ಚಿತ್ರಪಟ: ಅಡಿಗಲ್ಲು ಹಾಕಿದ್ದವರಿಂದಲೇ ಕಲಬುರಗಿ ಏರ್ ಪೋರ್ಟ್ ಲೋಕಾರ್ಪಣೆ

First Published 22, Nov 2019, 9:09 PM

ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಗೆ ಕೊನೆಗೂ ಪ್ರಯಾಣಿಕ ವಿಮಾನಯಾನ ಸಂಪರ್ಕ ಲಭಿಸಿದ್ದು, ಇಂದು [ಶಕ್ರವಾರ] ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಈ ಮೂಲಕ ಸೂರ್ಯನಗರಿಯಲ್ಲಿ ಶುಕ್ರವಾರದಿಂದ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ಶುರುವಾಯ್ತು. 2008ರಲ್ಲಿ  ಯಡಿಯೂರಪ್ಪನವರೇ ಅಡಿಗಲ್ಲು ಹಾಕಿದ್ದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಇಂದು ಅವರೇ ಲೋಕಾರ್ಪಣೆ ಮಾಡಿರುವುದು ವಿಶೇಷ. ಇನ್ನು ಕಲಬುರಗಿ ವಿಮಾನ ನಿಲ್ದಾಣ ವಿಸ್ತಾರ ಎಷ್ಟಿದೆ..? ಎಷ್ಟು ಖರ್ಚಾಗಿದೆ..? ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

2008ರಲ್ಲಿ ಯಡಿಯೂರಪ್ಪನವರೇ ಅಡಿಗಲ್ಲು ಹಾಕಿದ್ದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಇಂದು ಅವರೇ ಲೋಕಾರ್ಪಣೆ ಮಾಡಿದರು.

ರಾಜ್ಯ ಸರ್ಕಾರವೇ ಸಂಪೂರ್ಣವಾಗಿ 175.57 ಕೋಟಿ ರೂ. ವೆಚ್ಚದಡಿ 742 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ಕಲಬುರಗಿ ವಿಮಾನ ನಿಲ್ದಾಣ.

ವಿಮಾನಯಾನ ಹಾಗೂ ಪ್ರಗತಿಯಾನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಕಲ್ಯಾಣ ಕರ್ನಾಟಕದ ಜನರ ಆಸೆ ಈಡೇರಿದಂತಾಗಿದೆ.

ಶುಕ್ರವಾರ ಕಲಬುರಗಿ ವಿಮಾನ ನಿಲ್ದಾಣ ಆವರಣದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ, ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಹಾಗೂ ಕರ್ನಾಟಕ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯು ಜಂಟಿಯಾಗಿ ಆಯೋಜಿಸಿದ್ದ ಕಲಬುರಗಿ ವಿಮಾನ ನಿಲ್ದಾಣ ಲೋಕಾರ್ಪಣೆ.

3.175 ಕಿ.ಮಿ. ಉದ್ದದ ರನ್ವೆ ಹೊಂದಿರುವ ಕಲಬುರಗಿ ವಿಮಾನ ನಿಲ್ದಾಣ ರಾಜ್ಯದ 2ನೇ ಹಾಗೂ ದೇಶದ 10ನೇ ಅತಿ ಉದ್ದದ ರನ್ವೆ ಇದಾಗಿದೆ. ದೇಶಕ್ಕೆ ಶೇ.30 ರಷ್ಟು ತೊಗರಿ ಉತ್ಪಾದಿಸುವ ಮತ್ತು ಸಿಮೆಂಟ್ ರಫ್ತಿನಿಂದ ಕಲಬುರ್ಗಿ ಜಿಲ್ಲೆ ವಿಶ್ವದಾದ್ಯಂತ ಗಮನ ಸೆಳೆದಿದೆ.

ಕಲಬುರಗಿ ವಿಮಾನ ನಿಲ್ದಾಣ ಲೋಕಾರ್ಪಣೆಗೆಂದು ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪೊಲೀಸ್ ಇಲಾಖೆಯಿಂದ ಗೌರವ ಸ್ವೀಕರಿಸಿದರು.

ವಿಮಾನ ನಿಲ್ದಾಣ ಲೋಕಾಪರ್ಣೆ ಮಾಡಲು ಬಿಎಸ್ ಯಡಿಯೂರಪ್ಪನವರು ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಿಂದ ಸ್ಟಾರ್ ಏರ್ ಲೈನ್ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ನಗೆ ಬೀರಿದ ಕ್ಷಣ.

ಕಲಬುರಗಿ ವಿಮಾನ ನಿಲ್ದಾಣಕ್ಕೆ ಮೊದಲ ಬಾರಿಗೆ ಅತಿಥಿಯಂತೆ ಬಂದ ಸ್ಟಾರ್ ಏರ್ ಲೈನ್ ಗೆ ಕಾಲುತೊಳೆದು ಬರಮಾಡಿಕೊಂಡಂತಿದೆ.

3.175 ಕಿ.ಮಿ. ಉದ್ದದ ರನ್ವೆ ಹೊಂದಿರುವ ಕಲಬುರಗಿ ವಿಮಾನ ನಿಲ್ದಾಣ ರಾಜ್ಯದ 2ನೇ ಹಾಗೂ ದೇಶದ 10ನೇ ಅತಿ ಉದ್ದದ ರನ್ವೆ ಇದಾಗಿದೆ.

ಕಲಬುರಗಿ ವಿಮಾನ ನಿಲ್ದಾಣ ಕೇಂದ್ರ ಸರ್ಕಾರದ ವಿಮಾನಯಾನ ಇಲಾಖೆಯ ಉಡಾನ್‌-3 ( ಉಡೇ ದೇಶ್‌ ಕಾ ಆಮ್‌ ಆದಮಿ) ಯೋಜನೆಯಡಿ ಆಯ್ಕೆಯಾಗಿದ್ದರಿಂದ ಸದರಿ ಯೋಜನೆಯಲ್ಲಿ ಕಲಬುರಗಿ- ಬೆಂಗಳೂರು ಟಿಕೆಟ್‌ ದರ 2, 850 ರು ನಿಂದ ಆರಂಭವಾಗಲಿದೆ. ಡೈನಾಮಿಕ್‌ ಫೇರ್‌ ಸಿಸ್ಟಂ ಇಲ್ಲಿಯೂ ಅನ್ವಯವಾಗುವುದರಿಂದ ‘ಉಡಾನ್‌ ಕೋಟಾ’ ಟಿಕೆಟ್‌ ಬುಕ್‌ ಆದ ನಂತರ ಉಳಿದೆಲ್ಲಾ ಟಿಕೆಟ್‌ಗಳಿಗೆ ಡೈನಾಮಿಕ್‌ ಫೇರ್‌ ಅನ್ವಯಿಸಲಿದೆ.

loader