ಉದ್ಯೋಗ ಸಂದರ್ಶನ ಎದುರಿಸುವುದೊಂದು ಕಲೆ, ಇಲ್ಲಿ ಗೆಲ್ಲೋದು ಹೇಗೆ?

First Published 12, Sep 2020, 7:30 PM

ಹಿಂದೊಂದು ಕಾಲವಿತ್ತು. ಕೆಲಸಕ್ಕೆ ಸೇರಬೇಕೆಂದರೆ ಪರೀಕ್ಷೆ ಬರೆಯಬೇಕಿತ್ತು, ಅಂಕ ಬಂದು, ಅರ್ಹರಾದರೆ ಕೆಲಸ ಸಿಗುತ್ತಿತ್ತು. ಇದೀಗ ಪರೀಕ್ಷೆಯೂ ಬರೆಯಬೇಕು. ಬುದ್ಧಿಮತ್ತೆಯೊಂದಿಗೆ ನಿಮ್ಮ ಆ್ಯಪ್ಟಿಟ್ಯೂಡ್ ಟೆಸ್ಟಲ್ಲೂ ಪಾಸ್ ಆಗಬೇಕು. ಜೊತೆಗೆ ವ್ಯಕ್ತಿತ್ವವನ್ನು ಸಂದರ್ಶನದಲ್ಲಿ ಪರೀಕ್ಷಿಸಲಾಗುತ್ತಿದೆ. ನಿಮ್ಮ ಆತ್ಮ ವಿಶ್ವಾಸದ ಮಟ್ಟ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ಹಾಗಾಗಿ ಉದ್ಯೋಗವೊಂದರ ಸಂದರ್ಶನಕ್ಕೆ ಹೋದಾಗ ಕೇಳುವ ಪ್ರಶ್ನೆಗಳಿಗೆ ಹುಷಾರಾಗಿ ಉತ್ತರಿಸಬೇಕು. ಅಷ್ಟಕ್ಕೂ ನಿಮ್ಮ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು, ನೀವು ಹೇಗೆ ಉತ್ತರಿಸಬೇಕು, ಇಲ್ಲಿವೆ ಟಿಪ್ಸ್...

ಯಾವುದಾದರೂ ಕಂಪನಿಯಲ್ಲಿ ಯಾರಾದರೂ ಪರಿಚಯದವರಿದ್ದರೆ, ಅಥವಾ ದೊಡ್ಡ ಹುದ್ದೆಯಲ್ಲಿರೋರು ನಿಮ್ಮ ಸಂಬಂಧಿಯಾಗಿದ್ದರೆ ಅದನ್ನು ಎನ್‌ಕ್ಯಾಷ್ ಮಾಡಿಕೊಳ್ಳಲು ಯತ್ನಿಸಬೇಡಿ. ಸಂದರ್ಶಕರ ಹತ್ತಿರ ಸಂಬಂಧದ ಬಗ್ಗೆ ಪುರಾಣ ಮಾಡಬೇಡಿ. ಅಲ್ಲದೇ ತಮ್ಮ ಕುಟುಂಬದಲ್ಲಿರುವ ಯಾವುದೋ ಸಾಧಕರ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದೂ ಬೇಡ. ಸಂಬಂಧದ ಹೊರತಾಗಿ ಇದೀಗ ಕೇವಲ ವ್ಯವಹಾರಕ್ಕೆ ಮಹತ್ವ ಕೊಡುವ ಕಾಲವಿದು. ಉದ್ಯೋಗ ಸಂದರ್ಶನದಲ್ಲೆಲ್ಲಾ ಬಾದರಾಯನ ಪುರಾಣ ತೆಗೆಯುವುದು ಬೇಡ.

ಸಂದರ್ಶನಕ್ಕೆ ಹೋಗುವಾಗ ನೀವು ಮಾಡಬಹುದಾದ ಕೆಲಸದ ಬಗ್ಗೆ ಹಾಗೂ ನಿಮಗಿರುವ ಕೌಶಲ್ಯದ ಬಗ್ಗೆ ಒಂದು ಕ್ಲೀಯರ್ ಪಿಕ್ಚರ್ ನಿಮಗಿರಲಿ. ಸುಖಾ ಸುಮ್ಮನೆ ನೀವು ಯಾವ ಕೆಲಸ ಮಾಡಲು ಸಿದ್ಧರೆಂದು ಕೇಳಿದಾಗ, 'ಯಾವುದಾದರೂ ಕೊಡಿ ಸರ್, ಮಾಡುತ್ತೇನೆ,' ಎಂಬ ಹಾರಿಕೆ ಉತ್ತರ ಬೇಡ. Be Specific. ನೀವು ಏನು ಮಾಡಬಲ್ಲಿರಿ, ಏನು ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನಿಮಗಿರಲಿ.

