ಮುರಘಾ ಮಠಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಲಿಂಗ ಧಾರಣೆ ಮಾಡಿದ ಮುರಘಾಶ್ರೀ
ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಆಗಸ್ಟ್ 2 ಮತ್ತು 3 ರಂದು ರಾಜ್ಯ ಪ್ರವಾಸ ಕೈಗೊಂಡಿದ್ದು ಚಿತ್ರದುರ್ಗದ ಮುರುಘಾಮಠಕ್ಕೆ ಭೇಟಿ ನೀಡಿ ಡಾ.ಶಿವಮೂರ್ತಿ ಮುರುಘಾಶರಣರು ಹಾಗೂ ಇತರೆ ಸ್ವಾಮೀಜಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ರಾಹುಲ್ ಗಾಂಧಿಗೆ ಮುರುಘಾಶ್ರೀ ಲಿಂಗಧಾರಣೆ ಮಾಡಿ ವಿಭೂತಿ ಹಚ್ಚಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಿತ್ರದುರ್ಗದಲ್ಲಿರುವ ಮುರುಘಾ ಮಠಕ್ಕೆ ಭೇಟಿ ನೀಡಿ ಶ್ರೀ ಗಳಿಂದ ಲಿಂಗ ಧಾರಣೆ ಮಾಡಿಸಿಕೊಂಡರು.
ಚಿತ್ರದುರ್ಗದ ತಮ್ಮ ಮಠಕ್ಕೆ ಭೇಟಿ ನೀಡಿದ ಕೈ ನಾಯಕ ರಾಹುಲ್ ಗಾಂಧಿಗೆ ಮುರುಘಾ ಶ್ರೀ ಲಿಂಗಧಾರಣೆ ಮಾಡಿ ವಿಭೂತಿ ಹಚ್ಚಿದರು.
ಮುರುಘಾ ಮಠದ ಶ್ರೀಗಳಿಂದ ಲಿಂಗಧಾರಣೆ ಮಾಡಿಸಿಕೊಂಡ ಬಳಿಕ ಲಿಂಗ ಪೂಜೆ ಬಗ್ಗೆ ಮಾಹಿತಿ ನೀಡುವಂತೆ ರಾಹುಲ್ ಮನವಿ ಮಾಡಿದರು.
ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಮುರುಘಾ ಮಠಕ್ಕೆ ಭೇಟಿ ನೀಡಿದ ವೇಳೆ ರಾಜ್ಯ ಕಾಂಗ್ರೆಸ್ ನ ಹಲವು ನಾಯಕರು ಜೊತೆಗಿದ್ದರು.
ಮುರುಘಾ ಮಠದಲ್ಲಿ ಲಿಂಗಧಾರಣೆ ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ತೆರಳಿದ ರಾಹುಲ್ ಗಾಂಧಿ