ರಕ್ಷಿತ್ ಶೆಟ್ಟಿ 10 ವರ್ಷದ ಸಿನಿ ಪಯಣ: 'ಸಿಂಪಲ್ ಸ್ಟಾರ್' ಜರ್ನಿ ಹೇಗಿತ್ತು ನೋಡಿ!
2010ರಲ್ಲಿ 'ನಮ್ಮ ಏರಿಯಾದಲ್ಲಿ ಒಂದು ದಿನ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟ ರಕ್ಷಿತ್ ಶೆಟ್ಟಿ, ಈಗ ಕನ್ನಡ ಚಿತ್ರರಂಗದ 'ಶ್ರೀಮನ್ನಾರಾಯಣ'ನಾಗಿ '777 ಚಾರ್ಲಿ' ಶುರು ಮಾಡಲಿದ್ದಾರೆ. ರಕ್ಷಿತ್ 10 ವರ್ಷದ ಸಿನಿ ಜರ್ನಿ ಹೀಗಿದೆ....
ರಕ್ಷಿತ್ ಶೆಟ್ಟಿ ಹುಟ್ಟಿದ್ದು ಜೂನ್ 6, 1983ರಲ್ಲಿ.
ಅನೇಕ ಕಿರು ಚಿತ್ರಗಳನ್ನು ನಿರ್ದೇಶಿಸುತ್ತಾ, ಅಭಿನಯಿಸುತ್ತಾ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.
2010ರಲ್ಲಿ 'ನಮ್ ಏರಿಯಾದಲ್ಲಿ ಒಂದು ದಿನ' ಚಿತ್ರದಲ್ಲಿ ಅರವಿಂದ್ ಆಗ ಮೊದಲು ಕಾಣಿಸಿಕೊಂಡರು.
2012ರಲ್ಲಿ 'ತುಘಲಕ್' ಆಗಿ.
2013ರ ಸೂಪರ್ ಡೂಪರ್ ಹಿಟ್ ಸಿನಿಮಾ 'ಸಿಂಪಲ್ ಆಗಿ ಒಂದು ಲವ್ ಸ್ಟೋರಿ'ಯಲ್ಲಿ ಕುಶಾಲ್ ಆಗಿ, ಶ್ವೇತಾ ಶ್ರೀವಾತ್ಸವ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು.
2014 ರಕ್ಷಿತ್ ಅಭಿನಯಿಸಿ, ನಿರ್ದೇಶಿಸಿದ 'ಉಳಿದವರು ಕಂಡಂತೆ' ಸಿನಿಮಾ 100 ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು.
2016ರಲ್ಲಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಮತ್ತು 'ಕಿರಿಕ್ ಪಾರ್ಟಿ' ಸಿನಿಮಾ ಅನೇಕ ಪ್ರಶಸ್ತಿಗಳನ್ನು ತನ್ನದನಾಗಿಸಿಕೊಂಡಿತ್ತು. ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಎಂಬ ನಟಿಯನ್ನು ಚಿತ್ರಲೋಕಕ್ಕೆ ಪರಿಚಯಿಸಿದವರು ರಕ್ಷಿತ್.
ಈ ಪ್ರತಿಭಾನ್ವಿತ ನಟ, ನಿರ್ದೇಶಕನ ದಶಕಗಳ ಪಯಣಕ್ಕೆ ಫ್ಯಾನ್ಸ್ ಕಾಮನ್ ಡಿಪಿ ಕ್ರಿಯೇಟ್ ಮಾಡಿದ್ದಾರೆ.
ಸದ್ಯದಲ್ಲೆ '777 ಚಾರ್ಲಿ' ತೆರೆ ಮೇಲೆ ಬರಲಿದೆ.
ನಟ, ನಿರ್ಮಾಪಕ ಮತ್ತು ನಿರ್ದೇಶಕನಾಗಿರುವ ರಕ್ಷಿತ್ ಇನ್ನು ಹೆಚ್ಚು ಸಿನಿಮಾಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಲೆಂದು ಆಶಿಸೋಣ.