MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Politics
  • Karnataka Assembly Election 2023: ಸಿಎಂ ಬೊಮ್ಮಾಯಿ ಸೇರಿ ರಾಜ್ಯದ ಹಲವು ಗಣ್ಯರಿಂದ ಮತದಾನ

Karnataka Assembly Election 2023: ಸಿಎಂ ಬೊಮ್ಮಾಯಿ ಸೇರಿ ರಾಜ್ಯದ ಹಲವು ಗಣ್ಯರಿಂದ ಮತದಾನ

ಬೆಂಗಳೂರು (ಮೇ.10): ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯದ ಹಲವು ಕಡೆ ಗಣ್ಯರು ಮತದಾನ ಮಾಡಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರೆಲ್ಲ ಮತದಾನ ಮಾಡಿದ್ದಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ. ಮೇ.13 ಕ್ಕೆ ಫಲಿತಾಂಶ ಲಭ್ಯವಾಗಲಿದೆ.

3 Min read
Gowthami K
Published : May 10 2023, 09:02 AM IST| Updated : May 10 2023, 05:57 PM IST
Share this Photo Gallery
  • FB
  • TW
  • Linkdin
  • Whatsapp
121

ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ಶ್ರೀ ಮನೋಜ್ ಕುಮಾರ್ ಮೀನಾ ಅವರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಕ್ಕೂರಿನ ಮತಗಟ್ಟೆಯಲ್ಲಿ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

221

ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ ಮತ ಚಲಾವಣೆ ಮಾಡಿದ್ದಾರೆ.  ನಗರದ ಎಸ್ ಎಸ್ ಹೈಸ್ಕೂಲು ಆವರಣದಲ್ಲಿರುವ ಮತಗಟ್ಟೆ 61 ರಲ್ಲಿ ಮತ ಚಲಾಯಿಸಿದ್ದು ಪತ್ನಿ ಶೈಲಜಾ ಪುತ್ರರಾದ ರಾಮನಗೌಡ, ಆದರ್ಶ ಹಾಗೂ ಬೆಂಬಲಿಗರೊಂದಿಗೆ ಆಗಮಿಸಿ ಸರದಿಯಲ್ಲಿ ನಿಂತು‌ ಮತ ಚಲಾವಣೆ ಮಾಡಿದರು.

321

ಸೇಡಂ ಶಾಸಕ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ ತೆಲಕೂರ ಅವರು  ಸೇಡಂ ಪಟ್ಟಣದ ವಿದ್ಯಾನಗರದ ನಂ 2 ಶಾಲೆಯಲ್ಲಿ ಸರತಿಯ ಸಾಲಿನಲ್ಲಿ ನಿಂತು ತಮ್ಮ ಮತವನ್ನು ಚಲಾಯಿಸಿದ ನಂತರ ಪ್ರತಿಕ್ರಿಯೆ ನೀಡಿದ ಅವರು ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದರು.

421

ಕೇಂದ್ರ ಸಚಿವ ಭಗವಂತ ಖೂಬಾ ಅವರು ಮತದಾನ ಔರಾದ್ ಪಟ್ಟಣದ ಹಳೆ ಬಿಇಒ ಕಚೇರಿಯ ಬೂತ್ ನಂ. 84 ರಲ್ಲಿ  ಪತ್ನಿಯ ಜೊತೆಗೆ ತೆರಳಿ ಮತದಾನ ಮಾಡಿದರು. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು.

521

ಕೆಆರ್‌ಪಿಪಿ ಮುಖ್ಯಸ್ಥ ಗಾಲಿ  ಜನಾರ್ದನ ರೆಡ್ಡಿ ಅವರು ಗಂಗಾವತಿಯಲ್ಲಿ ತಮ್ಮ  ಹಕ್ಕು ಚಲಾಯಿಸಿದರು. ಬೆಂಬಲಿಗರು ಜೊತೆಯಲ್ಲಿದ್ದರು.