ಕಂಪನಿಯೊಂದರ ಕೆಲಸದ ಸಂದರ್ಶನಕ್ಕೆ ಹೋಗುವಾಗ ಆ ಕಂಪನಿ ಬಗ್ಗೆ ನಿಮಗೇನು ಗೊತ್ತು ಎಂದು ಕೇಳಿಯೇ ಕೇಳುತ್ತಾರೆ. ಏನೂ ಗೊತ್ತಿಲ್ಲ, ಗೊತ್ತು ಮಾಡಿಕೊಳ್ಳುತ್ತೇನೆಂಬ ಉತ್ತರ ನಿಮ್ಮದಾಗಬಾರದು. ಚೆನ್ನಾಗಿ ಗೂಗಲ್ ಸರ್ಚ್ ಮಾಡಿಕೊಂಡು, ಕಂಪನಿ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ಮಾಹಿತಿ ಕಲೆ ಹಾಕ್ಕೊಂಡು ಹೋಗಿ. ನಿಮಗೆ ಗೊತ್ತಿರುವಷ್ಟನ್ನು ಸ್ಫುಟವಾಗಿ ವಿವರಿಸಿ. ಅದು ಸಂದರ್ಶಕರಿಗೆ impress ಆಗುವಂತಿರಲಿ.

ಬೇರೆ ಅಭ್ಯರ್ಥಿಗಳಿಗಿಂತ ನೀವು ಯಾವ ರೀತಿ ವಿಶೇಷ? ನಿಮ್ಮಿಂದ ಕಂಪನಿಗೆ ಏನು ಲಾಭವಾಗಬಹುದೆಂದು ಕೇಳುವುದೂ ಸಹಜ. ನಿಮ್ಮಲ್ಲಿರುವ ಸ್ಟ್ರೆಂಥ್ ಏರಿಯಾ ಏನೆಂಬುದನ್ನು ಸ್ಪಷ್ಟವಾಗಿ ಹೇಳಿ. ಹಾಗಂತ ಅದು ಕೇವಲ ಹೊಗಳಿಕೆಗೆ ಮಾತ್ರ ಸೀಮಿತವಾಗದಂತೆ ಡಿಕೊಳ್ಳಿ. ಹೇಳುವಾಗ ಆತ್ಮ ವಿಶ್ವಾಸ ತುಂಬಿ ತುಳುಕುತ್ತಿರಲಿ.

ಕೆಲವೊಮ್ಮೆ ವೃತ್ತಿಯನ್ನೇ ಬದಲಿಸಬೇಕಾಗಿ ಬರುತ್ತದೆ. ಅದಕ್ಕೇನು ಕಾರಣ, ಆರಿಸಿಕೊಳ್ಳುತ್ತಿರುವ ವೃತ್ತಿಯಲ್ಲಿ ನಿಮಗಿರುವ ಆಸಕ್ತಿ, ಕೌಶಲ್ಯ, ಜ್ಞಾನವೇನು ಎಂಬುದನ್ನು ಹೇಳಿ. ನಿಮ್ಮನ್ನು ತೆಗೆದುಕೊಳ್ಳುತ್ತಿರುವುದರಿಂದ ಕಂಪನಿಗೆ ಲಾಭವಾಗಬೇಕೆಂಬುವುದು ಸಂದರ್ಶಕರಿಗೆ ಮನವರಿಕೆ ಮಾಡಿಕೊಡಿ.

ಕಂಪನಿ ಬದಲಾಯಿಸಲು ಮುಂದಾದರೆ ಅದಕ್ಕೆ ಕಾರಣ ಕೇಳುವುದು ಪಕ್ಕಾ. ಆಗ ತಾವು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿದ್ದ ನಡೆಯುತ್ತಿದ್ದ ರಾಜಕೀಯ, ಮನ್ಯೇಜ್‌ಮೆಂಟ್ ಹುಳುಕು...ಎಲ್ಲವನ್ನೂ ಹೇಳಲು ಹೋಗಬೇಡಿ. ತಮ್ಮ ಪ್ರತಿಭೆಗೆ ಸೂಕ್ತ ವೇದಿಕೆ ಈ ಕಂಪನಿಯಲ್ಲಿ ಸಿಗಬಹುದೆಂಬ ವಿಶ್ವಾಸವಿದೆ ಎಂದಷ್ಟೇ ಹೇಳಿ. ನಿಮ್ಮ ಬಗ್ಗೆ ಯಾವುದೇ ರೀತಿಯ ಸಂದೇಹ ಬಾರದಂತೆ ಎಚ್ಚರವಹಿಸಿ.

