ಪಕ್ಷ ಬದಲಾದ್ರು ಬಂಧ ಬದಲಾಗಿಲ್ಲ: ಡಿಕೆಶಿ ಮಗಳ ರಿಸೆಪ್ಶನ್‌ನಲ್ಲಿ ರಮೇಶ್ ಜಾರಕಿಹೊಳಿ
ಸಚಿವ ರಮೇಶ್ ಜಾರಕಿಹೊಳಿ ಡಿಕೆಶಿ ಪುತ್ರಿಯ ಮದುವೆ ರಿಸೆಪ್ಶನ್‌ನಲ್ಲಿ ಭಾಗವಹಿಸಿದ್ದಾರೆ. ನವ ವಧೂವರರಿಗೆ ಶುಭಾಶಯ ತಿಳಿಸಿದ್ದಾರೆ.
ಪಕ್ಷದ ಹೊರತಾಗಿ ರಾಜಕೀಯ ಮುಖಂಡರು ವೈಯಕ್ತಿಕ ಜೀವನದಲ್ಲಿ ಸಂಬಂಧಗಳನ್ನು ಚೆನ್ನಾಗಿ ಇಟ್ಟುಕೊಂಡಿರುತ್ತಾರೆ.
ಪರಸ್ಪರ ವಿರುದ್ಧ ಹೇಳಿಕೆ, ಕೆಸರೆರಚಾಟದ ಹೊರತಾಗಿ ಆತ್ಮೀಯತೆ ಉಳಿಸಿಕೊಂಡಿರುತ್ತಾರೆ. ಇದಕ್ಕೆ ಸಾಕ್ಷಿಯಂತಿದೆ ಈ ಫೋಟೋ
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಡಿಕೆಶಿ ಪುತ್ರಿಯ ವಿವಾಹದಲ್ಲಿ ಭಾಗವಹಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿ. ವಿ.ಜಿ. ಸಿದ್ಧಾರ್ಥ ಅವರ ಪುತ್ರ ಅಮರ್ತ್ಯ ಹೆಗ್ಡೆ ಮದುವೆ ಫೆ.14ರ ಪ್ರೇಮಿಗಳ ದಿನದಂದು ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದಿತ್ತು.
ಇದೀಗ ಮದುವೆ ರಿಸೆಪ್ಶನ್ನಲ್ಲಿ ಜಾರಕಿಹೊಳಿ ಭಾಗವಹಿಸಿ ನವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.
ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಬುಧವಾರ ಅದ್ಧೂರಿಯಾಗಿ ನೆರವೇರಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಸೇರಿದಂತೆ ನೂರಾರು ಗಣ್ಯರು ಭಾಗವಹಿಸಿದ್ದರು