ಬುರ್ಖಾ ಧರಿಸಿ ಸೌದಿಗೆ ತೆರಳಿದ RCB ಮೆಂಟರ್ ಸಾನಿಯಾ, 'ಗಂಡ ಎಲ್ಲಮ್ಮ..' ಎಂದು ಕೇಳಿದ ಫ್ಯಾನ್ಸ್!
ಟೆನಿಸ್‌ನಿಂದ ನಿವೃತ್ತಿಯಾದ ಬಳಿಕ ಆರ್‌ಸಿಬಿ ತಂಡದ ಮೆಂಟರ್ ಆಗಿ ನೇಮಕವಾಗಿದ್ದ ಸಾನಿಯಾ ಮಿರ್ಜಾ ಇತ್ತೀಚೆಗೆ ನಾಪತ್ತೆಯಾಗಿದ್ದರು. ಆದರೆ, ಅವರು ಮದೀನಾಕ್ಕೆ ಉಮ್ರಾಹ್‌ಗೆ ತೆರಳಿದ್ದರು ಅನ್ನೋದು ಅವರ ಇನ್ಸ್‌ಟಾಗ್ರಾಮ್ ಪೋಸ್ಟ್‌ಗಳಿಂದ ಖಚಿತವಾಗಿದೆ.
ಟೆನಿಸ್ ತಾರೆ ಸಾನಿಯಾ ಮಿರ್ಜಾ ಕುಟುಂಬದೊಂದಿಗೆ ಸೌದಿ ಅರೇಬಿಯಾದ ಮದೀನಾಕ್ಕೆ ತೆರಳಿದ್ದಾರೆ. ರಂಜಾನ್ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಕುಟುಂಬ ಸಮೇತ ಅವರು ಮದೀನಾಕ್ಕೆ ತೆರಳಿದ್ದಾರೆ.
ಆರ್‌ಸಿಬಿ ತಂಡದ ಮೆಂಟರ್ ಆಗಿ ನೇಮಕವಾಗಿದ್ದ ಸಾನಿಯಾ ಮಿರ್ಜಾ, ತಂಡ ವುಮೆನ್ಸ್ ಪ್ರೀಮಿಯರ್ ಲೀಗ್‌ನ ಲೀಗ್ ಹಂತದಲ್ಲಿಯೇ ಹೊರಬಿದ್ದ ಬಳಿಕ ಎಲ್ಲೂ ಕಾಣಿಸಿಕೊಂಡಿರಲಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ತಾವು ಸೌದಿ ಅರೇಬಿಯಾದಲ್ಲಿರುವ ಚಿತ್ರಗಳನ್ನು ಸಾನಿಯಾ ಮಿರ್ಜಾ ಹಂಚಿಕೊಂಡಿದ್ದಾರೆ. ಮಗ ಇಜಾನ್ ಮಿರ್ಜಾ ಮಲೀಕ್ ಹಾಗೂ ತಂಗಿಯ ಮಗಳೊಂದಿಗೆ ಅವರ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ.
ಸಾನಿಯಾ ಮಿರ್ಜಾ ಬುರ್ಖಾ ಧರಿಸಿ ಕಾಣಿಸಿಕೊಂಡಿರುವ ಬಹುಶಃ ಮೊದಲ ಚಿತ್ರಗಳು ಇದಾಗಿದೆ. ಅವರು ಚಿತ್ರವನ್ನು ಪೋಸ್ಟ್ ಮಾಡುತ್ತಿದ್ದಂತೆ ಹೆಚ್ಚಿನವರು ಸಾನಿಯಾಗೆ ಪ್ರಶ್ನೆ ಮಾಡಿದ್ದಾರೆ.
ಬಹುತೇಕ ಎಲ್ಲಾ ಚಿತ್ರಗಳಲ್ಲಿ ಅಭಿಮಾನಿಗಳು ಇಡೀ ನಿಮ್ಮ ಫ್ಯಾಮಿಲಿ ಇರುವುದು ಖುಷಿಯ ವಿಚಾರ. ಆದರೆ, ನಿನ್ನ ಗಂಡ ಶೋಯೆಬ್ ಮಲೀಕ್ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ.
ಪುತ್ರ ಇಜಾನ್ ಮಿರ್ಜಾ ಮಲೀಕ್ ಜೊತೆ ಸಾನಿಯಾ ಮಿರ್ಜಾ ಬುರ್ಖಾ ಧರಿಸಿ ತೆಗೆಸಿಕೊಂಡಿರುವ ಚಿತ್ರ ಎಲ್ಲಡೆ ವೈರಲ್ ಆಗುತ್ತಿದೆ.
ಸಾನಿಯಾ ಮಿರ್ಜಾ ಅವರ ತಂದೆ ಇಮ್ರಾನ್ ಮಿರ್ಜಾ, ತಾಯಿ ನಸೀಂ ಮಿರ್ಜಾ, ತಂಗಿ ಅನಮ್ ಮಿರ್ಜಾ ಹಾಗೂ ಆಕೆಯ ಪತಿ ಮತ್ತು ಮೊಹಮದ್ ಅಜರುದ್ದೀನ್ ಅವರ ಪುತ್ರ ಮೊಹಮದ್ ಅಸಾದುದ್ದೀನ್ ಕೂಡ ಪ್ರವಾಸ ಕೈಗೊಂಡಿದ್ದಾರೆ.
ಸಾನಿಯಾ ಮಿರ್ಜಾ ಅವರ ತಂಗಿ ಅನಮ್ ಮಿರ್ಜಾ ಮಗಳೊಂದಿಗೆ ತೆಗೆಸಿಕೊಂಡಿರುವ ಚಿತ್ರವನ್ನು ಕೂಡ ತಮ್ಮ ಇನ್ಸ್‌ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ.
'ಅಲ್ಲಾ ನಮ್ಮೆಲ್ಲರ ಪ್ರಾರ್ಥಗಳನ್ನು ಒಪ್ಪಿಕೊಳ್ಳಲಿ..' ಎಂದು ಸಾನಿಯಾ ಮಿರ್ಜಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಸಾನಿಯಾ ಮಿರ್ಜಾ ಅವರು ಪೋಸ್ಟ್ ಮಾಡಿದ ಚಿತ್ರಗಳಿಗೆ ಕ್ರಿಕೆಟಿಗ ಇರ್ಫಾನ್ ಪಠಾಣ್, ನಟಿ ಹುಮಾ ಖುರೇಷಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಹೆಚ್ಚಿನವರು ಸಾನಿಯಾ ಅವರ ಫೋಟೋಗಳಿಗೆ ;ಶೋಯೆಬ್ ಮಲೀಕ್' ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ. ನಿಮ್ಮ ಇಡೀ ಕುಟುಂಬವಿದೆ ಆದರೆ, ಮಲೀಕ್ ಅವರು ಎಲ್ಲಿ ಎಂದು ಕೇಳಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ಬಂದ ಸಾಕಷ್ಟು ವರದಿಗಳಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲೀಕ್ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಇದನ್ನು ಇಬ್ಬರೂ ಖಚಿತಪಡಿಸಿಲ್ಲ.