ಹೊಸ ಹೇರ್‌ಸ್ಟೈಲ್ ಮಾಡಿಸಿಕೊಂಡ ರಮ್ಯಾ, ಯಾಕಾಗಿ ಪೂರ್ವಸಿದ್ಧತೆ?
ಬೆಂಗಳೂರು(ಜು. 22) ಚಿತ್ರ-ವಿಚಿತ್ರ ಸೆಲ್ಫಿ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಾಜರಾಗಿದ್ದ ನಟಿ, ರಾಜಕಾರಣಿ ರಮ್ಯಾ ಇದೀಗ ಮತ್ತೊಂದು ಸುದ್ದಿ ನೀಡಿದ್ದಾರೆ. ಈ ಬಾರಿ ಒಂದು ಪೋಟೋ ಶೇರ್ ಮಾಡಿಕೊಂಡಿದ್ದು ರಮ್ಯಾ ಮತ್ತೆ ಚಿತ್ರರಂಗದತ್ತ ಹೆಜ್ಜೆ ಇಟ್ಟಿದ್ದಾರಾ?
ಕೂದಲು ಕಟ್ ಮಾಡಿಸಿಕೊಳ್ಳುತ್ತಿರುವ ಪೋಟೋವನ್ನು ರಮ್ಯಾ ಅಪ್ ಲೋಡ್ ಮಾಡಿದ್ದು ಹಲವು ಪ್ರಶ್ನೆಗಳು ಎದ್ದಿವೆ.
ಕೇರಳದಲ್ಲಿ ಗರ್ಭಿಣಿ ಆನೆಗೆ ಅನಾನಸ್ ನಲ್ಲಿ ದುರುಳರು ಪಟಾಕಿ ಇಟ್ಟು ಕೊಂದ ಪ್ರಕರಣದ ಕುರಿತು ಮಾತನಾಡಿ ರಮ್ಯಾ ಸೋಶಿಯಲ್ ಮೀಡಿಯಾಕ್ಕೆ ಕಂ ಬ್ಯಾಕ್ ಮಾಡಿದ್ದರು.
ತಮ್ಮ ಇಸ್ಟಾ ಗ್ರ್ಯಾಮ್ ಸ್ಟೋರಿಯಲ್ಲಿ ಕೂದಲು ಕಟ್ ಮಾಡಿಸಿಕೊಳ್ಳುತ್ತಿರುವ ಪೋಟೋ ಶೇರ್ ಮಾಡಿದ್ದಾರೆ.
ಹಾಗಾದರೆ ರಮ್ಯಾ ಅಭಿಮಾನಿಗಳಿಗೆ ಶುಭ ಸುದ್ದಿಯನ್ನು ನೀಡಲಿದ್ದಾರಾ? ಮತ್ತೆ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರಾ? ಎಂಬ ಪ್ರಶ್ನೆ ಸಹ ಮೂಡಿದೆ.
ಹಿಂದೊಮ್ಮೆ ಅದು ಯಾವ ಕಾರಣಕ್ಕೋ ಗೊತ್ತಿಲ್ಲ ರಮ್ಯಾ ಮತ್ತು ರಕ್ಷಿತಾ ನಡುವೆ ಮುನಿಸಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನು ಒಬ್ಬರು ಫಾಲೋ ಮಾಡಲು ಆರಂಭಿಸಿದ್ದಾರೆ.
ರಮ್ಯಾ ವಿದೇಶದಲ್ಲಿರುವ ತಮ್ಮ ಗೆಳೆಯನನ್ನು ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಹಿಂದಿನ ಲೋಕಸಭಾ ಚುನಾವಣೆ ವೇಳೆ ರಮ್ಯಾ ಮತ್ತೆ ಮಂಡ್ಯದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಅವರ ತಾಯಿ ಹೇಳಿದ್ದರು.
ಕಾಂಗ್ರೆಸ್ ಸೋಶಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥೆಯಾಗಿದ್ದ ರಮ್ಯಾ ಬದಲಾದ ಸ್ಥಿತಿಯಲ್ಲಿ ಮತ್ತೆ ಸಿನಿಮಾ ರಂಗದತ್ತ ಹೊರಳುವ ಲಕ್ಷಣಗಳು ಗೋಚರವಾಗಿವೆ.