ಅಂದು ಪ್ರೇಕ್ಷಕರನ್ನು ರಂಜಿಸಿದ ಬಾಲನಟರ ಇಂದು ಹೇಗಿದ್ದಾರೆ?
ಕನ್ನಡ ಚಿತ್ರರಂಗದಲ್ಲಿ ಬಾಲನಟರಾಗಿ ನಟಿಸಿ, ಪ್ರೇಕ್ಷಕರಿಗೆ ಅದ್ಭುತ ಮನರಂಜನೆ ನೀಡಿದ ನಟ, ನಟಿಯರು ಈವಾಗ ಏನ್ ಮಾಡ್ತಿದ್ದಾರೆ? ತಿಳಿಯೋ ಕುತೂಹಲ ನಿಮಗಿದ್ರೆ, ಈ ಸ್ಟೋರಿನಾ ನೀವು ಖಂಡಿತವಾಗಿಯೂ ಓದಬೇಕು.
ರೋಹಿತ್ ಶ್ರೀನಾಥ್ (Rohith Sirnath): ಇವರು ಕನ್ನಡ ನಟ ಶ್ರೀನಾಥ್ ಅವರ ಮಗ, ಅದಕ್ಕಿಂತ ಹೆಚ್ಚಾಗಿ ಪಲ್ಲವಿ, ಅನುಪಲ್ಲವಿ ಚಿತ್ರದಲ್ಲಿ ನಗು ಎಂದಿದೆ ಮಂಜಿನಾ ಬಿಂದು ಹಾಡಿನಲ್ಲಿ ಮುದ್ದುಮುದ್ದಾಗಿ ಕಂಡು ಬಂದ ಬಾಲ ನಟ. ಅಷ್ಟೇ ಅಲ್ಲ ಇವರು ಮಾಲ್ಗುಡಿ ಡೇಸ್ ನಲ್ಲಿ ರಾಜಂ ಆಗಿ ಸಹ ನಟಿಸಿದ್ದರು. ಸದ್ಯ ಚಿತ್ರರಂಗದಿಂದ ದೂರ ಇದ್ದಾರೆ.
ಬೇಬಿ ಶಾಮಿಲಿ (Baby Shamili): ಬೇಬಿ ಶಾಮಿಲಿ ಯಾರಿಗೆ ಗೊತ್ತಿಲ್ಲಾ ಅಲ್ವಾ? 90ರ ದಶಕದ ಫೆವರಿಟ್ ಚೈಲ್ಡ್ ಆರ್ಟಿಸ್ಟ್ ಈಕೆ. ದಕ್ಷಿಣ ಭಾರತದ ಈ ನಟಿ ಕನ್ನಡದಲ್ಲಿ ಮತ್ತೆ ಹಾಡಿತು ಕೋಗಿಲೆ, ಬೈರವಿ, ಶಾಂಬವಿ, ದಾಕ್ಷಾಯಿಣಿ, ಶ್ವೇತಾಗ್ನಿ, ಪೊಲೀಸ್ ಲಾಕಪ್, ಕಾದಂಬರಿ, ಮಕ್ಕಳ ಸಾಕ್ಷಿ, ಹೂವು ಹಣ್ಣು, ಚಿನ್ನ ನೀ ನಗುತಿರು, ಕರುಳಿನ ಕುಡಿ, ಜಗದೀಶ್ವರಿ ಮೊದಲಾದ ಚಿತ್ರಗಳಲ್ಲಿ ಅದ್ಭುತವಾಗಿ ಅಭಿನಯಿಸಿ, ಕನ್ನಡಿಗರ ಮನ ಗೆದ್ದಿದ್ದರು. ಬಾಲ ನಟಿಯಾಗಿ ಮಿಂಚಿದ ಶಾಮಿಲಿ, ನಾಯಕಿಯಾಗಿ ಗೆಲ್ಲೋದರಲ್ಲಿ ಸೋತರು. ಇವರು ನಾಯಕಿಯಾಗಿ ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದರು, ಆದರೆ ಯಾವುದೂ ಯಶಸ್ಸು ತಂದುಕೊಟ್ಟಿಲ್ಲ.
