'ಅಪ್ಪ I Love You ಪಾ' ಗಾನಸುಧೆ ಹರಿಸಿದ ಅನುರಾಧಗೆ ಜನ್ಮದಿನ ಸಂಭ್ರಮ
ನಂದನಂದನ ನೀನು ಶ್ರೀ ಕೃಷ್ಣ ,ಅಪ್ಪ ಐ ಯೂ ಪಾ ಎಂದು ಹಾಡುತ್ತಾ ಕನ್ನಡ ಸಿನಿ ಸಂಗೀತ ಲೋಕದ ತಾರೆಯಾಗಿ,ಅದ್ಭುತ ಗಾಯಕಿಯಾಗಿ ಕೇಳುಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿರುವ ಹಾಡುಗಾರ್ತಿ ಅನುರಾಧ ಭಟ್ ಗೆ ಜನ್ಮದಿನದ ಸಂಭ್ರಮ.

ಅನುರಾಧಾ ಭಟ್ ಅವರು ಮಂಗಳೂರು ಮೂಲದವರಿಗಿದ್ದು ಶ್ರೀಕೃಷ್ಣ ಭಟ್ ಮತ್ತು ಗಾಯತ್ರಿ ಶ್ರೀಕೃಷ್ಣ ಭಟ್ ಅವರ ಪ್ರಥಮ ಪುತ್ರಿಯಾಗಿದ್ದು ,ನಟಿ ನಿರೂಪಕಿ ಅನುಪಮಾ ಭಟ್ ಅವರು ದ್ವಿತೀಯ ಪುತ್ರಿಯಾಗಿದ್ದಾರೆ.

ಅನುರಾಧಾ ಭಟ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಗಾಯಕಿಯಾಗಿದ್ದು ತಮ್ಮ ಜೇನಿನ ಕಂಠದ ಮೂಲಕ ಸಾಕಷ್ಟು ಜನಪ್ರಿಯ ಗೀತೆಗಳಿಂದ ಕನ್ನಡಿಗರಿಗೆ ಮುದ ನೀಡಿದ್ದಾರೆ.

ಹಂಸಲೇಖ, ಗುರುಕಿರಣ್, ವಿ.ಹರಿಕೃಷ್ಣ, ಮನೋಮೂರ್ತಿ, ಅರ್ಜುನ್ ಜನ್ಯ ಕನ್ನಡದ ಪ್ರಮುಖ ಸಂಗೀತ ನಿರ್ದೇಶಕರ ಅಡಿಯಲ್ಲಿ 1000 ಕ್ಕಿಂತಲೂ ಹೆಚ್ಚು ಹಾಡುಗಳಿಗೆ ದನಿಯಾಗಿದ್ದಾರೆ.

ಇವರು MBA ಪದವಿ ಪಡೆದು ಕೆಲಕಾಲ ಬಹುರಾಷ್ಟ್ರೀಯ ಕಂಪನಿಯಲ್ಲಿ HR ಆಗಿ ಕೆಲಸ ಮಾಡಿ ನಂತರ ಸಂಗೀತ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ಅನುರಾಧ ಭಟ್ ಅವರು ಸಂಗೀತದಲ್ಲಿ ಮಾತ್ರವಲ್ಲದೆ ಭರತನಾಟ್ಯ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ.

ನಾದಬ್ರಹ್ಮ ಹಂಸಲೇಖ ಅವರ `ಮೀರಾ ಮಾಧವ ರಾಘವ' ಸಿನಿಮಾದ "ವಸಂತ ವಸಂತ" ಹಾಡಿನ ಮೂಲಕ ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ವಿವಿಧ ಸಂಗೀತ ಆಲ್ಬಂಗಳಿಗಾಗಿ 14 ಭಾಷೆಗಳಲ್ಲಿ 5000 ಕ್ಕಿಂತ ಹೆಚ್ಚು ಹಾಡುಗಳನ್ನು ಧ್ವನಿಮುದ್ರಣ ಮಾಡಿರುವ ಹೆಗ್ಗಳಿಕೆ ಇವರದು.

ಅನುರಾಧ ಭಟ್ ಅವರು ಭಟ್ ಅವರು 2012ರ ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ ಅಲ್ಲದೇ ಫಿಲ್ಮ್ ಫೇರ್ ನ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಮತ್ತು ಆರ್ಯಭಟ ಇಂಟರ್ನ್ಯಾಷನಲ್ ಅವಾರ್ಡ್ 2015 , ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಅನುರಾಧ ಅವರ ಮತ್ತೊಂದು ವಿಶೇಷತೆಯೆಂದರೆ ಕಾರ್ಟೂನ್ ಪಾತ್ರಗಳಿಗೆ ಡಬ್ ಮಾಡಿದ್ದಾರೆ ಮತ್ತು ಹಲವಾರು ಆನಿಮೇಟೆಡ್ ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು, ಜಿಂಗಲ್ಸ್, ರೇಡಿಯೋ / ಟಿವಿ ಜಾಹೀರಾತುಗಳು ಮತ್ತು ಹಲವಾರು ಇತರ ಯೋಜನೆಗಳಿಗೆ ನಿರೂಪಣೆಗಳಲ್ಲಿ ತಮ್ಮ ಧ್ವನಿ ನೀಡಿದ್ದಾರೆ.

ದೇಶ ಕಂಡ ಶ್ರೇಷ್ಠ ಗಾಯಕರಾದ ಎಸ್. ಪಿ.ಬಾಲಸುಬ್ರಹ್ಮಣ್ಯಂ , ವಿಜಯ್ ಪ್ರಕಾಶ್ , ರಾಜೇಶ್ ಕೃಷ್ಣನ್ , ಸೋನು ನಿಗಮ್ ಹೀಗೆ ಅನೇಕ ಸುಮಧುರ ಕಂಠದ ಗಾಯಕರ ಜೊತೆ ಹಾಡಿರುವುದು ಮತ್ತು ಹಾಡುತ್ತಿರುವುದು ಕೇಳುಗರಿಗೆ ಖುಷಿಯ ಸಂಗತಿಯಾಗಿದೆ.