- Home
- Entertainment
- Sandalwood
- ಬರ್ತ್ ಡೇ ಸೆಲೆಬ್ರೇಷನ್’ಗಾಗಿ ಮಾಲ್ಡೀವ್ಸ್ ಗೆ ಹಾರಿದ ಹರಿಪ್ರಿಯಾ-ವಸಿಷ್ಠ…ಗುಡ್ ನ್ಯೂಸ್ ಇದ್ಯಾ ಕೇಳ್ತಿದ್ದಾರೆ ಫ್ಯಾನ್ಸ್
ಬರ್ತ್ ಡೇ ಸೆಲೆಬ್ರೇಷನ್’ಗಾಗಿ ಮಾಲ್ಡೀವ್ಸ್ ಗೆ ಹಾರಿದ ಹರಿಪ್ರಿಯಾ-ವಸಿಷ್ಠ…ಗುಡ್ ನ್ಯೂಸ್ ಇದ್ಯಾ ಕೇಳ್ತಿದ್ದಾರೆ ಫ್ಯಾನ್ಸ್
ಚಂದನವನದ ಮುದ್ದಾದ ಜೋಡಿಗಳಾದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಬರ್ತ್ ಡೇ ಸೆಲೆಬ್ರೇಶನ್ ಗಾಗಿ ಮಾಲ್ಡೀವ್ಸ್ ಗೆ ಹಾರಿದ್ದು, ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಚಂದನವನದ ಮುದ್ದಾದ ಸೆಲೆಬ್ರಿಟಿ ಜೋಡಿಗಳು ಅಂದ್ರೆ ಅದು ಹರಿಪ್ರಿಯಾ (Haripriya) ಮತ್ತು ವಸಿಷ್ಠ ಸಿಂಹ. ಈ ಜೋಡಿ ಹೆಚ್ಚಾಗಿ ಕೈ ಕೈ ಹಿಡಿದು ಎಲ್ಲೆಡೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಜೋಡಿ ಸ್ಪೆಷಲ್ ಡೇ ಸೆಲೆಬ್ರೇಟ್ ಮಾಡೋದಕ್ಕಾಗಿ ವಿದೇಶಕ್ಕೆ ಹಾರಿದ್ದು, ಅಲ್ಲಿನ ಮುದ್ದಾದ ಫೋಟೊಗಳನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಅಕ್ಟೋಬರ್ 29ರಂದು ಹರಿಪ್ರಿಯಾ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ತಮ್ಮ ಹುಟ್ಟುಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಲು ಈ ಜೋಡಿ ಮಾಲ್ಡೀವ್ಸ್ ಗೆ ಹಾರಿದೆ. ಹರಿಪ್ರಿಯಾ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಏರ್ ಪೋರ್ಟ್ ನ ಫೋಟೊಗಳು, ಜೊತೆಯಾಗಿರುವ ಫೋಟೊಗಳು, ನೀರಿನ ಮಧ್ಯದಲ್ಲಿ ಸಾಗುವ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಫೋಟೊ ಮತ್ತು ವಿಡೀಯೋಗಳನ್ನು ಶೇರ್ ಮಾಡಿರುವ ಹರಿಪ್ರಿಯಾ ಬರ್ತ್ ಡೇ ವೀಕ್ (birthday week) ಇಲ್ಲಿದೆ, ಸೆಲೆಬ್ರೇಷನ್ ಶುರುವಾಗಿದೆ. ನಾವು ಹೋಗುತ್ತಿರುವುದು ಎಂದು ಬರೆದು ಪ್ರಶ್ನಾರ್ಥಕ ಚಿಹ್ನೆ ಹಾಕಿದ್ದಾರೆ. (Birthday week is here & the celebration begins, En route to …..!? ) ತಾವು ಯಾವ ತಾಣಕ್ಕೆ ಹೋಗ್ತಿರೋದು ಅನ್ನೋದನ್ನು ಈ ಜೋಡಿ ರಿವೀಲ್ ಮಾಡಿಲ್ಲ.