ವಿಜಯ್ ರಾಘವೇಂದ್ರ (VIjay Raghavendra): ಕನ್ನಡದ ಚಿನ್ನಾರಿ ಮುತ್ತ ಎಂದೇ ಜನಪ್ರಿಯತೆ ಪಡೆದ ವಿಜಯ್ ರಾಘವೇಂದ್ರ ಬಾಲನಟನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಇವರು ಬಾಲ ನಟರಾಗಿ ಚಲಿಸುವ ಮೋಡಗಳು, ಪರಶುರಾಮ್, ಅರಳಿದ ಹೂವುಗಳು, ಝಗ ಮೆಚ್ಚಿದ ಹುಡುಗ, ಕೊಲ್ಲೂರ ಶ್ರೀ ಮೂಕಾಂಬಿಕ, ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು (ನ್ಯಾಷನಲ್ ಅವಾರ್ಡ್), ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ, ಸ್ವಾಮಿ ವಿವೇಕಾನಂದ ಚಿತ್ರದಲ್ಲಿ ನಟಿಸಿದ್ದರು. ನಂತರ ನಿನಗಾಗಿ ಚಿತ್ರದ ಮೂಲಕ ನಾಯಕನಾಗಿ ಭರ್ತಿ ಪಡೆದು, ಇಂದೂ ಸಹ ನಾಯಕನಾಗಿ ಮಿಂಚುತ್ತಿದ್ದಾರೆ.
ಮಾಸ್ಟರ್ ಕಿಶನ್ (Master Kishan): ಬಾಲ ನಟ ಜೊತೆಗೆ ಬಾಲ ನಿರ್ದೆಶಕನಾಗಿ ಗಿನ್ನಿಸ್ ರೆಕಾರ್ಡ್ ಬರೆದವರು ಇವರು. ಇಲ್ಲಿವರೆಗೆ ಸುಮಾರು 24 ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲನಟನಾಗಿ ಗ್ರಾಮ ದೆವತೆ, ಹಲೋ ನಾರದ, ವಂಶಕೊಬ್ಬ, ಲಾಲಿ ಹಾಡು, ಎಕ್ಸ್ ಕ್ಯೂಸ್ ಮಿ, ಸ್ವಾತಿ ಮುತ್ತು, ಮಹಾರಾಜ, ಜೋಗಿ, ಕೇರ್ ಆಫ್ ಫೂಟ್ ಪಾತ್, ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ನಾಯಕನಾಗಿ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದಾರೆ.
ಮಾಸ್ಟರ್ ಆನಂದ್ (Master Anand): ಬಾಲ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಮಾಸ್ಟರ್ ಆನಂದ್, ಇಂದಿಗೂ ಸಹ ಕನ್ನಡಿಗರ ನೆಚ್ಚಿನ ನಟ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ಗೌರಿ ಗಣೇಶ, ಶಾಂತಿಕ್ರಾಂತಿ, ಕಿಂದರಿ ಜೋಗಿ, ಮುತ್ತಿನ ಹಾರ, ಕರ್ಪೂರದ ಗೊಂಬೆ ಮೊದಲಾದ ಚಿತ್ರಗಳಲ್ಲಿ ಬಾಲ ನಟನಾಗಿ ತಮ್ಮ ಮಾತಿಗಾರಿಕೆ ಮತ್ತು ನಟನೆಯಿಂದ ಮನಗೆದ್ದಿದ್ದ ಈ ನಟ, ಈಗಲೂ ಒಂದೊಂದು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ, ಜೊತೆಗೆ ಡ್ರಾಮಾ ಜೂನಿಯರ್ಸ್ ಮತ್ತು ಕಾಮಿಡಿ ಕಿಲಾಡಿಗಳು ನಿರೂಪಕರಾಗಿ ಜನಪ್ರಿಯತೆ ಗಳಿಸಿದ್ದಾರೆ.
