ಸಿನಿಮಾ ಇಂಡಸ್ಟ್ರಿಯಲ್ಲಿ ನಗುವೇ ಇಲ್ಲ, ಬರೀ ಟ್ರಾಫಿಕ್ ಜಾಮ್: ರವಿಚಂದ್ರನ್
ವಾರಕ್ಕೆ 10 ಸಿನಿಮಾ ರಿಲೀಸ್ ಆದರೆ ತಿಂಗಳಿಗೆ 40 ಸಿನಿಮಾ, ಟ್ರಾಫಿಕ್ ಜಾಮ್ ಆಗೋಯ್ತು. ಇವುಗಳ ನಡುವೆ, ಜನ ಆರಿಸ್ಕೋ ಅಂದರೆ ಏನನ್ನು ಆರಿಸ್ತಾರೆ. ಜನ ಸಿನಿಮಾ ನೋಡಲ್ಲ ಅಂತ ಗೋಳಾಡಿದ್ರೆ ಅವರು ತಿರುಗಿಯೂ ನೋಡಲ್ಲ.

‘ಥೇಟರಿಗೆ ಬರಲ್ಲ ಅಂತ ಜನರಿಗೆ ಯಾಕೆ ಬೈತೀರಿ? ಸಿನಿಮಾರಂಗದಲ್ಲೇ ಇರುವ ನೀವು ಎಷ್ಟು ಸಿನಿಮಾ ನೋಡಿದ್ದೀರಿ, ಮೂರು ತಿಂಗಳಿಗೆ 100 ಸಿನಿಮಾ ಬಂದರೆ ಅದರಲ್ಲಿ ನೀವೆಷ್ಟು ಸಿನಿಮಾಕ್ಕೆ ದುಡ್ಡು ಕೊಟ್ಟು ಹೋಗ್ತೀರಿ?
ಇದು ವಾಸ್ತವ. ಸದ್ಯ ಸಿನಿಮಾ ಇಂಡಸ್ಟ್ರಿಯಲ್ಲಿ ನಗುವೇ ಇಲ್ಲ. ಜನ ಥೇಟರಿಗೆ ಬರ್ತಿಲ್ಲ ಎಂಬ ನೋವೇ ತುಂಬಿಕೊಂಡಿದೆ’. ಇವು ಕ್ರೇಜಿಸ್ಟಾರ್ ರವಿಚಂದ್ರನ್ ಮಾತುಗಳು.
ಪ್ರಮೋದ್ ಹಾಗೂ ಪೃಥ್ವಿ ಅಂಬಾರ್ ನಟನೆಯ ‘ಭುವನಂ ಗಗನಂ’ ಸಿನಿಮಾದ 25ನೇ ದಿನದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರವಿಚಂದ್ರನ್, ‘ಸದ್ಯ ಇಂಡಸ್ಟ್ರಿ ಸ್ಥಿತಿ ಹೀಗಾಗಲು ಸಿನಿಮಾಗಳ ಟ್ರಾಫಿಕ್ ಜಾಮ್ ಕಾರಣ.
ವಾರಕ್ಕೆ 10 ಸಿನಿಮಾ ರಿಲೀಸ್ ಆದರೆ ತಿಂಗಳಿಗೆ 40 ಸಿನಿಮಾ, ಟ್ರಾಫಿಕ್ ಜಾಮ್ ಆಗೋಯ್ತು. ಇವುಗಳ ನಡುವೆ, ಜನ ಆರಿಸ್ಕೋ ಅಂದರೆ ಏನನ್ನು ಆರಿಸ್ತಾರೆ. ಜನ ಸಿನಿಮಾ ನೋಡಲ್ಲ ಅಂತ ಗೋಳಾಡಿದ್ರೆ ಅವರು ತಿರುಗಿಯೂ ನೋಡಲ್ಲ. ಆದರೆ ಚಿತ್ರ ಚೆನ್ನಾಗಿದ್ರೆ ಅವರು ಕೊಡೋ ಗೆಲುವು ಅಭೂತಪೂರ್ವ.
ಅದರಿಂದಲೇ ನಾನು 40 ವರ್ಷ ಇಂಡಸ್ಟ್ರಿಯಲ್ಲಿ ಉಳಿದುಕೊಂಡಿರುವುದು’ ಎಂದು ಹೇಳಿದ್ದಾರೆ. ಗಿರೀಶ್ ಮೂಲಿಮನಿ ನಿರ್ದೇಶನದ, ಎಂ. ಮುನೇಗೌಡ ನಿರ್ಮಾಣದ ಈ ಚಿತ್ರದಲ್ಲಿ ರೇಚೆಲ್ ಡೇವಿಡ್ ಮತ್ತು ಅಶ್ವಥಿ ನಾಯಕಿಯರಾಗಿ ನಟಿಸಿದ್ದಾರೆ.