- Home
- Sports
- ಮತ್ತೆ ಜೋಕೋ ಟೆನಿಸ್ ಆಡ್ತಾರಾ? ಸೋಲಿನ ಬೆನ್ನಲ್ಲೇ ನಿವೃತ್ತಿ ಬಗ್ಗೆ ಅಚ್ಚರಿ ಅಪ್‌ಡೇಟ್ ಕೊಟ್ಟ ಟೆನಿಸ್ ಲೆಜೆಂಡ್!
ಮತ್ತೆ ಜೋಕೋ ಟೆನಿಸ್ ಆಡ್ತಾರಾ? ಸೋಲಿನ ಬೆನ್ನಲ್ಲೇ ನಿವೃತ್ತಿ ಬಗ್ಗೆ ಅಚ್ಚರಿ ಅಪ್‌ಡೇಟ್ ಕೊಟ್ಟ ಟೆನಿಸ್ ಲೆಜೆಂಡ್!
ಲಂಡನ್: ಟೆನಿಸ್ ದಂತಕಥೆ ನೋವಾಕ್ ಜೋಕೋವಿಚ್ ಇದೀಗ 2025ರ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೂರ್ನಿಯ ಸೆಮಿಫೈನಲ್‌ನಲ್ಲಿಯೇ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಟೆನಿಸ್ ಭವಿಷ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಟೆನಿಸ್ ದಂತಕಥೆ ಸರ್ಬಿಯಾದ ನೋವಾಕ್ ಜೋಕೋವಿಚ್ ಇದೀಗ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಸೆಮೀಸ್‌ನಲ್ಲೇ ತನ್ನ ಅಭಿಯಾನ ಮುಗಿಸಿದ್ದಾರೆ. ಇದರ ಬೆನ್ನಲ್ಲೇ ಜೋಕೋ ಟೆನಿಸ್‌ಗೆ ಗುಡ್‌ಬೈ ಹೇಳಲಿದ್ದಾರೆ ಎನ್ನುವ ಗಾಳಿಸುದ್ದಿಗಳು ಹರಿದಾಡುತ್ತಿವೆ.
ಇದೀಗ ಟೆನಿಸಿಗ ನೋವಾಕ್ ಜೋಕೋವಿಚ್ ಈ ಬಗ್ಗೆ ಮೊದಲ ಸಲ ಪ್ರತಿಕ್ರಿಯೆ ನೀಡಿದ್ದು, ತಾವು ಸದ್ಯಕ್ಕೆ ನಿವೃತ್ತಿ ಪಡೆಯುವುದಿಲ್ಲ ಎಂದು ಖಚಿತಪಡಿಸಿದ್ದಾರೆ.
38 ವರ್ಷದ ಜೋಕೋವಿಚ್ ಕನಿಷ್ಠ ಇನ್ನೊಂದು ವಿಂಬಲ್ಡನ್ ಆಡುವ ಗುರಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.
2024ರ ವಿಂಬಲ್ಡನ್ ಫೈನಲ್‌ನಲ್ಲಿ ಎಡವಿದ್ದ ಜೋಕೋ, ಈ ಬಾರಿ ಸೆಮೀಸ್‌ನಲ್ಲೇ ಮುಗ್ಗರಿಸಿದ್ದಾರೆ.
‘ಖಂಡಿತವಾಗಿಯೂ ಕನಿಷ್ಠ ಇನ್ನೊಂದು ಬಾರಿ ವಿಂಬಲ್ಡನ್‌ಗೆ ಬರಲಿದ್ದೇನೆ’ ಎಂದು ಜೋಕೋವಿಚ್ ಹೇಳಿದ್ದಾರೆ.
ಜೋಕೋವಿಚ್ ಸೆಮೀಸ್‌ನಲ್ಲಿ ವಿಶ್ವ ನಂ.1 ಟೆನಿಸಿಗ ಇಟಲಿಯ ಯಾನ್ನಿಕ್ ಸಿನ್ನರ್ ವಿರುದ್ಧ 3-6, 3-6, 4-6 ನೇರ ಸೆಟ್‌ಗಳಲ್ಲಿ ಸೋಲುಂಡರು.
ನೋವಾಕ್ ಜೋಕೋವಿಚ್ ಈ ವರ್ಷ ಆಡಿರುವ ಮೂರೂ ಗ್ರ್ಯಾನ್ ಸ್ಲಾಂಗಳಲ್ಲಿ ಸೆಮೀಸ್‌ನಲ್ಲೇ ಸೋತಿದ್ದಾರೆ.
2023ರ ಯುಎಸ್ ಓಪನ್ ಗೆಲ್ಲುವ ಮೂಲಕ 24 ಗ್ರ್ಯಾನ್ ಸ್ಲಾಂ ಪ್ರಶಸ್ತಿ ಪೂರೈಸಿದ್ದ ಜೋಕೋವಿಚ್‌ಗೆ ಆ ಬಳಿಕ ಮತ್ತೊಂದು ಪ್ರಶಸ್ತಿ ಜಯಿಸಲು ಸಾಧ್ಯವಾಗಿಲ್ಲ.