ಮಾಸ್ಟರ್ ಚಂದನ್ (Master Chandan): ಹೇ ಫ್ರೆಂಡೂ… ಎಂದು ಮುದ್ದು ಮುದ್ದಾಗಿ ಸೂರ್ಯವಂಶ ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ಕರೆಯುವ ಹುಡುಗ ನಿಮಗೆ ನೆನಪಿರಬಹುದು ಅಲ್ವಾ? ಇವರು ಮಾಸ್ಟರ್ ಚಂದನ್. ಇವರು ಕದಂಬ, ವರ್ಷ, ನಮ್ಮಣ್ಣ ಚಿತ್ರದಲ್ಲೂ ಬಾಲನಟನಾಗಿ ಗುರುತಿಸಿಕೊಂಡಿದ್ದರು. ನಂತರ ಸಿನಿಮಾದಿಂದ ದೂರವಿದ್ದು, ಶಿಕ್ಷಣದ ಕಡೆಗೆ ಗಮನ ಹರಿಸಿದರು, ಸದ್ಯ ಇವರು ಬರ್ಲಿನ್ ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅವಕಾಶ ಸಿಕ್ರೆ ಮತ್ತೆ ಸಿನಿಮಾಗೆ ಬರ್ತಾರಂತೆ.
ಮಾಸ್ಟರ್ ಮಂಜುನಾಥ್ (Master Manjunath): ಮಾಲ್ಗುಡಿ ಡೇಸ್ ನ ಸ್ವಾಮಿಯನ್ನು ಯಾರು ತಾನೆ ಮರೆಯಲು ಸಾಧ್ಯ? ಆ ಮುದ್ದಾದ ಮುಗ್ಧ ಮುಖದ ಹುಡುಗನ ಅಭಿನಯಕ್ಕೆ ಸೋಲದವರು ಇಲ್ಲ. ಬಾಲನಟನಾಗಿ ಕನ್ನಡದಲ್ಲಿ ಸುಮಾರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಈ ನಟ ನಂತರ ಚಿತ್ರರಂಗದಿಂದ ದೂರ ಸರಿದರು. ರಣಧೀರ ಚಿತ್ರದಲ್ಲಿ ಇವರು ನಟಿಸಿ, ಹಾಡಿರುವ ಏನ್ ಹುಡುಗೀರೋ, ಅದ್ಯಾಕಿಂಗ್ ಆಡ್ತೀರೋ ಹಾಡು ಇಂದಿಗೂ ಸಹ ಜನಪ್ರಿಯತೆ ಪಡೆದಿದೆ.
ಅಮೂಲ್ಯ (Amulya): ಅಮೂಲ್ಯ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು ಬಾಲನಟಿಯಾಗಿ. ಇವರು ಪರ್ವ, ಚಂದು, ಲಾಲಿ ಹಾಡು, ಮಹಾರಾಜ, ಮಂಡ್ಯ, ಸುಂಟರಗಾಳಿ, ಸಜ್ಞಿ, ನಮ್ಮ ಬಸವ, ಕಲ್ಲರಳಿ ಹೂವಾಗಿ, ತನನಂ ತನನಂ, ತಿಮ್ಮ ಚಿತ್ರಗಳಲ್ಲಿ ಬಾಲನಟಿಯಾಗಿ ಅದ್ಭುತವಾಗಿ ನಟಿಸಿದ್ದು, ಚೆಲುವಿನ ಚಿತ್ತಾರದ ಮೂಲಕ ನಾಯಕಿಯಾಗು ಭಡ್ತಿ ಪಡೆದರು. ಆದರೆ ಮದುವೆ ನಂತರ ಇವರು ಚಿತ್ರರಂಗದಿಂದ ದೂರವೇ ಉಳಿದರು.