ಎಷ್ಟು ಸಂಬಳ ನಿರೀಕ್ಷಿಸುತ್ತೀರಿ, ಎಂದು ಕೇಳಿದಾಗ ತೋಚಿದಷ್ಟು ಕೊಡಿ, ಬೇರೆಯವರಿಗೆ ಎಷ್ಟು ಕೊಡಿತ್ತೀರೋ ಅಷ್ಟೇ ಕೊಡಿ ಎನ್ನಬೇಡಿ. ಬದಲಾಗಿ ಎಷ್ಟು ಎಕ್ಸ್‌ಪೆಕ್ಟ್ ಮಾಡುತ್ತಿದ್ದೀರಿ ಎಂಬುದನ್ನು ಹೇಳಿ. ನೀವು ಕೇಳುವ ಸ್ಯಾಲರಿ ಕೊಡಲು ಕಂಪನಿ ಒಪ್ಪಬೇಕು. ಅದರಿಂದ ಕಂಪನಿಗೆ ನಿಮ್ಮ ಬಗ್ಗೆ ಸದಾಭಿಪ್ರಾಯ ಮೂಡಬೇಕು. ಈ ಬಗ್ಗೆ ಎಚ್ಚರವಿರಲಿ.

ಈಗೀಗ ಪ್ರತಿ ಕಂಪನಿಗಳಿಗೂ ಪ್ರತಿಸ್ಪರ್ಧಿಗಳಿರುತ್ತಾರೆ. ಅವರನ್ನು ಹಿಮ್ಮೆಟ್ಟಿಸುವುದೇ ಪ್ರತಿಯೊಬ್ಬರ ಸವಾಲು. ಈ ಬಗ್ಗೆ ಪ್ರಶ್ನೆಯನ್ನು ಕೇಳಿಯೇ ಕೇಳುತ್ತಾರೆ. ಅದಕ್ಕೆ ಅಗತ್ಯವಿರೋ ಹೋಂ ವರ್ಕ್ ಮಾಡಿಕೊಂಡು ಸಂದರ್ಶನಕ್ಕೆ ಹೋಗಲೇಬೇಕು. ಸುಖಾ ಸುಮ್ಮನೆ ಗೋಲಿ ಮಾರೋ ಎಂಬಂಥ ಉತ್ತರದಿಂದ ಸಂದರ್ಶಕರು ಖುಷಿಯಾಗುವುದಿಲ್ಲ. ನಿಮ್ಮ ಉತ್ತರ convincing ಆಗಿರಬೇಕು ಎಂಬುವುದು ನೆನಪಿರಲಿ.

ನಿಮ್ಮ strength ಏನೇಂದು ಕೇಳಿದಾಕ್ಷಣ, ಸಿಕ್ಕಿದ್ದೇ ಸೀರುಂಡೆ ಎಂದು ನಿಮ್ಮನ್ನು ನೀವು ಕೊಚ್ಚಿ ಕೊಳ್ಳಲು ಆರಂಭಿಸಬೇಡಿ. ಬದಲಾಗಿ ಎಂಥದ್ದೇ ಸಂದರ್ಭವಾದರೂ tension ಮಾಡಿ ಕೊಳ್ಳದೇ ಪರಿಸ್ಥಿತಿಯನ್ನು ನಿಭಾಯಿಸುವಂತೆ ಇರುವ ನಿಮ್ಮ ತಾಳ್ಮೆ ಬಗ್ಗೆ ಹೇಳಿಕೊಳ್ಳಿ. ಎಚ್ಚರದಿಂದ ಮಾತನ್ನಾಡಿ. ಪ್ರತಿಯೊಂದೂ ಮಾತು ಆತ್ಮ ವಿಶ್ವಾಸದಿಂದ ತುಂಬಿರಲಿ. ಆಡುವ ಮಾತಿನಲ್ಲಿ ತೂಕವಿರಲಿ.

ಬರೀ ಸ್ಟ್ರೆಂಥ್ ಮಾತ್ರವಲ್ಲ, ನಿಮ್ಮ ವೀಕೆನೆಸ್‌ ಬಗ್ಗೆಯೂ ಕಂಪನಿಗಳೂ ಕೇಳುತ್ತವೆ. ಆಗ, ನಾನು ಸೋಮಾರಿ, ಅಸಡ್ಡೆ ತೋರುತ್ತೇನೆ, ಟೈಂ ಸೆನ್ಸ್ ಇಲ್ಲವೆಂದೆಲ್ಲ ಹೇಳಿದರೆ ನಿಮಗೆ ಗ್ಯಾರಂಟಿ ಕೆಲಸ ಕೊಡೋಲ್ಲ. ಬದಲಾಗಿ ಎಲ್ಲ ಕೆಲಸವನ್ನೂ ನಾನೇ ಮಾಡಬೇಕೆಂದು ಬಯಸುತ್ತೇನೆ. ನಾನು ಒಬ್ಬ perfectionist ಎಂಬುದಾಗಿ ಹೇಳಿ. ಹೇಳುವ ವೀಕ್ನೆಸ್ ಕಂಪನಿಗೆ ಲಾಭವಾಗುವಂತಿರಬೇಕು. ಈ ಬಗ್ಗೆ ಎಚ್ಚರವಹಿಸುವುದು ಅತ್ಯಗತ್ಯ. ಕೆಲಸಕ್ಕೆ ಯತ್ನಿಸುತ್ತಿದ್ದೀರಾ? Luck.

loader