ಕೈಯಲ್ಲಿ ಪತಾಕೆ ಹಿಡಿದು ಮುಗ್ಧ ನಗು ಬೀರಿದ ಖ್ಯಾತ ನಟನ ಮಕ್ಕಳು…. ಯಾರು ಗೆಸ್ ಮಾಡಿ?
ಕನ್ನಡ ಫಿಲಂ ಇಂಡಸ್ಟ್ರಿಯ ಖ್ಯಾತ ನಟ, ನಿರ್ದೇಶಕ ರಿಷಭ್ ಶೆಟ್ಟಿ -ಪ್ರಗತಿ ಶೆಟ್ಟಿ ದಂಪತಿಯ ಮುದ್ದಾದ ಮಕ್ಕಳು ರನ್ವಿತ್ ಮತ್ತು ರಾಧ್ಯ ಸ್ವಾತಂತ್ರ್ಯ ಸಂಭ್ರಮದಂದು ರೆಡಿಯಾಗಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸುಭಾಷ್ ಚಂದ್ರ ಭೋಸ್ ಅವರಂತೆ ಡ್ರೆಸ್ ಮಾಡಿಕೊಂಡು, ಕೈಯಲ್ಲಿ ಭಾರತದ ಬಾವುಟ ಹಾರಿಸುತ್ತಿರುವ ಈ ಮುದ್ದಾದ ಕಂದಮ್ಮಗಳು ಯಾರು ಎಂದು ಗೆಸ್ ಮಾಡಬಲ್ಲಿರಾ?
ಈ ಮುದ್ದಾದ ಮಕ್ಕಳು ಕನ್ನಡದ ಖ್ಯಾತ ನಟ ನಿರ್ದೇಶಕರ ಮಕ್ಕಳು. ಹಿರಿಯ ಮಗ ರನ್ವಿತ್ ಮತ್ತು ಕಿರಿಯ ಪುತ್ರಿ ರಾಧ್ಯ (Ranvith And Radhya). ಇಬ್ಬರಿಗೂ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಂದು ರಾಷ್ಟ್ರ ಪತಾಕೆಯನ್ನು ಕೈಯಲ್ಲಿ ಹಿಡಿಯುವಂತೆ ಮಾಡಿ ಫೋಟೊ ಶೂಟ್ ಮಾಡಿಸಲಾಗಿದೆ.
ಪುಟಾಣಿ ರನ್ವಿತ್ ಸುಭಾಷ್ ಚಂದ್ರ ಭೋಸ್ ರಂತೆ ಖಾಕಿ ಡ್ರೆಸ್ ಧರಿಸಿ, ತಲೆ ಮೇಲೆ ಟೋಪಿ ಹಾಕಿ, ಕನ್ನಡಕ ಹಾಕಿ, ಕೈಯಲ್ಲಿ ಬಾವುಟ ಹಿಡಿದುಕೊಂಡರೆ, ರನ್ವಿತ್ ತಂಗಿ ರಾಧ್ಯ, ಬಿಳಿ ಡ್ರೆಸ್ ಧರಿಸಿ, ಕೈಯಲ್ಲಿ ಬಾವುಟ ಹಿಡಿದು ದೊಡ್ಡದಾದ ನಗು ಬೀರಿದ್ದಾರೆ.
ಈ ಮುದ್ದಾದ ಮಕ್ಕಳು ಬೇರಾರು ಅಲ್ಲ, ಕನ್ನಡ ಚಿತ್ರರಂಗಕ್ಕೆ ಕಾಂತಾರದಂತಹ ಅದ್ಭುತ ಚಿತ್ರವನ್ನು ನೀಡಿದ್ದ ನಟ, ನಿರ್ದೇಶಕ ರಿಷಭ್ ಶೆಟ್ಟಿ (Rishabh Shetty) ಅವರ ಮಕ್ಕಳು. ಮಕ್ಕಳ ಮುದ್ದಾದ ಫೋಟೋವನ್ನು ರಿಷಭ್ ಪತ್ನಿ ಪ್ರಗತಿ ಶೆಟ್ಟಿ ಶೇರ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ಟೀವ್ ಆಗಿರುವ ಪ್ರಗತಿ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಯಂದು (Independance Day) ತಮ್ಮ ಮಕ್ಕಳ ಫೋಟೋ ಶೇರ್ ಮಾಡುವ ಮೂಲಕ ಈ 77ನೆ ಸ್ವಾತಂತ್ರ್ಯದಿನದಂದು, ರನ್ವಿತ್ ಮತ್ತು ರಾಧ್ಯ ನಿಮ್ಮೆಲರಿಗೂ ಶುಭಾಶಯಗಳನ್ನು ಕೋರುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ರಿಷಭ್ ಶೆಟ್ಟಿ ಪುತ್ರ ರನ್ವಿತ್ ಗೆ ನಾಲ್ಕು ವರ್ಷ. ಮಗನ ಬರ್ತ್ ಡೇ ಸಂದರ್ಭದಲ್ಲಿ ರಿಷಭ್ ಕುಟುಂಬ ಸಮೇತರಾಗಿ ಗೋಶಾಲೆಗೆ ತೆರಳಿ, ಅಲ್ಲಿ ಪೂಜೆ ಸಲ್ಲಿಸಿ, ಬರ್ತ್ ಡೇ ಸಂಭ್ರಮವನ್ನು ಅಲ್ಲಿಯೇ ಕಳೆದಿದ್ದರು. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದರು.
ಇನ್ನು ಶೆಟ್ಟರ ಎರಡನೇ ಮಗಳು ರಾಧ್ಯಾಳ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ರಿಷಭ್ ಆಚರಿಸಿದ್ದರು. ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭಕ್ಕೆ ಚಿತ್ರರಂಗದ ಗಣ್ಯರು, ರಾಜಕೀಯ ವ್ಯಕ್ತಿಗಳು ಆಗಮಿಸಿ ಶುಭ ಕೋರಿದ್ದರು.