ಹೊಸ ಮನೆ ಗೃಹ ಪ್ರವೇಶ ಮಾಡಿದ ನಟ ಯಶ್ ಮತ್ತು ರಾಧಿಕಾ ಪಂಡಿತ್!
ವಿಡ್ಸನ್ ಮ್ಯಾನರ್ ಬಳಿ ಇರುವ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಖರೀದಿಸಿದ ಯಶ್. ಹೊಸ ಮನೆ ಹೀಗಿದೆ.
ಬೆಂಗಳೂರಿನ ಪ್ರತಿಷ್ಠಿತ ಸ್ಥಳದಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ ರಾಕಿಂಗ್ ದಂಪತಿ.
ವಿಡ್ಸನ್ ಮ್ಯಾನರ್ ಬಳಿ ಇರುವ ಪ್ರೆಸ್ಟೀಜ್ ಅಪಾರ್ಟ್ಮೆಂಟ್‌ನ ಪೆಂಟ್ ಹೌಸ್.
ಮೂರು ವರ್ಷಗಳ ಹಿಂದೆಯೇ ಮನೆ ಖರೀದಿಸಿದ ಯಶ್.
ಮನೆಯ ಒಳಾಂಗಣ ವಿನ್ಯಾಸಕ್ಕಾಗಿ ಸಾಕಷ್ಟು ಸಮಯ ತೆಗೆದುಕೊಂಡ ಕಾರಣ ಗೃಹ ಪ್ರವೇಶ ತಡವಾಗಿ ನೆರವೇರಿದೆ.
ಆಷಾಡ ಮಾಸ ಆರಂಭಕ್ಕೂ ಮುನ್ನವೇ ಗೃಹ ಪ್ರವೇಶ ಮಾಡಬೇಕೆಂದು ಹಿಂದೆಯೇ ನಿರ್ಧರಿಸಿದ್ದರು.
ಕೊರೋನಾ ಕಾರಣದಿಂದ ಕುಟುಂಬಸ್ಥರು ಮಾತ್ರ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಯಶ್ ಮತ್ತು ರಾಧಿಕಾ ಕೇಸರಿ ಬಣ್ಣದ ಕಾಂಬಿನೇಷನ್ ಉಡುಪಿನಲ್ಲಿ ಕಂಗೊಳ್ಳಿಸುತ್ತಿದ್ದಾರೆ.
ಮನೆಯೊಳಗೆ ವಿಭಿನ್ನವಾದ ಹೂವಿನ ಅಲಂಕಾರ ಮಾಡಲಾಗಿತ್ತು.