AatmaNirbhar ಗೋಶಾಲೆ ನಿರ್ಮಾಣಕ್ಕೆ ಕೇಂದ್ರ ಅನುದಾನ: ಪ್ರಭು ಚವ್ಹಾಣ್
ಬೆಂಗಳೂರು(ಫೆ.25): ರಾಜ್ಯದಲ್ಲಿ ಆತ್ಮ ನಿರ್ಭರ(AatmaNirbhar) ಗೋಶಾಲೆಯ ಮಾದರಿ ನಿರ್ಮಾಣ ಮಾಡಲು ಕೇಂದ್ರ ಸಚಿವ ಪರಶೋತ್ತಮ್ ರೂಪಾಲಾ ಸಲಹೆ ನೀಡಿದ್ದಾರೆ ಎಂದು ರಾಜ್ಯ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್(Prabhu Chauhan) ಹೇಳಿದ್ದಾರೆ.
ಗುರುವಾರ ದೆಹಲಿಯಲ್ಲಿ ಕೇಂದ್ರ ಪಶುಸಂಗೋಪನೆ ಸಚಿವರ ಜೊತೆಗೆ ಸಭೆಯಲ್ಲಿ ಭಾಗವಹಿಸಿ ಬಳಿಕ ಮಾಹಿತಿ ನೀಡಿದರು. ಸದ್ಯ ರಾಜ್ಯದಲ್ಲಿ(Karnataka) ಪ್ರಾರಂಭ ಮಾಡಿರುವ ಜಿಲ್ಲೆಗೊಂದು ಗೋಶಾಲೆಯನ್ನು(Goshala) ಆತ್ಮ ನಿರ್ಭರ ಮಾಡಲು ವ್ಯವಸ್ಥಿತವಾಗಿ ಮಾದರಿ ನಿರ್ಮಾಣ ಮಾಡಿದಲ್ಲಿ ಅದಕ್ಕೆ ಅಗತ್ಯವಿರುವ ಎಲ್ಲ ಅನುದಾನ ನೀಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಗೋಶಾಲೆಗಳಲ್ಲಿ ದ್ರವ ಮತ್ತು ಘನ ರೂಪದ ರಸಗೊಬ್ಬರ ತಯಾರಿಕಾ ಘಟಕವನ್ನು ಪ್ರಾರಂಭಿಸಲು ಮನವಿ ಸಲ್ಲಿಸಿದ್ದು, ಇದಕ್ಕೆ ಅಂದಾಜು 20 ಕೋಟಿ ರು. ಅನುದಾನ(Grant) ನೀಡಲು ಚವ್ಹಾಣ್ ಅವರು ಕೋರಿದರು.
ರಾಜ್ಯದಲ್ಲಿ ಕೃಷಿ ಜೊತೆಗೆ ಪಶುಸಂಗೋಪನೆಯನ್ನು ಪರ್ಯಾಯ ಕೃಷಿಯಾಗಿ ನಡೆಸುತ್ತಿರುವ ಹಾಗೂ ಜಾನುವಾರು ಸಾಕಣೆಯಲ್ಲಿ ತೊಡಗಿದವರ ಜಾನುವಾರುಗಳು ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ಪಶುಸಂಗೋಪನೆ ಇಲಾಖೆಯಿಂದ ನೀಡಲಾಗುತ್ತಿರುವ ವಿಮಾ ಸೌಲಭ್ಯವನ್ನು ಹೆಚ್ಚಿಸಲು 100 ಕೋಟಿ ರು. ಅನುದಾನ ನೀಡಲು ಕೋರಲಾಗಿದೆ ಎಂದು ತಿಳಿಸಿದ ಸಚಿವರು
ಪಶುಪಾಲಕರಿಗೆ ಜಾನುವಾರುಗಳ ಸಾವಿನಿಂದ ಎದುರಾಗುವ ಆರ್ಥಿಕ ನಷ್ಟವನ್ನು ತಪ್ಪಿಸಿ ಪಶುಸಂಗೋಪನೆ ಇಲಾಖೆಯಿಂದ ಈ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಲಾಗುವುದು ಎಂದು ತಿಳಿಸಿದ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್