಿದೊಡ್ಡ ಕೆರೆ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಆದರೆ ಕರೆಯಲ್ಲಿ ಮಳೆಗಾಲದಲ್ಲಿ ಸಾಕಷ್ಡು ನೀರು ಸಂಗ್ರಹ ವಾದರೂ ಆ ನೀರು ಜನಸಾಮಾನ್ಯರಿಗೆ ಕುಡಿಯಲು ಜನಜಾನುವಾರುಗಳಿಗೆ ಸಿಗ್ತಿಲ್ಲ ಅನ್ನೋ ಕೊರಗು ಗ್ರಾಮಸ್ಥರದ್ದಾಗಿದೆ.ಕಳೆದ 2019 ರಲ್ಲಿ ಕೆರೆಯ ಎಡದಂಡೆ ಕಾಲುವೆ ದುರಸ್ತಿ, ಕಟ್ಟಡಗಳು ಮತ್ತು ವೇಸ್ಟ ವಿಯರನ ಸುಧಾರಣೆ ಪುನರ್ ನಿರ್ಮಾಣ ಕಾಮಗಾರಿಯನ್ನ ಮಾಡಬೇಕಿದೆ ಸದ್ಯ ಕಿನಾಲು ಮಳೆಯಲ್ಲಿ ಕೊಚ್ಚಿ ಹೋಗಿ ಹಾಳಾಗಿದ್ದು ಅದೆ ಕಿನಾಲನ್ನ ಸದ್ಯ ಮರು ನಿರ್ಮಾಣ ಮಾಡಬೇಕು ಎಂದು ರೈತರ ಒತ್ತಾಯವಾಗಿತ್ತು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್(Santosh lad) ಅವರಿಗೂ ಗ್ರಾಮಸ್ಥರು ಮನವಿ ಮಾಡಿಕ್ಕೊಂಡಿದ್ದಾರೆ ಆದರೆ ಎನ್ ಪ್ರಯೋಜನೆ ಅನ್ನೋ ಹಾಗೆ ಆಗಿದೆ ಇಲ್ಲಿಯ ಜನರದ್ದು.

ಕಳೆದ 3 ವರ್ಷಗಳಿಂದ ಸಣ್ಣ ನೀರಾವರಿ ಇಲಾಖೆಯಿಂದ ಕಾಮಗಾರಿಯನ್ನ ಮಾಡಲು 6 ಕೋಟಿ ಹಣವನ್ನ ಹಿಂದಿನ ಬಿಜೆಪಿ ಸರಕಾರದಲ್ಲಿ ಬಿಡುಗಡೆಯಾಗಿದ್ದು ಆದರೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷಕ್ಕೆ ಟೆಂಡರ್ ಕರಿಯೋದು ಮತ್ತೆ ಕ‌್ಯಾನ್ಸಲ್ ಮಾಡೋದು ಅಂತ ಮೂರು ಬಾರಿ ಟೆಂಡರ್ ಕರೆದು ರದ್ದು ಮಾಡುತ್ತಿದೆ ಎನ್ನಲಾಗುತ್ತಿದೆ.ಆದರೆ ಗುತ್ತಿಗೆದಾರ ಡೋಣುರ ಎಂಬುವರ ಹೇಸರಿಗೆ ಸದ್ಯ ಕಳೆದ ಡಿಸೆಂಬರನಲ್ಲಿ ಟೆಂಡರ್ ಆಗಿದ್ರು ಸದ್ಯ ಅಧಿಕಾರಿಗಳು ಈ ಕಾಮಗಾರಿಗೆ ಗುತ್ತಿಗೆದಾರನಿಗೆ ವರ್ಕ್ ಆರ್ಡರನ್ನ ನಿಡುತ್ತಿಲ್ಲ ಎಂದು ಹೇಳಲಾಗುತ್ತಿದೆ.

