ಬರ್ತಾ ಬರ್ತಾ ರಶ್ಮಿಕಾ ಮಂದಣ್ಣ ಆಗ್ತಿದ್ದಾಳೆ: ಹಾಟ್ ಆಗಿ ಪೋಸ್ ನೀಡಿದ ಮೇಘಾ ಶೆಟ್ಟಿಗೆ ನೆಟ್ಟಿಗರ ತರಾಟೆ
ಬರ್ತಾ ಬರ್ತಾ ರಶ್ಮಿಕಾ ಮಂದಣ್ಣ ಆಗ್ತಿದ್ದಾಳೆ ಎಂದು ಹಾಟ್ ಆಗಿ ಪೋಸ್ ನೀಡಿದ ಮೇಘಾ ಶೆಟ್ಟಿಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.
ಕನ್ನಡ ಕಿರುತೆರೆ ಮೂಲಕ ಪ್ರಸಿದ್ಧಿ ಪಡೆದಿರುವ ನಟಿ ಮೇಘಾ ಶೆಟ್ಟಿ ಸದ್ಯ ಸಿನಿಮಾದ ಕಡೆ ಗಮನ ಹರಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲ್ಲಿ ಧಾರಾವಾಹಿ ಮೂಲಕ ಮೇಘಾ ಶೆಟ್ಟಿ ಮನೆ ಮಾತಾಗಿದ್ದರು.
ಅನು ಸಿರಿಮನೆ ಪಾತ್ರದ ಮೂಲಕ ಮೊದಲ ಬಾರಿಗೆ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬಂದ ಮೇಘಾ ದೊಡ್ಡ ಮಟ್ಟದ ಖ್ಯಾತಿಗಳಿಸಿದರು. ಸದ್ಯ ಜೊತೆ ಜೊತೆಯಲಿ ಧಾರಾವಾಹಿ ಮುಕ್ತಾಯವಾಗಿದೆ. ಆದರೆ ಅನು ಸಿರಿಮನೆ ಪಾತ್ರ ಅಭಿಮಾನಿಗಳಲ್ಲಿ ಮನದಲ್ಲಿ ಗಟ್ಟಿಯಾಗಿ ಬೇರೂರಿದೆ.
ಸದ್ಯ ಧಾರಾವಾಹಿ ಮುಗಿಸಿರುವ ಮೇಘಾ ಶೆಟ್ಟಿ ಸಿನಿಮಾಗಳ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಉತ್ತಮ ಪಾತ್ರಗಳಿಗಾಗಿ ಎದುರು ನೋಡುತ್ತಿದ್ದಾರೆ. ಈ ನಡುವೆ ಮೇಘಾ ಶೆಟ್ಟಿ ಫೋಟೋಶೂಟ್ಗಳಲ್ಲಿ ಮಿಂಚುತ್ತಿದ್ದಾರೆ.
ಇತ್ತೀಚಿಗಷ್ಟೆ ವರ್ಕೌಟ್ ಫೋಟೋಗಳನ್ನು ಶೇರ್ ಮಾಡಿದ್ದ ನಟಿ ಮೇಘಾ ಶೆಟ್ಟಿ ಇದೀಗ ಮತ್ತಷ್ಟು ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮೇಘಾ ಶೆಟ್ಟಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನೀರಿನ ಮಧ್ಯೆ ಹಾಟ್ ಆಗಿರುವ ಮೇಘಾ ಶೆಟ್ಟಿಯ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ನೀರಿನ ಮೇಲೆ ಬೆಡ್ ಹಾಕಿ ಅದರ ಮೇಲೆ ಮೇಘಾ ಶೆಟ್ಟಿ ತರಹೇವಾರಿ ಪೋಸ್ ನೀಡಿದ್ದಾರೆ. ಬಿಳಿ ಬಣ್ಣದ ಡ್ರೆಸ್ ನಲ್ಲಿ ಮೇಘಾ ಮಿಂಚಿದ್ದಾರೆ.
ಮೇಘಾ ಶೆಟ್ಟಿ ಹಾಟ್ ಫೋಟೋಗಳಿಗೆ ತರಹೇವಾರಿ ಕಾಮೆಂಟ್ಗಳು ಹರಿದು ಬರುತ್ತಿವೆ. ಬಹುತೇಕರು ಸೆಕ್ಸಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಅನೇಕರು ರಶ್ಮಿಕಾ ಮಂದಣ್ಣ ಆಗ್ತಿದ್ದಾರೆ ಎಂದು ತರಾಟೆ ತೆಗೆದುಕೊಂಡಿದ್ದಾರೆ.
'ಬರ್ತಾ ಬರ್ತಾ ರಶ್ಮಿಕಾ ಮಂದಣ್ಣ ಆಗ್ತಾ ಇದಾಳೆ' ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಿಕಿನಿ ಫೋಟೋಗಳನ್ನು ಪೋಸ್ಟ್ ಮಾಡು ಎಂದು ಮತ್ತೋರ್ವ ಕಾಮೆಂಟ್ ಮಾಡಿದ್ದಾರೆ.
ಮೇಘಾ ಶೆಟ್ಟಿ ದಿಲ್ಪಸಂದ್ ಸಿನಿಮಾ ಮೂಲಕ ಬೆಳ್ಳಿ ಪರದೆ ಮೇಲೆ ಮಿಂಚಿದರು. ಆದರೆ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಬಳಿಕ ಟ್ರಿಬಲ್ ರೈಡಿಂಗ್ ಸಿನಿಮಾ ಮೂಲಕ ಮತ್ತೆ ದೊಡ್ಡ ಪರದೆ ಮೇಲೆ ಬಂದರು. ಗೋಲ್ಡನ್ ಸ್ಟಾರ್ ಗಣೇಶ್ಗೆ ನಾಯಕಿಯಾಗಿ ನಟಿಸಿದರು.
ಸದ್ಯ ಧಾರಾವಾಹಿ ಮುಗಿಸಿರುವ ಮೇಘಾ ಶೆಟ್ಟಿ ಮುಂದಿನ ಸಿನಿಮಾ ಇನ್ನೂ ಅನೌನ್ಸ್ ಮಾಡಿಲ್ಲ. ಸದ್ಯದಲ್ಲೇ ಹೊಸ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಆದರೆ ಯಾವ ಸಿನಿಮಾ, ಯಾವಾಗ ಎಂದು ಅವರೇ ಬಹಿರಂಗ ಪಡಿಸಬೇಕಿದೆ.