ಮುನಿರತ್ನಗೆ ಜನರು ತಕ್ಕಪಾಠ ಕಲಿಸುತ್ತಾರೆ: ಡಿ.ಕೆ.ಸುರೇಶ್‌

First Published 29, Oct 2020, 9:05 AM

ಬೆಂಗಳೂರು(ಅ.29): ಕಳೆದ ಚುನಾವಣೆಗಳಲ್ಲಿ ಕಾಂಗ್ರೆಸ್ಸೇ ನನ್ನ ತಾಯಿ, ನನ್ನ ಉಸಿರು, ನನ್ನ ರಕ್ತ ಎಂದು ಸಾರ್ವಜನಿಕವಾಗಿಯೇ ಹೇಳಿದ್ದ ಮುನಿರತ್ನ ಅವರು ಈಗ ಎಲ್ಲವನ್ನೂ ಮರೆತಿರಬಹುದು. ಆದರೆ, ರಾಜರಾಜೇಶ್ವರಿ ನಗರ ಕ್ಷೇತ್ರದ ಜನರು ಯಾವುದನ್ನೂ ಮರೆತಿಲ್ಲ. ಈ ಚುನಾವಣೆಯಲ್ಲಿ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ರಾಜರಾಜೇಶ್ವರಿ ನಗರ ಕ್ಷೇತ್ರದ ವಿವಿಧ ವಾರ್ಡುಗಳಲ್ಲಿ ಬುಧವಾರ ತಮ್ಮ ಪಕ್ಷದ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸಿದ ಪ್ರಚಾರ ಸಂಸದ ಸುರೇಶ್‌

ಬೆಳಗ್ಗೆಯೇ ವಿವಿಧ ಪಾರ್ಕ್‌ಗಳು, ವ್ಯಾಯಾಮ ಶಾಲೆಗಳಿಗೆ ಅಭ್ಯರ್ಥಿಯೊಂದಿಗೆ ತೆರಳಿ ಮತಯಾಚಿಸಿದರು. ಬಳಿಕ ಜ್ಞಾನಭಾರತಿ ವಾರ್ಡ್‌ ಸೇರಿದಂತೆ ಹಲವೆಡೆ ತೆರೆದ ವಾಹನದಲ್ಲಿ ಪ್ರಚಾರ ನಡೆಸಿ ಕುಸುಮಾ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಕೋರಿದರು. ಈ ವೇಳೆ, ಪ್ರಚಾರದ ಸಂದರ್ಭದಲ್ಲಿ ಹಾಗೂ ಮಾರ್ಗಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಳೆದ ಎರಡು ಚುನಾವಣೆಗಳಲ್ಲಿ ಇದೇ ಮುನಿರತ್ನ ಅವರು ಕಾಂಗ್ರೆಸ್‌ ನನ್ನ ತಾಯಿ ಎಂದು ಹೇಳಿದ್ದರು. ಅವರಿಗೆ ಈಗ ಆ ತಾಯಿ ಮರೆತುಹೋಯಿತಾ? ನನ್ನ ಉಸಿರು, ರಕ್ತದಲ್ಲೂ ಕಾಂಗ್ರೆಸ್‌ ತುಂಬಿದೆ ಎಂದಿದ್ದರು. ಈಗ ಅವರ ರಕ್ತ ಕೆಂಪು ಬಣ್ಣದ ಬದಲು ಕೇಸರಿ ಬಣ್ಣವಾಗಿದೆಯಾ? ಎಲ್ಲವನ್ನೂ ಮುನಿರತ್ನ ಅವರು ಮರೆತಿರಬಹುದು ಕ್ಷೇತ್ರದ ಮತದಾರರು ಮರೆತಿಲ್ಲ. ನ.3ರಂದು ನಡೆಯುವ ಚುನಾವಣೆಯಲ್ಲಿ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದರು.

ಸ್ವತಃ ಚಲನಚಿತ್ರ ನಿರ್ಮಾಪಕರಾಗಿರುವ ಮುನಿರತ್ನ ಅವರಿಗೆ ಕಣ್ಣೀರು ಹಾಕೋದು ಗೊತ್ತು, ಅದಕ್ಕಿಂತ ಹೆಚ್ಚಾಗಿ ಕಣ್ಣೀರು ಹಾಕ್ಸೋದೂ ಗೊತ್ತಿದೆ. ಯಾವ್ಯಾವ ಸಮಯದಲ್ಲಿ ಯಾವ್ಯಾವ ಸೀನ್‌ ಸೃಷ್ಟಿಸಬೇಕು. ಎಲ್ಲಿಗೆ ಯಾವ ಸೀನ್‌ ಜೋಡಿಸಬೇಕು, ಯಾವುದನ್ನು ಕಟ್‌ ಮಾಡಬೇಕು. ಸಿನೆಮಾ ನಿರ್ಮಿಸೋ ಅವರಿಗೆ ಯಾವಾಗ ಯಾರಿಗೆ ಹೊದೆಸಬೇಕು, ಯಾರನ್ನು ಅಳಿಸಬೇಕು ಎನ್ನುವುದರಲ್ಲಿ ಅವರು ಬಹಳ ಪರಿಣಿತರು. ಕಟ್‌ ಅಂಡ್‌ ಪೇಸ್ಟ್‌ ಅವರ ಅಭ್ಯಾಸ. ಹಾಗಾಗಿ ಈಗ ಹೊಸ ಅವತಾರದ ನಾಟಕ ಆರಂಭಿಸಿದ್ದಾರೆ. ಆದರೆ, ಅವರ ನಾಟಕಕ್ಕೆ ಜನರು ಮಣೆ ಹಾಕುವುದಿಲ್ಲ. ಕ್ಷೇತ್ರದಲ್ಲಿ ಅವರು ಸೃಷ್ಟಿಸಿರುವ ವಾತಾವರಣದಿಂದ ಜನರು ಬೇಸತ್ತಿದ್ದಾರೆ. ಅವರಿಗೆ ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಬಿಜೆಪಿಯವರು ಏನೇ ಮಾಡಲಿ, ಏನೇ ಹೇಳಿಕೆ ನೀಡಲಿ ನಾವು ನಮ್ಮ ಪಕ್ಷದ ಸಿದ್ಧಾಂತ, ನಮ್ಮ ಹಿಂದಿನ ಸರ್ಕಾರಗಳ ಸಾಧನೆ, ಅಭ್ಯರ್ಥಿಯ ಅರ್ಹತೆ ಕುರಿತು ಮಾತನಾಡುವುದನ್ನು ಬಿಟ್ಟು ವೈಯಕ್ತಿಕ ನಿಂದನೆಗೆ ಇಳಿಯುವುದಿಲ್ಲ. ಸಾರ್ವಜನಿಕ ಪ್ರತಿನಿಧಿಯಾಗಿ ನಮಗೂ ಜವಾಬ್ದಾರಿ ಇದೆ ಎಂದರು.

ಇದೇ ವೇಳೆ, ಸಚಿವ ಆರ್‌.ಅಶೋಕ್‌ ಅವರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಲೆಕ್ಕಕ್ಕಿಲ್ಲ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಸುರೇಶ್‌ ಅವರು, ಅಶೋಕ್‌ ಅವರಿಗೆ ಅವರ ಜೊತೆ ಇರುವ ಎಲ್ಲ ಒಕ್ಕಲಿಗ ಸಚಿವರಿಗೂ ಒಳ್ಳೆಯದಾಗಲಿ. ನೂರಿ ಕುಸ್ತಿ ಮಾಡ್ತಾರಲ್ಲ ಆ ರೀತಿ ಇವರು. ಯಾವ ಪಕ್ಷ ಲೆಕ್ಕಕಿದೆ, ಯಾವುದು ಲೆಕ್ಕಕ್ಕಿಲ್ಲ ಎಂಬುದು ಚುನಾವಣೆ ನಂತರ ತಿಳಿಯುತ್ತದೆ ಎಂದರು.