34

ಸದ್ಯ ಈ ಗ್ರಾಮದ ದೊಡ್ಡದಾದ ಕೆರೆಯ ದುರಸ್ತಿ ಕಾಮಗಾರಿಯನ್ನ ಮಾಡಲು ಗುತ್ತಿಗೆದಾರ ಇಗಾಗಲೆ ಕಾಲುವೆಯ ದುಸ್ತಿಗೆ ಎಂದು ಇಗಾಗಲೆ ಕೋಟ‌್ಯಾಂತರ ಸಾಮಗ್ರಿಗಳನ್ನ ಅಲ್ಲೆ ಬಿಟ್ಡು ಸದ್ಯ ಕಾಮಗಾರಿಗೆ ಜೆಸಿಬಿಗಳ ಮುಖಾಂತರ ಪಿಲ್ಲರನ ತೆಗ್ಗು ತೆಗೆದಿದ್ದು ಇರುತ್ತದೆ.ಆದರೆ ಕಳೆದ ನಾಲ್ಕೈದು ತಿಂಗಳಿಂದ ಗುತ್ತಿಗೆದಾರನಿಗೆ ವರ್ಕ ಆರ್ಡರನ್ನ ನೀಡದೆ ಇರೋದಕ್ಕೆ ಇಗಾಗಲೆ ಇಲಾಖೆಗೆ 90 ಲಕ್ಷ ಡಿಪಾಸಿಟ್ ಮಾಡಿ 50 ಲಕ್ಷ ಮೌಲ್ಯದ ಸಲಕರಣೆಗಳನ್ನ ಕಾಮಗಾರಿ ನಡೆಯುವ ಸ್ಥಳದಲ್ಲಿ ಬಿಟ್ಟು ಸದ್ಯ ಕಾಮಗಾರಿಯನ್ನ ಅರ್ದಕ್ಕೆ ನಿಲ್ಲಿಸಲಾಗಿದೆ ಕಾರಣವೆಂದರೆ ಗ್ರಾಮಸ್ಥರು ಹೇಳುವ ಪ್ರಕಾರ ಆ ಕಾಮಗಾರಿಯ ವರ್ಕ ಆರ್ಡರ ಅನ್ನ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ನಿಡುತ್ತಿಲ್ಲ ಎಂದು ಹೇಳುತ್ತಿದ್ದಾರೆ

ಇನ್ನು ಗುತ್ತಿಗೆದಾರನಿಗೆ ಸಂಪರ್ಕ ಮಾಡಿದರೆ ಕಾಮಗಾರಿಯನ್ನ ಮಾಡಲು ನಾನೆನು ಹಿಂದೆ ಸರಿದಿಲ್ಲ ಇಲಾಖೆಯಿಂದ ನನಗೆ ಕಾಮಗಾರಿಯ ವರ್ಕ ಆರ್ಡರನ್ನ ನೀಡುತ್ತಿಲ್ಲ ಇದರಿಂದ ಕಾಮಗಾರಿಯನ್ನ ಅರ್ದಕ್ಕೆ ನಿಲ್ಲಿಸಲಾಗಿದೆ ಎಂದು ಹೇಳುತ್ತಿದ್ದಾರೆ.

44

ಅದು ಎನೆ ಇರಲಿ 2019 ರಲ್ಲಾದ ಅನಾಹುತಕ್ಕೆ ಸದ್ಯ ಆ 6 ಗ್ರಾಮದ ಜನರಿಗೆ ತಲುಪಬೇಕಾದ ನೀರು ಸಿಗ್ತಿಲ್ಲ.ಜೊತೆಗೆ ಸುಮಾರು 1068 ಹೆಕ್ಡರ್ ಪ್ರದೇಶದ ಕೃಷಿ ಭೂಮಿಗೆ ಸಿಗಬೇಕಾದ ನೀರು ಸಿಗ್ತಿಲ್ಲ ಎಂದು ಗ್ರಾಮಸ್ಥರು ಮತ್ತು ರೈತರು ಅಧಿಕಾರಿಗಳಿಗೆ ಮತ್ತು ಸರಕಾರಕ್ಕೆ ಹಿಡಿಶಾಪವನ್ನು ಹಾಕುತ್ತಿದ್ದಾರೆ ಈ ವಿಷಯವನ್ನ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರು ಗಮನ ಹರಿಸಿ ಆದಷ್ಟೂ ಬೇಗ ಕಾಮಗಾರಿಯನ್ನ ಆರಂಭ ಮಾಡಲು ಮುಂದಾಗಬೇಕಿದೆ.ಜೊತೆಗೆ ಗುತ್ತಿಗೆದಾರ ಮತ್ತು ಅಧಿಕಾರಿಗಳ ಮದ್ಯ ಇರುವ ಟೆಕ್ನಿಕಲ್ ಸಮಸ್ಯಯನ್ನ ಬಗೆಹರಿಸಿ ಈ ಎಡದಂಡೆ ಕಾಲುವೆಯನ್ನ ಒಡೆದು ಹೊಗಿದ್ದಿರೋದನ್ನ ಕಾಮಗಾರಿ ಮಾಡಿ ಬರುವ ಬೇಸಿಗೆ ದಿನದಲ್ಲಿ ಆ ಗ್ರಾಮಸ್ಥರಿಗೆ ಕುಡಿಯಲು ಮತ್ತು ಕೃಷಿ ಜಮೀನುಗಳಿಗೆ ನೀರು ಸಿಗುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮಾಡಬೇಕಿದೆ.

About the Author

SN
Suvarna News
ಧಾರವಾಡ
ಸಂತೋಷ್ ಲಾಡ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved