MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • 26ನೇ ವಸಂತಕ್ಕೆ ಕಾಲಿಟ್ಟ ಪವನ್ ಶೆರಾವತ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

26ನೇ ವಸಂತಕ್ಕೆ ಕಾಲಿಟ್ಟ ಪವನ್ ಶೆರಾವತ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

ಬೆಂಗಳೂರು: ಪವನ್ ಕುಮಾರ್ ಶೆರಾವತ್ ಎನ್ನುವ ಹೆಸರು ಯಾವ ಕಬಡ್ಡಿ ಅಭಿಮಾನಿಗೆ ಗೊತ್ತಿಲ್ಲ ಹೇಳಿ. ತಮ್ಮ ಅದ್ಭುತ ರೈಡಿಂಗ್ ಎದುರಾಳಿ ಡಿಫೆನ್ಸ್ ಪಾಳಯದಲ್ಲಿ ನಡುಕ ಹುಟ್ಟಿಸುತ್ತಾ ಬಂದಿರುವ ಪವನ್ ಶೆರಾವತ್ ಇಂದು(ಜುಲೈ 09-2022) ತಮ್ಮ 26ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಪವನ್ ಶೆರಾವತ್ ಕುರಿತಾದ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.Huttu habbadha shubashayagalu! 🥳Here's wishing the heart of Namma #BullSquad, Pawan Sehrawat a very Happy Birthday! 🍰🤩#HappyBirthday #FullChargeMaadi #BengaluruBulls pic.twitter.com/zbvrWfUfW9— Bengaluru Bulls (@BengaluruBulls) July 9, 2022

2 Min read
Author : Naveen Kodase
| Updated : Jul 09 2022, 05:03 PM IST
Share this Photo Gallery
  • FB
  • TW
  • Linkdin
  • Whatsapp
17
Bengaluru bulls pawan Sherawat

Bengaluru bulls pawan Sherawat

ಪವನ್ ಕುಮಾರ್ ಶೆರಾವತ್ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತಂಡದ ಪರ ಅಮೋಘ ಪ್ರದರ್ಶನದ ಮೂಲಕ ಕಬಡ್ಡಿ ಅಭಿಮಾನಿಗಳ ಮನೆ ಮಾತಾಗಿದ್ದಾರೆ. ಪವನ್ ಶೆರಾವತ್‌ಗೆ ಹೈ ಪ್ಲೈಯರ್ ಎನ್ನುವ ನಿಕ್‌ ನೇಮ್‌ ಕೂಡಾ ಇದೆ.

27

ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ತಂಡದ ಪರ ಅದ್ಭುತ ಪ್ರದರ್ಶನ ತೋರುವ ಮೂಲಕ ಪವನ್ ಶೆರಾವತ್ ಭಾರತ ರಾಷ್ಟ್ರೀಯ ತಂಡದಲ್ಲೂ ಸ್ಥಾನ ಪಡೆದು ಮಿಂಚಿದ್ದಾರೆ. ಇನ್ನು ಭಾರತ ಹಾಗೂ ಬೆಂಗಳೂರು ಬುಲ್ಸ್ ಮಾತ್ರವಲ್ಲದೇ ಇಂಡಿಯನ್ ರೈಲ್ವೇಸ್‌ ತಂಡದ ಪರವೂ ಶೆರಾವತ್ ಕಬಡ್ಡಿಯಾಡಿ ತೊಡೆತಟ್ಟಿದ್ದಾರೆ.

37

2015ರಲ್ಲಿ ಬೆಂಗಳೂರು ಬುಲ್ಸ್ ಪರ ಪ್ರೊ ಕಬಡ್ಡಿ ಲೀಗ್‌ಗೆ ಪಾದಾರ್ಪಣೆ ಮಾಡಿದ್ದ ಪವನ್ ಶೆರಾವತ್, ಮೂರನೇ ಅವೃತ್ತಿಯ ಪಿಕೆಎಲ್‌ನಲ್ಲಿ 45 ರೈಡಿಂಗ್ ಅಂಕ ಗಳಿಸಿ, ಬುಲ್ಸ್ ಪರ ಯಶಸ್ವಿ ರೈಡರ್ ಎನಿಸಿದ್ದರು. ಮರು ವರ್ಷ ಪವನ್ ಹೆಚ್ಚು ಕಮಾಲ್ ಮಾಡಲು ಸಾಧ್ಯವಾಗಿರಲಿಲ್ಲ. 2016ರಲ್ಲಿ ಪವನ್‌ ಶೆರಾವತ್ 10 ಪಂದ್ಯಗಳಿಂದ 11 ಅಂಕಗಳನ್ನಷ್ಟೇ ಗಳಿಸಲು ಯಶಸ್ವಿಯಾಗಿದ್ದರು.

47

ಇನ್ನು 2017ರ ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ಪವನ್ ಕುಮಾರ್ ಶೆರಾವತ್ ಅವರನ್ನು ಗುಜರಾತ್ ಫಾರ್ಚೂನ್‌ಜೈಂಟ್ಸ್‌ ತಂಡವು ಖರೀದಿಸಿತ್ತು. ಆದರೆ ಬಹುತೇಕ ಪಂದ್ಯಗಳಲ್ಲಿ ಪವನ್ ಬೆಂಚ್ ಕಾಯಿಸಿದ್ದರು.

57

2018ರಲ್ಲಿ ಮತ್ತೆ ಬೆಂಗಳೂರು ಬುಲ್ಸ್ ತಂಡಕ್ಕೆ ಮರಳಿದ ಪವನ್ ಕುಮಾರ್ ಶೆರಾವತ್‌ಗೆ ತಿರುಗಿ ನೋಡುವ ಪ್ರಮೆಯವೇ ಬರಲಿಲ್ಲ. ಪ್ರೊ ಕಬಡ್ಡಿ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರುವ ಮೂಲಕ ಬೆಂಗಳೂರು ಬುಲ್ಸ್ ತಂಡವನ್ನು ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. 2018ರಲ್ಲಿ ಪವನ್ ಶೆರಾವತ್ ಪಿಕೆಎಲ್ ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರ ಎನ್ನುವ ಗೌರವಕ್ಕೆ ಪಾತ್ರರಾಗಿದ್ದರು. ಇದಷ್ಟೇ ಅಲ್ಲದೇ ಗುಜರಾತ್ ಜೈಂಟ್ಸ್ ವಿರುದ್ದದ ಪಂದ್ಯದಲ್ಲಿ ಬರೋಬ್ಬರಿ 22 ಅಂಕ ಗಳಿಸುವ ಮೂಲಕ, ಫೈನಲ್‌ ಪಂದ್ಯದಲ್ಲಿ ಅತಿಹೆಚ್ಚು ಅಂಕಗಳಿಸಿದ ಆಟಗಾರ ಎನ್ನುವ ದಾಖಲೆಯನ್ನು ನಿರ್ಮಿಸಿದ್ದಾರೆ.

67

ಭಾರತ ತಂಡದ ಸ್ಟಾರ್ ಕಬಡ್ಡಿ ಆಟಗಾರ ಆಗಿರುವ ಪವನ್ ಶೆರಾವತ್, 13ನೇ ಸೌಥ್-ಏಷ್ಯನ್‌ ಗೇಮ್ಸ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಭಾರತ ತಂಡವು ಚಿನ್ನದ ಪದಕ ಗೆಲ್ಲುವಲ್ಲಿ ಮಹತ್ತರ ಪಾತ್ರವಹಿಸಿದ್ದರು.

77
Bengaluru Bulls

Bengaluru Bulls

ತಮ್ಮ ಅದ್ಭುತ ಪ್ರದರ್ಶನದ ಮೂಲಕ ಕಬಡ್ಡಿ ಅಭಿಮಾನಿಗಳನ್ನು ರಂಜಿಸುತ್ತಿರುವ ಶೆರಾವತ್‌ಗೆ ಏಷ್ಯಾನೆಟ್ ಸುವರ್ಣನ್ಯೂಸ್‌. ಕಾಂ ಬಳಗದಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಪವನ್‌ ನಿಮ್ಮಿಂದ ಮತ್ತಷ್ಟು ಅತ್ಯುತ್ತಮ ಪ್ರದರ್ಶನ ಮೂಡಿ ಬರಲಿ ಎಂದು ಹಾರೈಸುತ್ತಿದ್ದೇವೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಬೆಂಗಳೂರು ಬುಲ್ಸ್
ಕಬಡ್ಡಿ

Latest Videos
Recommended Stories
Recommended image1
ರೀಲ್ಸ್ ಮಾಡಲು ಹೋಗಿ ₹70,000 ಮೌಲ್ಯದ ಉಂಗುರ ಕಳೆದುಕೊಂಡ ಜೋಡಿ; ಮ್ಯಾಚ್ ಆರಂಭಕ್ಕೂ ಮುನ್ನ 2 ಗಂಟೆ ಹುಡುಕಾಟ!
Recommended image2
ವೈಭವ್ ಸೂರ್ಯವಂಶಿ ಎಂಬ ಬಿರುಗಾಳಿಗೆ ಬ್ರೇಕ್ ಹಾಕಿದ Praful Hinge ಯಾರು?; SRH ಹುಡುಕಿದ ರಿಯಲ್ ಡೈಮಂಡ್ ಹಿನ್ನಲೆ ಏನು?
Recommended image3
ಗೋಲ್ಡನ್‌ ಡಕ್‌ಗೆ ಔಟಾದ ವೈಭವ್‌ ಸೂರ್ಯವಂಶಿ: 'Oh f**k' ಎಂದು ಸಂಭ್ರಮಿಸಿದ ಕಾವ್ಯಾ ಮಾರನ್‌, ವಿಡಿಯೋ ವೈರಲ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved