MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • Bhav 2025: ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮದಲ್ಲಿ 3 ದಿನಗಳ ಕಾಲ ನಡೆದ ಕಲೆ- ಸಂಸ್ಕೃತಿಯ ಮಹಾಕುಂಭಕ್ಕೆ ತೆರೆ

Bhav 2025: ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮದಲ್ಲಿ 3 ದಿನಗಳ ಕಾಲ ನಡೆದ ಕಲೆ- ಸಂಸ್ಕೃತಿಯ ಮಹಾಕುಂಭಕ್ಕೆ ತೆರೆ

ಭಾರತದ ಅತೀ ದೊಡ್ಡ ಕಲಾ ಮತ್ತು ಸಾಂಸ್ಕೃತಿಕ ಸಮ್ಮೇಳಣಕ್ಕೆ ತೆರೆ ಎಳೆಯಲಾಯಿತು ಕಲಾವಿದರು ತಮ್ಮ ಕಲೆಗಳನ್ನು ಪ್ರದರ್ಶಿಸಿ, ಕಲಿತು, ಆಂತರ್ಯದೊಳಗೆ ಹೊಕ್ಕುವ ಒಂದು ಅನುಪಮವಾದ ಸಮಾವೇಶ

2 Min read
Ravi Janekal
Published : Jan 26 2025, 08:31 PM IST
Share this Photo Gallery
  • FB
  • TW
  • Linkdin
  • Whatsapp
16

 94 ವರ್ಷಗಳ ವೀಣಾ  ವಿದ್ವಾನರಾದ ಆರ್. ವಿಶ್ವೇಶ್ವರನ್ ರವರು 2025ಯ ಕಲಾಸಾರಥಿ ಪ್ರಶಸ್ತಿಯನ್ನು ಪಡೆದಾಗ ಸಭಿಕರೆಲ್ಲರೂ ಎದ್ದು ನಿಂತು ಚಪ್ಪಾಳೆಗಳ ಸುರಿಮಳೆಯನ್ನು ಗೈದರು.ತಬಲಾ ದಂತಕಥೆಯಾದ ದಿವಂಗತ ಉಸ್ತಾದ್ ಝಾಖಿರ್ ಹುಸೇನ್ ರವರಿಗೆ ತಮ್ಮ ಶ್ರದ್ಧಾಂಜಲಿಯನ್ನು, ಭಾರತದ ಪ್ರಥಮ ಮಹಿಳಾ ವೃತ್ತಿಪರ ತಬಲಾವಾದಕಿಯಾದ ಅನುರಾಧ ಪಾಲ್ ರವರು ತಮ್ಮ ತಬಲಾವಾದನದ ಮೂಲಕ ಸಲ್ಲಿಸಿದರು. ದಿಲ್ಲಿ ದರ್ಬಾರ್ ನ ವುಸತ್ ಇಕ್ಬಾಲ್ ಖಾನ್ ರವರಿಂದ ಹೃದಯಂಗಮವಾದ ಸೂಫಿ ಹಾಡುಗಾರಿಕೆ ನಡೆಯಿತು. 

26

ಮರಾಠಿಯ ಖ್ಯಾತ ನಟಿ ಪ್ರಜಕ್ತಾ ಮಾಲಿಯವರು ಅದ್ಭುತವಾಗಿ ಮಹಾರಾಷ್ಟ್ರದ ಲಾವಣಿ ನೃತ್ಯವನ್ನು ಪ್ರದರ್ಶಿಸಿದರು.   ಇವೆಲ್ಲವನ್ನೂ ಭಾವ್ -ದಿ ಎಕ್ಸ್ಪ್ರೆಷನ್ಸ್ ಸಮ್ಮಿಟ್ 2025ಯ ಮೂರನೆಯ ಆವರ್ತನದಲ್ಲಿ ಕಾಣುವಂತಾಯಿತು. ವೈವಿಧ್ಯಮಯ ಪರಂಪರಾಗತವಾದ ಹಾಗೂ ಜನಪದ ಕಲಾರೂಪಗಳೊಡನೆ  ಜಾಗತಿಕ ಆಧ್ಯಾತ್ಮಿಕ ಗುರುಗಳಾದ, ಮಾನವತಾವಾದಿಯಾದ ಗುರುದೇವ್ ಶ್ರೀ ಶ್ರೀ ರವಿಶಂಕರರ ಗುರುವಾಣಿಯೂ ಬೆರೆತು, ನೃತ್ಯ, ಸಂಗೀತ, ನಾಟಕಗಳು ಇನ್ನಷ್ಟು ನಡೆಯಲಿ ಎಂದು ಹೃದಯಗಳು ಬಯಸಿದವು.   ಕಲಾವಿದರು ಹಾಗೂ ಗುರುದೇವರು ಕಲೆಗಳ ಬಗ್ಗೆ ಚರ್ಚೆಯನ್ನು ನಡೆಸಿದರು.

