- Home
- Entertainment
- Sandalwood
- Sapthami Gowda: ಅಶೋಕನ ಸುಂದರಿಯ ಮಾಡರ್ನ್ ಲುಕ್… ಕೈ ಮೇಲಿನ ಟ್ಯಾಟೂ ಮೇಲೆ ಹುಡುಗರ ಕಣ್ಣು
Sapthami Gowda: ಅಶೋಕನ ಸುಂದರಿಯ ಮಾಡರ್ನ್ ಲುಕ್… ಕೈ ಮೇಲಿನ ಟ್ಯಾಟೂ ಮೇಲೆ ಹುಡುಗರ ಕಣ್ಣು
ಚಂದನವನದ ನಟಿ ಸಪ್ತಮಿ ಗೌಡ ಪ್ರಕೃತಿ ನಡುವೆ ನಿಂತಿರುವ ಫೋಟೊಗಳನ್ನು ಶೇರ್ ಮಾಡಿದ್ದು, ಅಭಿಮಾನಿಗಳ ಕಣ್ಣು ನಟಿಯ ಎಡಗೈ ಮೇಲಿರುವ ಟ್ಯಾಟೂ ಮೇಲಿದೆ.

ಕಾಂತಾರಾ ಸಿನಿಮಾ ಮೂಲಕ ಜನಪ್ರಿಯತೆ ಪಡೆದ ನಟಿ ಸಪ್ತಮಿ ಗೌಡ (Sapthami Gowda), ತಮ್ಮ ಮೂಗುತಿ ಲುಕ್ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಇಲ್ಲಿವರೆಗೆ ಜನ ಅವರ ಮೂಗುತಿ ಬಗ್ಗೆ ಕಾಮೆಂಟ್ ಮಾಡುತ್ತಿದ್ದರೆ, ಇದೀಗ ಅಭಿಮಾನಿಗಳ ಕಣ್ಣು ನಟಿಯ ಕೈ ಮೇಲಿರುವ ಟ್ಯಾಟೂ ಮೇಲೆ ಹೋಗಿದೆ.
ಹೌದು, ಇತ್ತೀಚೆಗೆ ಸಪ್ತಮಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social media) ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದರು. ಫೋಟೊ ನೋಡಿದ್ರೆ ನಟಿ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡು, ಮನ್ಸೂನ್ ಎಂಜಾಯ್ ಮಾಡಲು ಪ್ರಕೃತಿ ಸೌಂದರ್ಯವನ್ನ ಹಿಂಬಾಲಿಸುತ್ತಾ ಬೆಟ್ಟಗಳ ಕಡೆಗೆ ಹೊರಟಂತಿದೆ.
ಸದ್ಯ ನಟಿ ಶೇರ್ ಮಾಡಿರುವ ಫೋಟೊಗಳಲ್ಲಿ ಸಪ್ತಮಿ ನೀಲಿ ಬಣ್ಣದ ಜೀನ್ಸ್ ಜೊತೆ, ಬಿಳಿ ಬಣ್ಣದ ಸ್ಲೀವ್ ಲೆಸ್ ಕ್ರಾಪ್ ಟಾಪ್ ಟೀ ಶರ್ಟ್ ಧರಿಸಿದ್ದು, ಮೇಕಪ್ ಇಲ್ಲದ ಸಿಂಪಲ್ ಲುಕ್ ನಲ್ಲೂ ನಟಿ ತುಂಬಾನೆ ಚೆನ್ನಾಗಿ ಕಾಣಿಸುತ್ತಿದ್ದಾರೆ. ಆ ಓಪನ್ ಹೇರ್, ಹಾಳಿಯ ಹಾರಾಡುವ ಕೂದಲು, ಕೂಲಿಂಗ್ ಗ್ಲಾಸ್ ನಟಿ ಮಾಡರ್ನ್ ಲುಕ್ ಗೆ ಒಳ್ಳೆಯ ಚಾರ್ಮ್ ನೀಡುತ್ತಿದೆ.
ಆದರೆ ಇದೆಲ್ಲದರ ನಡುವೆ ಹೈಲೈಟ್ ಆಗಿದ್ದು ನಟಿಯ ಟ್ಯಾಟೂ (tattoo). ಹೌದು ಸಪ್ತಮಿ ಗೌಡ ಎಡಗೈಯ ಮೊಣಕೈಯ ಸ್ವಲ್ಪ ಮೇಲಿರುವ ಟ್ಯಾಟೂ. ಅಭಿಮಾನಿಗಳು ಕಾಮೆಂಟ್ ಮಾಡಿ, ಏನಿದು ಟ್ಯಾಟೂ? ಯಾರ ಹೆಸರಿನ ಟ್ಯಾಟೂ? ಏನಿದು ಗೊಂಬೆ ಎಂದು ಕೇಳುತ್ತಿದ್ದಾರೆ. ಜೊತೆಯ ನಟಿ ಮಾಡರ್ನ್ ಲುಕ್ ಗೆ ಮನಸೋತು ಹಾಟ್, ಗಾರ್ಜಿಯಸ್, ಬ್ಯೂಟಿ, ನಮ್ ಕ್ರಶ್ ಎಂದು ಕಾಮೆಂಟ್ ಮಾಡ್ತಿದ್ದಾರೆ.
ಸಪ್ತಮಿ ಗೌಡ ಕೈಯಲ್ಲಿರೋದು ಎರಡು ಗೊಂಬೆಗಳು ಕೈ ಕೈ ಹಿಡಿದಿರುವ ಟ್ಯಾಟೂ. ಇದನ್ನು ಸಪ್ತಮಿ 2022ರಲ್ಲಿ ಹಾಕಿಸಿದ್ದು, ಇದು ಸಿಸ್ಟರ್ ಟ್ಯಾಟೂ ಆಗಿದ್ದು, ಸಪ್ತಮಿ ಹಾಗೂ ತಂಗಿ ಉತ್ತರೆ ಇಬ್ಬರು ಜೊತೆಯಾಗಿ ಇಬ್ಬರ ಕೈಗೂ ಈ ಟ್ಯಾಟೂ ಹಾಕಿಸಿದ್ದು, ಆ ಮೂಲಕ ಅಕ್ಕ ತಂಗಿಯ ಮಧುರ ಭಾಂದವ್ಯವನ್ನು ತೋರಿಸಿದ್ದಾರೆ.
ಇನ್ನು ಸಪ್ತಮಿ ಗೌಡ ಸಿನಿಮಾಗಳ ಬಗ್ಗೆ ಹೇಳೊದಾದರೆ, ಕಾಂತಾರ ಚೆಲುವೆ ಸದ್ಯ ಕನ್ನಡಲ್ಲಿ ಸತೀಶ್ ನೀನಾಸಂ ಜೊತೆಗೆ ದ ರೈಸ್ ಆಫ್ ಅಶೋಕ (The Rise of Ashoka) ಸಿನಿಮಾದಲ್ಲಿ ನಾಯಕಿ ಅಂಬಿಕಾ ಆಗಿ ನಟಿಸುತ್ತಿದ್ದಾರೆ. ಅಲ್ಲದೇ ತೆಲುಗಿನಲ್ಲಿ ನಿತಿನ್ ಜೊತೆ ತಮ್ಮುಡು ಸಿನಿಮಾದಲ್ಲಿ ಸಪ್ತಮಿ ನಟಿಸಿದ್ದಾರೆ. ಈ ಸಿನಿಮಾ ಜುಲೈ ತಿಂಗಳಲ್ಲಿ ತೆರೆಗೆ ಬರಲಿದೆ.