ಬೇಬಿ ಬಂಪ್ ಫೋಟೊಶೂಟ್ ಮೂಲಕ ಹೊಸವರ್ಷದ ಶುಭ ಕೋರಿದ ಹರಿಪ್ರಿಯಾ - ವಸಿಷ್ಠ ಸಿಂಹ
ಚಂದನವನದ ಸೆಲೆಬ್ರಿಟಿ ಜೋಡಿಗಳಾದ ಹಾಗೂ ಶೀಘ್ರದಲ್ಲೇ ಪೋಷಕರಾಗಿ ಭಡ್ತಿ ಪಡೆಯಲಿರುವ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಹೊಸ ವರ್ಷಕ್ಕೆ ಬೇಬಿ ಬಂಪ್ ಫೋಟೊ ಶೂಟ್ ಹಂಚಿಕೊಂಡಿದ್ದಾರೆ.
ಸ್ಯಾಂಡಲ್’ವುಡ್ ನ ಮುದ್ದಾದ ಜೋಡಿಗಳಲ್ಲಿ (Sandalwood couples) ಒಂದಾದ ಜೋಡಿ ಅಂದ್ರೆ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ. ಈ ಕಪಲ್ಸ್ ಇತ್ತೀಚೆಗಷ್ಟೇ ತಾವು ಪೋಷಕರಾಗುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ವಿಡಿಯೋ ಶೇರ್ ಮಾಡುವ ಮೂಲಕ ಮಾಹಿತಿ ನೀಡಿದ್ದರು.
ಅಕ್ಟೋಬರ್ ತಿಂಗಳ ಕೊನೆಯಲ್ಲಿ ಅಂದರೆ ಹರಿಪ್ರಿಯಾ (Hripriya) ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಜೋಡಿ ಮಾಲ್ಡೀವ್ಸ್ ಗೆ ಟ್ರಿಪ್ ಮಾಡಿದ್ದರು. ಅಲ್ಲಿ ಸಮಯ ಕಳೆದಂತಹ ವಿಡೀಯೋವನ್ನು ಶೇರ್ ಮಾಡುತ್ತಾ, ಈ ಜೋಡಿ ವಿಡಿಯೋದಲ್ಲಿಯೇ ಹರಿಪ್ರಿಯಾಗೆ 5 ತಿಂಗಳು ಅನ್ನೋದನ್ನು ತಿಳಿಸಿದ್ದರು.
ನವಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದ ದಿನ ವಿಡಿಯೋ ಮೂಲಕ ಈ ಜೋಡಿ, ಕರ್ನಾಟಕ ರಾಜ್ಯೋತ್ಸವ ಶುಭ ಕೋರುತ್ತಾ, ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ.. ಹೌದು, ನಾವು ನಮ್ಮ “ಕುಡಿ”ಗಾಗಿ ಎದುರುನೋಡುತ್ತಿದ್ದೇವೆ..!! ನಿಮ್ಮೆಲ್ಲರ ಹಾರೈಕೆ- ಆಶೀರ್ವಾದಗಳ ನಿರೀಕ್ಷೆಯಲ್ಲಿರೋದಾಗಿ ತಿಳಿಸಿದ್ದರು.
ಇದೀಗ ಹರಿಪ್ರಿಯಾ -ಸಿಂಹ ಹೊಸ ವರ್ಷದ ಮೊದಲ ದಿನ ವಿಶೇಷ ಫೋಟೊ ಶೂಟ್ ಮಾಡಿ ಶೇರ್ ಮಾಡಿದ್ದಾರೆ. ಹೌದು, ಈ ಜೋಡಿ ಬೇಬಿ ಬಂಪ್ ಫೋಟೊ ಶೂಟ್ (baby bump photoshoot) ಮಾಡಿದ್ದು, ಆ ಮೂಲಕ ಹೊಸ ವರ್ಷವನ್ನು ಮತ್ತಷ್ಟು ಸುಂದರವಾಗಿ ಸೆಲೆಬ್ರೇಟ್ ಮಾಡಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿ ಈ ಜೋಡಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ರೀಲ್ಸ್ ಶೇರ್ ಮಾಡಿ ವಿವಿಧ ರೀತಿಯಲ್ಲಿ ಗಂಡ -ಹೆಂಡತಿ ಪೋಸ್ ಕೊಟ್ಟ ಫೋಟೊ ಹಂಚಿಕೊಂಡಿದ್ದು, ಬೇಬಿ ಬಂಪ್ ಹೈ ಲೈಟ್ ಮಾಡಲಾಗಿದೆ.
ವಸಿಷ್ಠ (Vasistha Simha) ಹಾಗೂ ಹರಿಪ್ರಿಯಾ ಇಬ್ಬರೂ ಸಹ ನೀಲಿ ಬಣ್ಣದ ಪ್ಯಾಂಟ್ ಮತ್ತು ಬ್ಲೇಜರ್ ಧರಿಸಿದ್ದು, ವೈಟ್ ಬಣ್ಣದ ಟೀ ಶರ್ಟ್ ಧರಿಸಿದ್ದಾರೆ. ಹರಿಪ್ರಿಯಾ ತಮ್ಮ ಹೊಟ್ಟೆಯನ್ನು ಹಿಡಿದು ಪೋಸ್ ನೀಡಿದ್ದಾರೆ. ಈ ಫೋಟೊ ಶೂಟನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಜೂನಿಯರ್ ಸಿಂಹ (Junior Simha) ಸದ್ಯದಲ್ಲೇ ಬರಲಿದ್ದಾರೆ ಎಂದು ಹೇಳ್ತಿದ್ದಾರೆ ಜನ. ಅಷ್ಟೇ ಅಲ್ಲ ಈ ಜೋಡಿಗೆ ಹೊಸ ವರ್ಷದ ಶುಭ ಕೋರುವ ಮೂಲಕ, ಆರೋಗ್ಯಯುತ ಮಗುವಿಗಾಗಿಯೂ ಶುಭ್ ಹಾರೈಸಿದ್ದಾರೆ. ಇನ್ನು ಕೆಲವರು ಹರಿಪ್ರಿಯಾ ಮುಖ ತುಂಬಾನೆ ಬದಲಾಗಿದೆ. ಇದು ನಿಜಕ್ಕೂ ಹರಿಪ್ರಿಯಾ ಮೇಡಂ ಅವರೇನಾ ಅಂತಾನೂ ಕೇಳಿದ್ದಾರೆ.
ಹರಿಪ್ರಿಯಾ ಮತ್ತು ವಸಿಷ್ಠ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು, 2023 ರ ಜನವರಿ 26 ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2024 ರಲ್ಲಿ ಐದು ತಿಂಗಳು ಕಳೆದ ಮೇಲೆ ತಮ್ಮ ಪ್ರೆಗ್ನೆನ್ಸಿ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ತಿಳಿಸಿದ್ದರು ಈ ಜೋಡಿ, ಈ ವರ್ಷ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಲ್ಲಿ ತಾಯಿಯಾಗುವ ಸಾಧ್ಯತೆ ಇದೆ.