ಈ ಟಿಪ್ಸ್ ಫಾಲೋ ಮಾಡಿ 2021 ರಲ್ಲಿ ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳಿ!
ಕೊರೋನಾ ವೈರಸ್ ಕಾರಣದಿಂದ ಉದ್ಯೋಗಗಳನ್ನು ಹುಡುಕುವುದು ಒಂದು ತುಂಬಾ ಕಷ್ಟ. ಆದ್ದರಿಂದ, ಉದ್ಯೋಗ ಪಡೆಯಲು ಫಾಲೋ ಮಾಡಬೇಕಾದ ಸ್ಮಾರ್ಟ್ ಮಾರ್ಗಗಳು ಇಲ್ಲಿವೆ.
2020ರ ಸಾಂಕ್ರಾಮಿಕ ರೋಗ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಮುಂದಿನ ವರ್ಷ ಕೆಲಸ ಪಡೆಯಲು ಈ ಸುಲಭ ಮತ್ತು ಬೆಸ್ಟ್ ಹಂತಗಳನ್ನು ಅನುಸರಿಸಿ.
ಉದ್ಯೋಗವನ್ನು ಹುಡುಕುವ ಮೊದಲು ರೆಸೂಮ್ ಅನ್ನು ರೂಪಿಸಿ.
ಲಿಂಕ್ಡ್‌ಇನ್‌ನಲ್ಲಿ ಖಾತೆಯನ್ನು ರಚಿಸಿ ಮತ್ತು ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿ. ಇದರಲ್ಲಿ ನಿಮಗೆ ಆಸಕ್ತಿ ಇರುವ ಕಂಪನಿಗಳನ್ನು ಫಾಲೋ ಮಾಡಬಹುದು. ಪೋಸ್ಟ್‌ಗೆ ಕಾಮೆಂಟ್‌ಗಳನ್ನು ನೀಡಬಹುದು. ಕಾಮೆಂಟ್‌ಗಳು ಪ್ರೊಫೆಷನಲ್ ಆಗಿರಲಿ. ಉದ್ಯೋಗ ಮಾರುಕಟ್ಟೆಯನ್ನು ಮೊದಲೇ ತಿಳಿದುಕೊಳ್ಳುವುದು ಒಳ್ಳೆಯದು.
ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕಿಸಿ. ಕೆಲಸ ಪಡೆಯುವಲ್ಲಿ ಇದು ಯಾವಾಗಲೂ ಸಹಾಯ ಮಾಡುತ್ತದೆ. ಕಂಪನಿಯಲ್ಲಿ ಸಂಪರ್ಕ ಹೊಂದಿರುವುದು ಕೆಲಸ ಗಳಿಸುವಲ್ಲಿ ಪ್ಲಾಸ್ ಪಾಯಿಂಟ್ ಆಗಬಹುದು, ಖಾಲಿ ಹುದ್ದೆಗಳ ಬಗ್ಗೆ ನೀವು ತಿಳಿದುಕೊಳ್ಳಿ.
ಒಂದೇ ಉದ್ಯೋಗಕ್ಕೆ ನಿಮ್ಮನ್ನು ಮಿತಿಗೊಳಿಸಬೇಡಿ. ಉತ್ತಮ ಕಂಪನಿಯಲ್ಲಿ ಯಾವುದೇ ಖಾಲಿ ಸ್ಥಾನವನ್ನು ಪಡೆದರೆ, ಕೆಲಸ ನಿಮಗೆ ಸರಿ ಹೊಂದುವುದಿಲ್ಲವಾದರೂ ನಿಮ್ಮ ಸಿವಿ ಮತ್ತು ಕವರ್ ಲೆಟರ್ ಕಳುಹಿಸಿ.
ಡಿಜಿಟಲ್ ಯುಗದಲ್ಲಿ ನಿಮಗೆ ತಿಳಿದಿಲ್ಲದ ಹಲವು ಉದ್ಯೋಗಾವಕಾಶಗಳಿವೆ. ಆದ್ದರಿಂದ, ನಿಮ್ಮ ಹುಡುಕಾಟ ಆಯ್ಕೆಗಳನ್ನು ವಿಸ್ತರಿಸಿ ಮತ್ತು ಉದ್ಯೋಗ ಪಡೆಯಲು ಅನ್‌ಲೈನ್‌ನಲ್ಲಿ ಹುಡುಕಿ.
ಕೆಲಸ ಮಾಡಲು ಹೊರಟಿರುವ ಕಂಪನಿಯ ಬಗ್ಗೆ ಯಾವಾಗಲೂ ಸಂಪೂರ್ಣ ಸಂಶೋಧನೆ ಮಾಡಿ. ಆತ್ಮವಿಶ್ವಾಸದಿಂದಿರಿ .
ನಿಮ್ಮ ವಿಶ್ವವಿದ್ಯಾಲಯವು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ನೀವು ಅರೆಕಾಲಿಕ ಉದ್ಯೋಗಗಳನ್ನು ಪಡೆಯಬಹುದು. ಇದು ಅನುಭವವದ ಜೊತೆ ಸ್ವಲ್ಪ ಹಣವನ್ನು ನೀಡುತ್ತದೆ.
ಯಾವುದೇ ಹೆಸರಾಂತ ಅಥವಾ ಆರಂಭಿಕ ಕಂಪನಿಗಳೊಂದಿಗೆ ಇಂಟರ್ನಶಿಪ್ ಪಡೆಯಲು ಪ್ರಯತ್ನಿಸಿ.
ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸಾಕಷ್ಟು ನೇಮಕಾತಿ ಏಜೆನ್ಸಿಗಳಿವೆ. ನೋಂದಣಿ ಮಾಡಿ ಕೊಳ್ಳಿ.ಕೆರಿಯರ್ ಮೇಳಗಳಿಗೆ ಹಾಜರಾಗಿ. ಉದ್ಯೋಗ ಮಾರುಕಟ್ಟೆ ಹೇಗಿದೆ ಎಂದು ತಿಳಿಯಲು ಸಹ ಸಹಾಯವಾಗುತ್ತದೆ.