3 ಮದುವೆ, ಮೂರು ಡೈವೋರ್ಸ್, ಒಂದು ಮಗುವಿನ ತಾಯಿ: ಬಿಜೆಪಿಗೆ ನಟಿ ಶ್ರಬಂತಿ ಚಟರ್ಜಿ!

First Published Mar 2, 2021, 2:32 PM IST

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಇಲ್ಲಿನ ಖ್ಯಾತ ನಟಿ ಶ್ರಬಂತಿ ಚಟರ್ಜಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸೋಮವಾರ ಅಅವರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೇ ಇವರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆಂದೂ ಹೇಳಲಾಗಿದೆ. ಇವರು ಬಂಗಾಳಿಗರಿಗೆ ಹೊಸಬರಲ್ಲ. ಬಂಗಾಳದ ಖ್ಯಾತ ಸಿನಿಮಾಗಳಲ್ಲಿ ನಟಿಸಿದ್ದಾರೆ. 13 ಆಗಸ್ಟ್ 1987ರಲ್ಲಿ ಜನಿಸಿದ, 33 ವರ್ಷದ ಈ ನಟಿ  23 ವರ್ಷದ ಹಿಂದೆ 1997ರಲ್ಲಿ ತಮ್ಮ ಮೊದಲ ಬಂಗಾಳಿ ಸಿನಿಮಾ ಮಾಡಿದ್ದರು. ಅಂದು ಅವರು ಕೇವಲ 10 ವರ್ಷದವರಾಗಿದ್ದರು. ಸಿನಿಮಾದಲ್ಲಿ ಅವರೆಷ್ಟು ಗ್ಲಾಮರಸ್ ಆಗಿದ್ದಾರೋ, ರಿಯಲ್ ಲೈಫ್‌ನಲ್ಲೂ ಅವರು ಅಷ್ಟೇ ಬೋಲ್ಡ್ ಆಗಿದ್ದಾರೆ.