ವಿಶೇಷ ಚೇತನರಿಗೆ ನಿಖಿಲ್-ರೇವತಿ ದಂಪತಿ ನೆರವು, ಅರ್ಥಪೂರ್ಣ ಜನ್ಮದಿನ
ಬೆಂಗಳೂರು( ಜು. 21) ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿರುವ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಂಪತಿ ಅರ್ಥಪೂರ್ಣ ಕೆಲಸವೊಂದನ್ನು ಮಾಡಿದ್ದಾರೆ. ರೇವತಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ.
ವಿಶೇಷ ಚೇತನರಿಗೆ ಅಗತ್ಯ ವಸ್ತುಗಳನ್ನು ನೀಡಿ ರೇವತಿ ಜನ್ಮದಿನ ಆಚರಿಸಿಕೊಂಡರು.
ಇಂದು ನನ್ನ ಬಾಳ ಸಂಗಾತಿಯ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮವನ್ನ ವಿಕಲ ಚೇತನರೊಂದಿಗೆ ಅರ್ಥಪೂರ್ಣವಾಗಿ ಆಚರಿಸಿದ ಕ್ಷಣ ಎಂದು ನಿಖಿಲ್ ಕುಮಾರಸ್ವಾಮಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮೊದಲ ಲಾಕ್‌ಡೌನ್ ಸಂದರ್ಭ ಅಂದರೆ ಏಪ್ರಿಲ್ 17, 2020ರಂದು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಬಿಡದಿ ತೋಟದ ಮನೆಯಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಈಗಿನ ಕೊರೋನಾ ಪರಿಸ್ಥಿತಿಯಲ್ಲಿ ನಿಖಿಲ್ ಕುಮಾರಸ್ವಾಮಿ ರಾಮನಗರದ ತೋಟದ ಮನೆಯಲ್ಲಿ ವಾಸವಿದ್ದರು.
ಕೃಷಿ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಪ್ರತಿದಿನದ ಅಪ್ ಡೇಟ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
ಸೆಲೆಬ್ರಿಟಿ ಕಪಲ್ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬದ ಸೊಸೆ ರೇವತಿ ಐದು ತಿಂಗಳ ಗರ್ಭಿಣಿಯಾಗಿದ್ದು ಹೊಸ ಅತಿಥಿಯ ಆಗಮನ ನಿರೀಕ್ಷೆ ಮನೆಮಾಡಿದೆ.