ಈ    ಸಂದರ್ಭದಲ್ಲಿ ಮಾತನಾಡುತ್ತಾ ಗುರುದೇವರು," ಒಳ್ಳೆಯ ರಸಿಕರಾಗುವುದೂ ಸಹ ಒಂದು ಕಲೆಯೇ. ಒತ್ತಡಗಳಿಂದ, ಚಿಂತೆಗಳಿಂದ ಮುಕ್ತವಾದಾಗ ಮಾತ್ರ ಕಲೆಯನ್ನು ಮೆಚ್ಚಲು ಸಾಧ್ಯ. ಯಾವುದೇ ಶಬ್ದದಲ್ಲಿ ತಲ್ಲೀನವಾದಾಗ ಮನಸ್ಸು ಹಾಗೆಯೇ ಪ್ರಶಾಂತವಾಗುತ್ತದೆ" ಎಂದರು. ಈ ಸಮಾವೇಶದ ವಿಶೇಷತೆಯೆಂದರೆ ರಾಜ್ಯದ ಅನುಪಮವಾದ ಹಾಗೂ ಜನಪದ ಕಲೆಯ ಕಲಾರ್ಪಣೆ. ಕರ್ನಾಟಕ ಜನಪದ ಅಕಾಡೆಮಿಯ ಪ್ರಥಮ ಲೈಂಗಿಕ ಅಲ್ಪಸಂಖ್ಯಾತ ಅಧ್ಯಕ್ಷೆಯಾದ ಪದ್ಮಶ್ರೀ ಮಂಜಮ್ಮ ಜೋಗತಿಯವರು ಸಭಿಕರಿಗೆ ದೈವೀ  ಭಕ್ತಿಗೆ ಪೂರ್ಣವಾಗಿ ಮುಡುಪಾದ ಜೋಗತಿ ಸಂಪ್ರದಾಯದ ಬಗ್ಗೆ ತಿಳಿಸಿದರು.

36

ಕುಚುಪುಡಿಯ ದಂತಕಥೆಯಾದ ಸುನಂದಾ ದೇವಿ, ಯಕ್ಷಗಾನದ ದಂತಕಥೆಯಾದ ಬನ್ನಂಜೆ ಸುವರ್ಣ, 88 ವರ್ಷಗಳ ಮೃದಂಗ ವಿದ್ವಾನ್ ವಿದ್ವಾನ್ ಎ. ವಿ. ಆನಂದ್, ಖ್ಯಾತ ಕೊರಿಯೋಗ್ರಾಫರ್ ಆದ , ನಟರಾದ, ಜನಪದ ನೃತ್ಯದ ತಜ್ಞರಾದ, ಸಂಶೋಧಕರಾದ ಸ್ನೇಹ ಕಪ್ಪನ ಈ ಸಮಾವೇಶದಲ್ಲಿ ಭಾಗವಹಿಸಿದರು. ಬೆಂಗಳೂರಿನ ಆಯನ ನೃತ್ಯ ಕಂಪನಿಯವರು ಫ್ಯೂಶನ್ ನರ್ತನವನ್ನು ಪ್ರದರ್ಶಿಸಿದರೂ. ಎನ್ ಎಸ್ ಡಿ ಬೆಂಗಳೂರಿನ ವಿದ್ಯಾರ್ಥಿಗಳು ಅವರು ಬಸವಣ್ಣನವರ ಮೇಲೆ ವಿಶೇಷ ನಾಟಕವನ್ನು  ನಡೆಸಿಕೊಟ್ಟರು.

ಆಧ್ಯಾತ್ಮಿಕತೆಯೊಡನೆ ಕಲೆ ಮತ್ತು ಪ್ರದರ್ಶನದ ಬೆಸುಗೆಯೇ ಭಾವ್-2025ಯ ಅನುಪಮತೆಯಾಗಿತ್ತು. ಎಲ್ಲಾ ಕಲಾವಿದರೂ ಸ್ವಲ್ಪ ಸಮಯವನ್ನು  ಮೀಸಲಿಟ್ಟು,  "ಸುದರ್ಶನ ಕ್ರಿಯೆಯನ್ನು " ಕಲಿತರು.  ದಿ ವರ್ಲ್ಡ್ ಫೋರಂ ಫಾರ್ ಆರ್ಟ್ ಆಂಡ್ ಕಲ್ಚರ್ ನ ನಿರ್ದೇಶಕಿಯಾದ ಶ್ರೀ ವಿದ್ಯಾ ವರ್ಚಸ್ವಿಯವರು, " ಕಳೆದ ನಾಲ್ಕು ದಶಕಗಳಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು , ಗುರುದೇವರ ದೃಷ್ಟಿಕೋನದಂತೆ, ಕಲೆಯು ಎಲ್ಲಾ ಜಾತಾಗಳ, ಧರ್ಮಗಳ, ಪಂಥಗಳ , ವಯಸ್ಸಿನ, ವಿವಿಧ ಅಭಾಪ್ರಾಯಗಳನ್ನುಳ್ಳ, ವಿವಿಧ ಆಸಕ್ತಿಗಳನ್ನುಳ್ಳ ಜನರನ್ನು ಹೇಗೆ ಏಕವಾಗಿಸಿ ಸಂಭ್ರಮಿಸಬಹುದು ಎಂದು ತೋರಿಸಿದೆ" ಎಂದರು.

