ಎದೆ ತುಂಬಿ ಹಾಡುವ ಗಾಯಕ ಎಸ್ ಪಿ ಬಿ ಅವರ ಬಗ್ಗೆ ನಿಮಗೆ ತಿಳಿಯದ ವಿಚಾರಗಳು!

First Published Jun 4, 2020, 4:53 PM IST

ಎಸ್ ಪಿ ಬಾಲಸುಬ್ರಮಣ್ಯಂ ಈ ಹೆಸರು ಕಿವಿಗೆ ಬಿದ್ದ ಕೇಳಿದ ಕೂಡಲೇ ಯಾರೇ ಆಗಲಿ ಒಂದು ಕ್ಷಣ ರೋಮಾಂಚಿತರಾಗುತ್ತಾರೆ. ಭಾರತೀಯ ಚಿತ್ರರಂಗದ ಅದೆಷ್ಟೋ ನಟರ ಅಭಿನಯದಲ್ಲಿ ತಮ್ಮ ಧ್ವನಿಯ ಮೂಲಕ ಬೆರೆತಿದ್ದ ಅಪರೂಪದ ಕಲಾವಿದ.ಎಲ್ಲರೂ ಪ್ರೀತಿಯಿಂದ ಕರೆಯುವ ಈ ಎಸ್ ಪಿ ಬಿ ಗಾಯಕನಾಗಿ, ನಟನಾಗಿ ಮತ್ತು ಸಂಗೀತ ನಿರ್ದೇಶಕನಾಗಿ ಬಹುಭಾಷೆಯಲ್ಲಿ ಗುರುತಿಸಿಕೊಂಡಿದ್ದಾರೆ.ಇವರ ಸಾಧನೆಗಳು ಅಪೂರ್ವ ಮತ್ತು ಅವರ್ಣನೀಯ.ದೇಶ ಕಂಡ ಶ್ರೇಷ್ಠ ಸಂಗೀತ ದಿಗ್ಗಜನಿಗೆ ಹುಟ್ಟು ಹಬ್ಬದ ಶುಭಾಶಯಗಳು.