ಸಿನಿಮಾ ಕಲಾವಿದರಿಗೆ ಉಚಿತ ಲಸಿಕೆ, ಪಡೆದುಕೊಳ್ಳುವುದು ಹೇಗೆ?
ಬೆಂಗಳೂರು(ಮೇ 31) ಕಲಾವಿದರ ಸಂಘದಲ್ಲಿ ಉಚಿತ ವ್ಯಾಕ್ಸಿನ್ ನೀಡಿಕೆ ಮಾಡಲಾಗುತ್ತಿದೆ. ಎರಡು ದಿನಗಳ ಕಾಲ ಸಿನಿಮಾ ಕಲಾವಿದರಿಗೆ ಉಚಿತ ವ್ಯಾಕ್ಸಿನೇಷನ್ ಮಾಡಲಾಗುತ್ತಿದೆ.
ಹಿರಿಯ ನಟ ದೊಡ್ಡಣ್ಣ, ನಟಿ-ನಿರ್ದೇಶಕಿ ರೂಪಾ ಅಯ್ಯರ್ ನೇತೃತ್ವದಲ್ಲಿ ವ್ಯಾಕ್ಸಿನ್ ಶಿಬಿರ ಆಯೋಜಿಸಲಾಗಿದೆ. ಎರಡು ದಿನ ಒಟ್ಟು 500 ಕಲಾವಿದರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. 18 ವಯಸ್ಸಿನ ಮೇಲ್ಪಟ್ಟ ಕಲಾವಿದರಿಗೆ ಉಚಿತ ವ್ಯಾಕ್ಸಿನ್ ನೀಡಲಾಗ್ತಿದೆ
ವ್ಯಾಕ್ಸಿನ್ ಪಡೆಯಲು ಕಲಾವಿದರು ಕಲಾವಿದರ ಸಂಘದ ಸದಸ್ಯರಾಗಿರಬೇಕು. ಆಧಾರ್ ಕಾರ್ಡ್ ಅನ್ನು ತೆಗೆದುಕೊಂಡು ಬಂದವರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ.
ಜೂನ್ 7 ರ ಹೊತ್ತಿಗೆ ಯಾವ ಪರಿಸ್ಥಿತಿ ಇದ್ಯೋ ನೋಡಿಕೊಂಡು ಮುಂದಿನ ತೀರ್ಮಾನ ಮಾಡಲಾಗುತ್ತದೆ. ಲಾಕ್ಡೌನ್ ಖಂಡಿತಾ ಸಹಕಾರಿ ಆಗಿದೆ, ಕೋವಿಡ್ ನಿಂತ್ರಣಕ್ಕೆ ಬಂದಿದೆ. ಈಗ ಕೋವಿಡ್ ನಿಯಂತ್ರಣ ಮುಖ್ಯ.
ಲಾಕ್ಡೌನ್ ವಿಸ್ತರಣೆ ಮಾಡಿದ್ರೆ ರೈತರಿಗೆ, ವ್ಯಾಪಾರ, ವಹಿವಾಟುಗಳಿಗೆ ಕಷ್ಟ ಆಗುತ್ತೆ. ಲಾಕ್ಡೌನ್ ವಿಸ್ತರಣೆ ಬಗ್ಗೆ ಪರಿಸ್ಥಿತಿ ಅವಲೋಕಿಸಿ ನಿರ್ಧರಿಸಬೇಕಾಗುತ್ತೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿಕೆ ನೀಡಿದ್ದಾರೆ.
ಲಸಿಕೆ ಶಿವರದಲ್ಲಿ ಡಿಸಿಎಂ ಡಾ. ಸಿ ಎನ್ ಅಶ್ವತ್ಥ ನಾರಾಯಣ ಸಹ ಭಾಗವಹಿಸಿದ್ದರು.