ರಾಜ್ಯದ ತುರ್ತು ಸ್ಪಂದನೆಗೆ 150 ವಾಹನ: ಸಂಕಷ್ಟಕ್ಕೆ ತುತ್ತಾದವರಿಗೆ 15 ನಿಮಿಷದಲ್ಲಿ ಪೊಲೀಸ್ ನೆರವು
ಬೆಂಗಳೂರು(ಜ.17): ರಾಜ್ಯದಲ್ಲಿ ತುರ್ತು ಸ್ಪಂದನಾ ಕರೆ (ಇಆರ್‌ಎಸ್ 112) ವಿಭಾಗಕ್ಕೆ ಸೇರ್ಪಡೆಗೊಂಡ 150 ಹೊಸ ವಾಹನಗಳಿಗೆ ವಿಧಾನಸೌಧದ ಮುಂಭಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹಸಿರು ನಿಶಾನೆ ತೋರಿಸಿದ್ದಾರೆ.

<p>2017ರಲ್ಲಿ ತುರ್ತು ಸೇವೆಗಳಿಗೆ ಡಯಲ್ 100 ನಿಂದ ಪ್ರೇರಣೆ ಪಡೆದು ಬೆಂಗಳೂರು ನಗರಕ್ಕೆ ಸಿಮೀತವಾಗಿ ‘ನಮ್ಮ 100’ ಆರಂಭಿಸಲಾಗಿತ್ತು. ‘ನಮ್ಮ 100’ ಅಡಿ 278 ತುರ್ತು ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಎರಡು ವರ್ಷಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಒನ್ ನೇಷನ್-ಒನ್ ನಂಬರ್’ ಅಡಿ 100 (ಪೋಲಿಸ್), 101 (ಅಗ್ನಿಶಾಮಕ), 103 (ಟ್ರಾಫಿಕ್), 108 (ಆ್ಯಂಬುಲೆನ್ಸ್), 109 (ಮಹಿಳಾ ದೌರ್ಜನ್ಯ), 1098 (ಮಕ್ಕಳ ಸಹಾಯವಾಣಿ) ಸಂಖ್ಯೆಗಳನ್ನು ಒಂದೇ ಸೂರಿನಡಿ ತರಲು 112 ಸಹಾಯವಾಣಿಯನ್ನು ಆರಂಭಿಸಿದ್ದಾರೆ. </p>
2017ರಲ್ಲಿ ತುರ್ತು ಸೇವೆಗಳಿಗೆ ಡಯಲ್ 100 ನಿಂದ ಪ್ರೇರಣೆ ಪಡೆದು ಬೆಂಗಳೂರು ನಗರಕ್ಕೆ ಸಿಮೀತವಾಗಿ ‘ನಮ್ಮ 100’ ಆರಂಭಿಸಲಾಗಿತ್ತು. ‘ನಮ್ಮ 100’ ಅಡಿ 278 ತುರ್ತು ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಎರಡು ವರ್ಷಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಒನ್ ನೇಷನ್-ಒನ್ ನಂಬರ್’ ಅಡಿ 100 (ಪೋಲಿಸ್), 101 (ಅಗ್ನಿಶಾಮಕ), 103 (ಟ್ರಾಫಿಕ್), 108 (ಆ್ಯಂಬುಲೆನ್ಸ್), 109 (ಮಹಿಳಾ ದೌರ್ಜನ್ಯ), 1098 (ಮಕ್ಕಳ ಸಹಾಯವಾಣಿ) ಸಂಖ್ಯೆಗಳನ್ನು ಒಂದೇ ಸೂರಿನಡಿ ತರಲು 112 ಸಹಾಯವಾಣಿಯನ್ನು ಆರಂಭಿಸಿದ್ದಾರೆ.
<p>ಸಂಕಷ್ಟದಲ್ಲಿ ಸಿಲುಕಿದವರಿಗೆ, ದೌರ್ಜನ್ಯಕ್ಕೊಳಗಾದವರ ರಕ್ಷಣೆಗೆ 15 ನಿಮಿಷದೊಳಗೆ ಪೊಲೀಸರ ನೆರವು ಸಿಗಲಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.</p>
ಸಂಕಷ್ಟದಲ್ಲಿ ಸಿಲುಕಿದವರಿಗೆ, ದೌರ್ಜನ್ಯಕ್ಕೊಳಗಾದವರ ರಕ್ಷಣೆಗೆ 15 ನಿಮಿಷದೊಳಗೆ ಪೊಲೀಸರ ನೆರವು ಸಿಗಲಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.
<p>ಸಂತ್ರಸ್ತರ ನೋವಿಗೆ ಸ್ಪಂದಿಸಲು ವಾಹನಗಳನ್ನು ಹೆಚ್ಚಿಸುವಂತೆ ಸರ್ಕಾರ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇಂದು ತುರ್ತು ಸ್ಪಂದನಾ ವಿಭಾಗದಲ್ಲಿ ಹೊಸದಾಗಿ ಕಾರ್ಯಾಚರಣೆ ಆರಂಭಿಸಲಿರುವ 150 ವಾಹನಗಳಿಗೆ ಕೇಂದ್ರ ಗೃಹ ಸಚಿವರು ಹಸಿರು ನಿಶಾನೆ ತೋರಿಸಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 734 ಇಆರ್‌ಎಸ್‌ಎಸ್ ವಾಹನಗಳು 365 ದಿನಗಳು 24*7 ಗಂಟೆ ಕಾರ್ಯ ನಿರ್ವಹಿಸುತ್ತಿವೆ ಎಂದು ಪ್ರವೀಣ್‌ಸೂದ್ ಹೇಳಿದರು.</p>
ಸಂತ್ರಸ್ತರ ನೋವಿಗೆ ಸ್ಪಂದಿಸಲು ವಾಹನಗಳನ್ನು ಹೆಚ್ಚಿಸುವಂತೆ ಸರ್ಕಾರ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇಂದು ತುರ್ತು ಸ್ಪಂದನಾ ವಿಭಾಗದಲ್ಲಿ ಹೊಸದಾಗಿ ಕಾರ್ಯಾಚರಣೆ ಆರಂಭಿಸಲಿರುವ 150 ವಾಹನಗಳಿಗೆ ಕೇಂದ್ರ ಗೃಹ ಸಚಿವರು ಹಸಿರು ನಿಶಾನೆ ತೋರಿಸಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 734 ಇಆರ್‌ಎಸ್‌ಎಸ್ ವಾಹನಗಳು 365 ದಿನಗಳು 24*7 ಗಂಟೆ ಕಾರ್ಯ ನಿರ್ವಹಿಸುತ್ತಿವೆ ಎಂದು ಪ್ರವೀಣ್‌ಸೂದ್ ಹೇಳಿದರು.
<p>ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ, ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.</p>
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ, ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.