46

 ಈ ವರ್ಷದ ಸಮಾವೇಶದಲ್ಲಿ ಶವು, ಭಾರತದ ಕಾಲಾತೀತವಾದ ಸಾಂಸ್ಕೃತಿಕ ಪರಂಪರೆಗೆ ತಮ್ಮದೇ ವಿಶೇಷ ಕೊಡುಗೆಯನ್ನು  ನೀಡಿರುವ ಲೈಂಗಿಕ ಅಲ್ಪಸಂಖ್ಯಾತ ಕಲಾವಿದರಿಗೆ ವಿಶೇಷ ಸ್ಥಾನವನ್ನು ಕಲ್ಪಿಸಿಕೊಡಲಾಯಿತು. ಪದ್ಮಶ್ರೀ ಮಂಜಮ್ಮ ಜೋಗತಿಯವರು, " ಭಾವ್ ನನಗೆ ಬೇರೆಯ ಪ್ರಪಂಚವನ್ನೇ ತೋರಿಸಿತು. ಧ್ಯಾನಗಳ  ನಂತರ ನನಗೆ ಬಹಳ ಸಂತೋಷವಾಯಿತು. ಗುರುದೇವ್ ಶ್ರೀ ಶ್ರೀ ರವಿಶಂಕರರು  ಕಲಾವಿದರನ್ನು, ಕಲಾ ಆರಾಧಕರನ್ನು , ಕಲಾಪೋಷಕರನ್ನು ಒಂದಾಗಿ ತಂದಿದ್ದಾರೆ. ಇದು ಸಮಾನತೆಯ ವೇದಿಕೆಯಾಗಿತ್ತು. ಇಲ್ಲಿ ಜಾತಿ ಮತ್ತು ಲಿಂಗ ಬೇಧವೇ ಇರಲಿಲ್ಲ. ನಾನು ಬೇರೆ ದೇಶದಲ್ಲಿ ಇರುವನೇನೋ ಎಂದು ಅನಿಸಿತು. ನನ್ನ ಅನಿಸಿಕೆಗಳನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ" ಎಂದರು.

56

ಭಾರತದ ಅತೀ ದೊಡ್ಡ ನೇರ ಕಲಾಪ್ರದರ್ಶನವಾದ " ಸೀತಾಚರಿತಂ" ಗೆ ಚಾಲನೆಯನ್ನು ನೀಡಲಾಯಿತು. ಇದರಲ್ಲಿ 500 ಕಲಾವಿದರು ಭಾಗವಹಿಸಲಿದ್ದು, 30 ನೃತ್ಯಗಳು, ಸಂಗೀತ ಮತ್ತು ಕಲಾರೂಪಗಳಿದ್ದು, ಈ ತಂಡವು 180 ದೇಶಗಳಿಗೆ ಪ್ರಯಾಣ ಮಾಡಲಿದೆ. ಕಾಲಾತೀತವಾದ ರಾಮಾಯಣದ 20  ವಿವಿಧ ಗ್ರಂಥಗಳಿಂದ ತಗೆದುಕೊಳ್ಳಲಾಗಿದ್ದು, ಅನೇಕ ಸ್ಥಳೀಯ ಭಾಷೆಗಳ ಹಾಡುಗಳನ್ನು ಹೊಂದಿದೆ. 

66

ಸಮಾವೇಶದಲ್ಲಿ ನೆರೆದಿದ್ದ 600 ಕಲಾವಿದರನ್ನು, ಕಲಾದಿಗ್ಗಜರನ್ನು, ಅರಳುತ್ತಿರುವ ಪ್ರತಿಭೆಗಳನ್ನು ಉದ್ದೇಶಿಸಿ ಮಾತನಾಡಿದ ಭಾರತ ಸರ್ಕಾರದ ಕೇಂದ್ರ ಪ್ರವಾಸಿ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಗಳಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರು, " ನನ್ನ ಎದುರು  ಕಲಾವಿದರ, ಸಾಧಕರ ಕುಂಭವೇ ಉಪಸ್ಥಿತವಾಗಿದೆ" ಎಂದರು.     ಭಾವ್ ಸಮಾವೇಶದ ಎರಡನೆಯ ದಿನದಂದು ಬೆಂಗಳೂರಿನ ದಕ್ಷಿಣದ ಸಂಸದರಾದ ಶ್ರೀ ತೇಜಸ್ವಿ ಸೂರ್ಯರವರು ಉಪಸ್ಥಿತರಾಗಿದ್ದರು.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಆರ್ಟ್ ಆಫ್ ಲಿವಿಂಗ್
ಹಬ್ಬ
ಭಾರತೀಯ ಸಂಸ್ಕೃತಿ
ನೃತ್ಯ
ಸಂಗೀತ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved