ಪ್ರಾಮಾಣಿಕತೆ, ಧೈರ್ಯ ಫೆಬ್ರವರಿಯಲ್ಲಿ ಹುಟ್ಟಿದವರ ವಿಶೇಷತೆ
ಫೆಬ್ರವರಿ ವರ್ಷದ ಎರಡನೇ ತಿಂಗಳು, ವ್ಯಾಲೆಂಟೈನ್ಸ್ ಡೇ, ಪ್ರೆಸಿಡೆಂಟ್ಸ್ ಡೇ ಮತ್ತು ಚಳಿಗೆ ಗುಡ್ ಬೈ ಹೇಳುವ ಈ ಸಮಯದಲ್ಲಿ ಹುಟ್ಟಿದ ಎಲ್ಲಾ ಅದ್ಭುತ ಜನರ ಹುಟ್ಟುಹಬ್ಬ ಸೇರಿ ಕೆಲವು ದೊಡ್ಡ ಸಂಭ್ರಮಾಚರಣೆಗಳೂ ಈ ತಿಂಗಳ ವಿಶೇಷ. ಫೆಬ್ರವರಿಯಲ್ಲಿ ಜನಸಿರುವ ಎಲ್ಲ ಶಿಶುಗಳು ಸೃಜನಾತ್ಮಕ ಮತ್ತು ಸಾಹಸಮಯ ಗುಣಗಳನ್ನು ಹೊಂದಿರುತ್ತಾರೆ. ಈ ತಿಂಗಳಲ್ಲಿ ಜನಿಸಿದವರು ತುಂಬಾ ಧೈರ್ಯವಂತರು ಮತ್ತು ಅತ್ಯಂತ ಸತ್ಯವಂತರೂ ಹೌದು. ಅವರು ಸುಳ್ಳು ಹೇಳಲಾರರು ಎಂದಲ್ಲ, ಆದರೆ ಪ್ರಾಮಾಣಿಕರಿರುವುದು ಅವರಿಗೆ ಬಹಳ ಮುಖ್ಯ.
ಫೆಬ್ರವರಿ-ಜನಿಸಿದ ಮಕ್ಕಳು ತುಂಬಾ ಸಹಾನುಭೂತಿಯುಳ್ಳವರಾಗಿರಬಲ್ಲರು ಮತ್ತು ಸಹಜವಾಗಿ ಇತರರ ಬಗ್ಗೆ ಸಹಾನುಭೂತಿಯನ್ನು ಅನುಭವಿಸಬಹುದು. ಅವರು ಚಿಂತನಶೀಲರು ಮತ್ತು ದಯಾಳುಗಳು ಮತ್ತು ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ತುಂಬಾ ಆಪ್ತವಾಗಿರಬಲ್ಲರು.
ಫೆಬ್ರವರಿಯಲ್ಲಿ ಜನಿಸಿದ ಮಕ್ಕಳು ತುಂಬಾ ಇಂಟೆಲಿಜೆಂಟ್ ಆಗಿರುತ್ತಾರೆ. ಅವರು ಸದಾ ಕ್ರಿಯೇಟಿವ್ ಐಡಿಯಾಗಳ ಬಗ್ಗೆ ಯೋಚಿಸುತ್ತಾರೆ. ಔಟ್ ಅಫ್ ದ ಬಾಕ್ಸ್ ಆಗಿ ಎನಾದರೂ ಹೊಸ ಐಡಿಯಾಗಳ ಬಗ್ಗೆ ಯೋಚನೆ ಮಾಡೋ ಶಕ್ತಿ ಇವರಿಗಿರುತ್ತದೆ.
ಫೆಬ್ರವರಿಯಲ್ಲಿ ಜನಿಸಿದವರು ತುಂಬಾ ನೇರ ಮತ್ತು ದಿಟ್ಟತನದಿಂದ ಮಾತನಾಡುತ್ತಾರೆ. ಅವರು ಯಾವಾಗಲೂ ಪ್ರಾಮಾಣಿಕರಾಗಿರುತ್ತಾರೆ. ಅವರು ತಪ್ಪು ಮಾಡಿದರೂ ಎಲ್ಲರನ್ನೂ ಮೆಚ್ಚಿಸುವ ಉತ್ತರವನ್ನು ನೀಡುವುದನ್ನು ಎಂದಿಗೂ ನೋಡಲಾರಿರಿ. ತಾವು ತಪ್ಪು ಮಾಡಿದರೂ ಒಪ್ಪಿಕೊಳ್ಳುತ್ತಾರೆ.
ಫೆಬ್ರವರಿಯಲ್ಲಿ ಜನಿಸಿದ ವ್ಯಕ್ತಿ ನಿಮಗೆ ತಿಳಿದಿದ್ದರೆ, ಆತ ಅಥವಾ ಆಕೆ ತುಂಬಾ ನಿಷ್ಠಾವಂತರು ಮತ್ತು ವಿಶ್ವಾಸಾರ್ಹರು ಎಂಬುದನ್ನು ಒಪ್ಪುತ್ತೀರಿ. ಜೊತೆಗೆ, ಅವರು ಯಾವುದೇ ರಿಲೇಶನ್ - ಸಂಬಂಧಗಳಲ್ಲೂ ನಿಷ್ಠೆಯಿಂದ ಇರುತ್ತಾರೆ.
ಬೇರೆಯವರ ವಿಚಾರಗಳನ್ನು ಕದಿಯುವುದು ಅಥವಾ ಬೇರೆಯವರು ಮಾಡುವ ಕೆಲಸವನ್ನು ನಕಲು ಮಾಡುವುದು ಫೆಬ್ರವರಿಯಲ್ಲಿ ಹುಟ್ಟಿದವರ ಕೆಲಸವಲ್ಲ. ಇವರು ಯಾವಾಗಲೂ ತಮ್ಮ ಮೂಲ ಸ್ವಭಾವಕ್ಕೆ ಅಂಟಿಕೊಳ್ಳುತ್ತಾರೆ. ನಕಲಿಸುವುದನ್ನು ದ್ವೇಷಿಸುತ್ತಾರೆ. ಅವರು ಯಶಸ್ವಿಯಾಗಬೇಕಾದರೆ ಜನರ ಐಡಿಯಾಗಳನ್ನು ನಕಲು ಮಾಡುವುದೇ ಇಲ್ಲ.
ಇವರು ತಮ್ಮ ಪ್ರತಿ ಕ್ಷಣವನ್ನು ಹೇಗೆ ಬದುಕಬೇಕೆಂದು ತಿಳಿದಿರುತ್ತಾರೆ. ಜೀವನವನ್ನು ಪರಿಪೂರ್ಣವಾಗಿ ಜೀವಿಸುತ್ತಾರೆ. ಅವರು ಅವಸರದಲ್ಲಿ ಅಥವಾ ವೇಗದ ಜೀವನ ನಡೆಸುವುದಿಲ್ಲ. ಸಣ್ಣ ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡು ಕೊಳ್ಳುತ್ತಾರೆ ಮತ್ತು ಆದರಿಂದ ತಮ್ಮ ಸುತ್ತ ನಡೆಯುವ ಪ್ರತಿಯೊಂದೂ ಸುಂದರವಾದ ಸಂಗತಿಯನ್ನು ಗಮನಿಸುತ್ತಾರೆ. ಹಾಗೂ ಸಂತೋಷ ಪಡುತ್ತಾರೆ.
ಫೆಬ್ರುವರಿಯಲ್ಲಿ ಜನಿಸಿದವರು ತಮ್ಮ ಗುರಿಗಳಿಂದ ಎಂದಿಗೂ ವಿಮುಖರಾಗುವುದಿಲ್ಲ. ಇವರು ಯಾವಾಗಲೂ ತಮ್ಮ ಗುರಿಗಳ ಮೇಲೆ ಕೇಂದ್ರೀಕರಿಸುತ್ತಾರೆ ಮತ್ತು ಸವಾಲಿನ ಪರಿಸ್ಥಿತಿಯನ್ನು ನಿಭಾಯಿಸುವುದನ್ನು ಇಷ್ಟಪಡುತ್ತಾರೆ. ತಮ್ಮ ಸಂಕಲ್ಪ ಮತ್ತು ಇಚ್ಛಾಶಕ್ತಿಯು ತಮ್ಮ ಗುರಿ ಸಾಧಿಸಲು ಸಹಾಯ ಮಾಡುವ ಅತ್ಯಂತ ಪ್ರಮುಖ ಅಂಶಗಳಲ್ಲಿ ಒಂದು ಎಂದು ಅವರು ಭಾವಿಸುತ್ತಾರೆ. ತಮ್ಮ ನಿರ್ಧಾರಗಳಿಂದ ಹಿಂದೆ ಸರಿಯುವುದು ಅಪರೂಪ.
ಈ ತಿಂಗಳಲ್ಲಿ ಜನಿಸಿದವರು ಯಾವಾಗಲೂ ಅಹಂ ಮತ್ತು ಸ್ವಾರ್ಥದಿಂದ ದೂರ ಇರುತ್ತಾರೆ. ಅವರು ಪ್ರತಿಯೊಬ್ಬರ ಮೇಲೆ ನಿಸ್ವಾರ್ಥ ಪ್ರೀತಿಯನ್ನು ಹೊಂದಿದ್ದಾರೆ, ಆದ್ದರಿಂದ ಅವರು ಅಗತ್ಯವಿರುವವರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ.
ಮತ್ತೊಬ್ಬರ ಮನಸ್ಸನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವವರಾಗಿರುತ್ತಾರೆ. ಯಾವಾಗ, ಹೇಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬೇಕೆಂಬ ಸೂಕ್ಷ್ಮ ಈ ತಿಂಗಳಲ್ಲಿ ಹುಟ್ಟಿದವರ ವಿಶೇಷ ಗುಣ.
ಫೆಬ್ರವರಿ ತಿಂಗಳಲ್ಲಿ ಜನಿಸಿದವರು ತಮ್ಮ ಕುಟುಂಬ ಮತ್ತು ಸಂಗಾತಿಗಳಿಗೆ ನಿಷ್ಠರಾಗಿರುತ್ತಾರೆ. ಹೀಗಾಗಿ ಅವರ ನಿಷ್ಠೆ ಅವರನ್ನು ಪರಿಪೂರ್ಣ ಸಂಗಾತಿಯನ್ನಾಗಿ ಮಾಡುತ್ತದೆ. ಇದು ಈ ಜನರ ಅತ್ಯುತ್ತಮ ಗುಣಗಳಲ್ಲಿ ಒಂದು.