ಆದರೆ ಹರಿಪ್ರಿಯಾ ಮತ್ತು ವಸಿಷ್ಠ (VAsistha Simha) ಶೇರ್ ಮಾಡಿರುವಂತಹ ಫೋಟೊಗಳನ್ನು ನೋಡಿದ್ರೆ ಇವರು ಮಾಲ್ಡೀವ್ಸ್ ಗೆ ಹಾರಿದಂತೆ ಕಾಣಿಸ್ತಿದೆ. ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ನ ನವ ವಧುವರರಾದ ತರುಣ್ ಸುಧೀರ್ ಮತ್ತು ಸೋನಲ್ ಮಾಲ್ಡೀವ್ಸ್ ನಲ್ಲಿ ಹನಿಮೂನ್ ಮುಗಿಸಿ ಬಂದಿದ್ದರು. ಇದೀಗ ವಸಿಷ್ಠ- ಹರಿಪ್ರಿಯಾ ಕೂಡ ಅಲ್ಲಿಗೆ ಹಾರಿದಂತಿದೆ.
ಫೋಟೊ ನೋಡಿ ಅಭಿಮಾನಿಗಳು ಸಹ ನೀವು ಮಾಲ್ಡೀವ್ಸ್‌ಗೆ ಹೋಗಿದ್ದೀರ,ಫೋಟೊ ನೋಡಿದ್ರೆ ಗೊತ್ತಾಗುತ್ತೆ ಅಂದಿದ್ದಾರೆ. ಇನ್ನೊಬ್ರು ಹರಿಪ್ರಿಯ ಗರ್ಭಿಣಿ ಅಂತ ಹೇಳಿದ್ದಾರೆ. ಇನ್ನೂ ಕೆಲವರು ಬೇಗ ಗುಡ್ ನ್ಯೂಸ್ ಕೊಡಿ ಅಂತಾನು ಹೇಳಿದ್ದಾರೆ. ಮತ್ತೆ ಹೆಚ್ಚಿನ ಅಭಿಮಾನಿಗಳು ಹರಿಪ್ರಿಯಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
ಹರಿಪ್ರಿಯಾ ಹಾಗೂ ವಸಿಷ್ಠ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ತಮ್ಮ ಪ್ರೀತಿಯನ್ನು ಗುಟ್ಟಾಗಿ ಇಟ್ಟಿದ್ದರು. ಇಬ್ಬರು ಅಧಿಕೃತವಾಗಿ ಅನೌನ್ಸ್ ಮಾಡಬೇಕು ಎಂದು ಅಂದುಕೊಂಡಿರುವಾಗಲೇ ಅಭಿಮಾನಿಗಳಿಗೆ ಇವರಿಬ್ಬರ ಪ್ರೀತಿ ಬಗ್ಗೆ ಗೊತ್ತಾಗಿ ಭಾರಿ ಚರ್ಚೆಯಾಗಿತ್ತು. ನಂತರ ಇಬ್ಬರು ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡು, 26 ಜನವರಿ 2023 ರಲ್ಲಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಮದುವೆ ನಂತರ ಹರಿಪ್ರಿಯಾ ಹೊಸ ಯೂಟ್ಯೂಬ್ ಆರಂಭಿಸಿದ್ದು, ಅದರಲ್ಲಿ ಅಡುಗೆ, ಸಿನಿಮಾ, ಗಾರ್ಡನಿಂಗ್ ಬಗ್ಗೆ ಮಾಹಿತಿ ನೀಡುತ್ತಾರೆ, ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಬೆಲ್ ಬಾಟಮ್ 2, ಲಗಾಮ್ ಹಾಗೂ ಮತ್ತೆರಡು ಸಿನಿಮಾಗಳಲ್ಲಿ ಹರಿಪ್ರಿಯಾ ಬ್ಯುಸಿಯಾಗಿದ್ದಾರೆ. ಇನ್ನು ವಸಿಷ್ಠ ಸಿಂಹ ಭೈರತಿ ರಣಗಲ್, ತೆಲುಗಿನ ಓದೆಲಾ 2 ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.