ಸ್ಯಾಂಡಲ್ವುಡ್ ನಟರ ನೀವು ನೋಡಿರದ ಬಲು ಅಪರೂಪದ ಮದುವೆ ಫೋಟೋಗಳು…
ರವಿಚಂದ್ರನ್ ರಿಂದ ಹಿಡಿದು ಶ್ರೀಮುರಳಿವರೆಗೂ ಇಲ್ಲಿದೆ ನೀವು ಎಂದೂ ಕಂಡಿರದ ಚಂದನವನದ ತಾರೆಯರ ಅಪರೂಪದ ಮದುವೆ ಫೋಟೊಗಳು. ಇವರಲ್ಲಿ ನಿಮ್ಮ ನೆಚ್ಚಿನ ಜೋಡಿ ಯಾರೆಂದು ಹೇಳಿ..
ಜಗ್ಗೇಶ್ : ನವರಸ ನಾಯಕ ಜಗ್ಗೇಶರದ್ದು (Jaggesh) ಲವ್ ಮ್ಯಾರೇಜ್. ಇವರ ಪ್ರೀತಿಯ ವಿಷ್ಯ ಹೈ ಕೋರ್ಟ್ ಮೆಟ್ಟಿಲು ಕೂಡ ಏರಿತ್ತು. ಜಗ್ಗೇಶ್ ಮತ್ತು ಪರಿಮಳ ಜೋಡಿ 1984 ರ ಮಾರ್ಚ್ 22 ರಂದು ಸಪ್ತಪದಿ ತುಳಿದರು. ಇವರಿಗೆ ಇಬ್ಬರು ಗಂಡು ಮಕ್ಕಳು ಗುರುರಾಜ್ ಮತ್ತು ಯತಿರಾಜ್.
ಶಿವರಾಜ್ ಕುಮಾರ್ : ಡಾ. ಶಿವರಾಜ್ ಕುಮಾರ್ (Shivaraj Kumar) ಅವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಸ್ ಬಂದಾರಪ್ಪ ಅವರ ಪುತ್ರಿ ಗೀತಾ ಅವರನ್ನು 1986 ರಲ್ಲಿ ಮದುವೆಯಾಗಿದ್ದು, ಈ ಜೋಡಿಗೆ ನಿರುಪಮಾ ಮತ್ತು ನಿವೇದಿತಾ ಎನ್ನುವ ಇಬ್ಬರು ಮಕ್ಕಳಿದ್ದಾರೆ.
ವಿ. ರವಿಚಂದ್ರನ್ : ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಅವರು ಪ್ರೇಮಿಗಳ ದಿನದಂದು ಅಂದ್ರೆ, ಫೆಬ್ರವರಿ 14, 1986 ರಂದು ಸುಮತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ ಮೂರು ಮಕ್ಕಳಿದ್ದು, ಮಗಳು ಗೀತಾಂಜಲಿ, ವಿಕ್ರಮ್ ಮತ್ತು ಮನೋರಂಜನ್ ಇಬ್ಬರು ಗಂಡು ಮಕ್ಕಳು.
ರಮೇಶ್ ಅರವಿಂದ್ : ಎವರ್ ಗ್ರೀನ್ ನಟ ರಮೇಶ್ ಅರವಿಂದ್ (Ramesh Aravind) ಪ್ರೀತಿಸಿ ಮದುವೆಯಾಗಿರೋದು. ಕಾಲೇಜಿನಲ್ಲೇ ಲವ್ ಮಾಡಿರೋ ಅರ್ಚನಾ ಮತ್ತು ರಮೇಶ್, 1991 ರಲ್ಲಿ ಮದುವೆಯಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ರಾಘವೇಂದ್ರ ರಾಜಕುಮಾರ್ : ರಾಘವೇಂದ್ರ ರಾಜಕುಮಾರ್ ಅವರು ಮದುವೆಯಾಗಿದ್ದು, ಮಂಗಳಾ ಎನ್ನುವವರನ್ನು. ಇವರಿಗೆ ಇಬ್ಬರು ಮಕ್ಕಳು ಯುವರಾಜ್ ಕುಮಾರ್ ಹಾಗೂ ವಿನಯ್ ರಾಜ್ ಕುಮಾರ್.
ಪುನೀತ್ ರಾಜಕುಮಾರ್ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Punith Rajkumar) ಅಶ್ವಿನಿಯವರನ್ನು 1999ರಲ್ಲಿ ಮದುವೆಯಾದರು. ಈ ಜೋಡಿಗೆ ವಂದಿತಾ ಹಾಗೂ ಧೃತಿ ಎನ್ನುವ ಇಬ್ಬರು ಮಕ್ಕಳಿದ್ದಾರೆ.
ದರ್ಶನ್ ತೂಗುದೀಪ : ದರ್ಶನ್ ತೂಗುದೀಪ ಹಾಗೂ ವಿಜಯಲಕ್ಷ್ಮೀ 2000 ನೇ ಇಸವಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ವಿನೀಶ್ ತೂಗುದೀಪ ಎನ್ನುವ ಮಗ ಇದ್ದಾನೆ.
ಸುದೀಪ್ : ಕಿಚ್ಚ ಸುದೀಪ್ (Kiccha Sudeep) ಅವರು ಮಲಯಾಳಿ ಹುಡುಗಿ ಪ್ರಿಯಾರನ್ನು ಇಷ್ಟಪಟ್ಟು ಮದುವೆಯಾಗಿದ್ದಾರೆ. ಇವರು 2001ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು, ಈ ಜೋಡಿಗೆ ಸಾನ್ವಿ ಸುದೀಪ್ ಎನ್ನುವ ಮಗಳಿದ್ದಾರೆ.
ವಿಜಯ್ ರಾಘವೇಂದ್ರ : ವಿಜಯ್ ರಾಘವೇಂದ್ರ ಮಂಗಳೂರಿನ ಹುಡುಗಿ ಸ್ಪಂದನಾರನ್ನು 2007 ರಲ್ಲಿ ಮದುವೆಯಾದರು. ಇವರ ಪುತ್ರ ಶೌರ್ಯ ವಿಜಯ್ ರಾಘವೇಂದ್ರ.
ಶ್ರೀಮುರಳಿ (Srimurali) : ಶ್ರೀಮುರಳಿ ಮದುವೆಯಾಗಿದ್ದು, ತಮ್ಮ ಕಾಲೇಜು ಕ್ರಶ್, ಮೊದಲ ಲವ್ ಆಗಿದ್ದ ವಿದ್ಯಾ ಅವರನ್ನು. ಈ ಜೋಡಿ 2008ರಲ್ಲಿ ಮದುವೆಯಾಗುವ ಮೂಲಕ ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದರು. ಈ ಜೋಡಿಗೆ ಇಬ್ಬರು ಮಕ್ಕಳು ಅಗಸ್ತ್ಯ ಹಾಗೂ ಅತೀವ.