ಡ್ರಮ್ಮರ್ ಮಂಜು ಜೊತೆ ಸಪ್ತಪದಿ ತುಳಿದ ‘Kantara’, ‘KGF’ ಗಾಯಕಿ ಅನನ್ಯ ಭಟ್
ಕನ್ನಡದ ಜನಪ್ರಿಯ ಗಾಯಕಿ, ಕೆಜಿಎಫ್, ಕಾಂತಾರ ಸೇರಿ ಹಲವು ಹಿಟ್ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡು, ಸೋಜುಗಾದ ಸೂಜುಮಲ್ಲಿಗೆ ಹಾಡಿನ ಮೂಲಕ ಜನಮನ ಗೆದ್ದ ಗಾಯಕಿ ಅನನ್ಯ ಭಟ, ಡ್ರಮ್ಮರ್ ಮಂಜು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಗಾಯಕಿ ಅನನ್ಯಾ ಭಟ್
ಖ್ಯಾತ ಹಿನ್ನೆಲೆ ಗಾಯಕಿ ಅನನ್ಯ ಭಟ್. ಇವರು ಕನ್ನಡದ ಜೊತೆಗೆ ತಮಿಳು, ತೆಲುಗು ಚಿತ್ರರಂಗದಲ್ಲೂ ತಮ್ಮ ಕಂಚಿನ ಕಂಠದ ಗಾಯನದ ಮೂಲಕ ಗುರುತಿಸಿಕೊಂಡವರು. ಇದೀಗ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ತಿರುಪತಿಯಲ್ಲಿ ವಿವಾಹ
ಅನನ್ಯ ಭಟ್ ಅವರು ತಮ್ಮ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ತಿರುಪತಿಯಲ್ಲಿ ನವೆಂಬರ್ 9ರಂದು ಸರಳವಾದ ವಿವಾಹ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಶುಭ ಕೋರಿದ್ದಾರೆ.
ಡ್ರಮ್ಮರ್ ಮಂಜು ಜೊತೆ ವಿವಾಹ
ಇಂಟರ್‌ನ್ಯಾಷನಲ್ ಮ್ಯೂಜಿಷಿಯನ್, ಡ್ರಮ್ಮರ್ ಮಂಜು ಅವರ ಜೊತೆ ಅನನ್ಯ ಭಟ್ ಸಪ್ತಪದಿ ತುಳಿದಿದ್ದಾರೆ. ಖ್ಯಾತ ಜ್ಯೋತಿಷ್ಯ ಶಾಸ್ತ್ರದ ಲೇಖಕರು ಪಂಡಿತರು ಆದ ಪಂಡಿತ್ ಡಾ.ಅರುಣ್ ಗುರೂಜಿ ಅವರ ನೇತೃತ್ವದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪ್ರೇಮ ವಿವಾಹ
ಈ ಜೋಡಿ ಹಲವು ಸಮಯದಿಂದ ಜೊತೆಯಾಗಿ ಕಾಣಿಸಿಕೊಂಡಿದ್ದು, ಹಲವಾರು ಕಾರ್ಯಕ್ರಮಗಳನ್ನು ಜೊತೆಯಾಗಿ ನೀಡಿದ್ದಾರೆ. ಹಾಗಾಗಿ ಇದು ಪ್ರೇಮ ವಿವಾಹ ಎನ್ನಲಾಗುತ್ತಿದೆ. ಸರಳವಾಗಿ ಈ ಜೋಡಿ ತಮ್ಮ ಆಪ್ತರ ಸಮ್ಮುಖದಲ್ಲಷ್ಟೇ ಮದುವೆಯಾಗಿದ್ದಾರೆ.
ಕೆಜಿಎಫ್, ಕಾಂತಾರಕ್ಕೆ ಧನಿಯಾಗಿದ್ದ ಅನನ್ಯ ಭಟ್
ಅನನ್ಯ ಭಟ್ ಕೆಜಿಎಫ್, ಕಾಂತಾರ ಸಿನಿಮಾದ ಹಾಡುಗಳಿಗೆ ಧ್ವನಿಯಾಗಿದ್ದರು., ಕೆಜಿಎಫ್ 1 ಮ್ತೂ 2ರ ಗರ್ಭದಿ, ಸಿಡಿಲ ಭರವ, ಧೀರ ಧೀರ, ಕೋಟಿ ಕನಸುಗಳ, ಮೆಹಬೂಬ ಹಾಡು ಅದ್ಭುತವಾಗಿ ಮೂಡಿ ಬರುವ ಹಿಂದೆ ಈ ಗಾಯಕಿಯ ಕಂಠ ಸಿರಿ ಇತ್ತು.
ಜನಪ್ರಿಯ ಹಾಡುಗಳು
ಅನನ್ಯ ಭಟ್ ಅವರ ‘ಸೋಜುಗದ ಸೂಜಿ ಮಲ್ಲಿಗೆ’ ಹಾಡು ಯೂಟ್ಯೂಬ್ ಮೂಲಕ ಪ್ರತಿ ಮನಸ್ಸನ್ನು ಗೆದ್ದಿತ್ತು. ಅಲ್ಲದೇ ಟಗರು ಸಿನಿಮಾದ ‘ಮೆ ಮೆಂಟಲ್ ಹೋಜಾವಾ’, ಪುಷ್ಪಾ ಸಿನಿಮಾದ ‘ಸಾಮಿ ಸಾಮಿ’ ಹಾಡು ಕೂಡ ಅನನ್ಯ ಮಧುರ ಧ್ವನಿಯಲ್ಲಿ ಮೂಡಿ ಬಂದಿದೆ.