621

ಹೊಸಕೋಟೆ ಸರ್ಕಾರಿ‌ ಶಾಲೆಯಲ್ಲಿ  ಬಿಜೆಪಿ ಸಂಸದ ಬಿ ಎನ್ ಬಚ್ಚೇಗೌಡ ಮತದಾನ. ಪತ್ನಿ ಜೊತೆ ಬಂದು ಮತದಾನ ಮಾಡಿದ ಬಚ್ಚೇಗೌಡ. ಕಾಂಗ್ರೆಸ್ ಅಭ್ಯರ್ಥಿಯಾಗಿ‌ ಸ್ಪರ್ಧಿಸಿರುವ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ

721

ನನ್ನ ಅಧಿಕಾರ ಮತ್ತು ಕರ್ತವ್ಯ ಎರಡರ ಪ್ರಯೋಗವೂ ಆಯ್ತು. ದೇಶ ಹಿತಕ್ಕೆ ನನ್ನ ಒಂದು ಮತ. ಓಟು ಮಾಡಿದ ಬಳಿಕ ಟ್ವೀಟ್ ಮಾಡಿದ ಚಕ್ರವರ್ತಿ ಸೂಲಿಬೆಲೆ

821
ವಿ.ಸೋಮಣ್ಣ ಈಗ ಚಾಮರಾಜನಗರದ ಮತದಾರ!

ವಿ.ಸೋಮಣ್ಣ ಈಗ ಚಾಮರಾಜನಗರದ ಮತದಾರ!

ಚಾಮರಾಜನಗರದ  ಪೇಟೆಪ್ರೈಮರಿ ಶಾಲೆಯ ಮತಗಟ್ಟೆ ಸಂಖ್ಯೆ 75 ಮತ ಚಲಾಯಿಸಿದ ವಿ.ಸೋಮಣ್ಣ.  ಸದ್ದಿಲ್ಲದೆ ಬೆಂಗಳೂರಿನ ವಿಜಯನಗರದಿಂದ ಚಾಮರಾಜನಗರದ ಮತದಾರರ ಪಟ್ಟಿಗೆ ತಮ್ಮ ಹೆಸರು ವರ್ಗಾವಣೆ ಮಾಡಿಸಿಕೊಂಡಿರುವ  ಸೋಮಣ್ಣ ಹಾಗು ಅವರ ಪತ್ನಿ ಶೈಲಾಜಾ ಈಗ ಚಾಮರಾಜನಗರ ವೋಟರ್ಸ್. ನಗರದ ಶಂಕರಪುರ ಬಡಾವಣೆ ಯ  ಮತದಾರರ ಪಟ್ಟಿಯಲ್ಲಿ ಸೋಮಣ್ಣ ದಂಪತಿ ಹೆಸರು ಸೇರ್ಪಡೆ.

921

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಕುಟುಂಬ ಸಮೇತರಾಗಿ ಮತದಾನ ಮಾಡಿದರು.  ಲಕ್ಷ್ಮಿ ಹೆಬ್ಬಾಳ್ಕರ್ ಸೊಸೆ ಡಾ. ಹಿತಾ ಹೆಬ್ಬಾಳ್ಕರ್ ತುಂಬು ಗರ್ಭಿಣಿ ಆಗಿದ್ದರೂ ತಮ್ಮ ಹಕ್ಕು ಚಲಾಯಿಸಿದರು.

1021

ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್‌ ಅವರು ಚಾಮರಾಜನಗರದ ಹೆಗ್ಗವಾಡಿ ಗ್ರಾಮದಲ್ಲಿ ಮತದಾನ ಮಾಡಿದರು.

1121

ಶಿಕಾರಿಪುರದಲ್ಲಿ ಕುಟುಂಬ ಸಮೇತರಾಗಿ ಬಿಎಸ್‌ವೈ ಮತದಾನ ಮಾಡಿದರು.  ಪುತ್ರ ಬಿವೈ ವಿಜಯೇಂದ್ರ, ಬಿವೈ ರಾಘವೇಂದ್ರ ಮತ್ತು ಸೊಸೆಯಂದಿರು ಸಾಥ್ ನೀಡಿದರು.

1221

ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಸಿ.ಎಂ ಬೊಮ್ಮಾಯಿ ಕುಟುಂಬ ಸಮೇತ ಮತದಾನ ಮಾಡಿದರು. ಪುತ್ರ ಭರತ್ , ಪುತ್ರಿ ಅದಿತಿ  ಜೊತೆಯಲ್ಲಿದ್ದರು. ಮತಗಟ್ಟೆ 102 ರಲ್ಲಿ ಮತದಾನ ಮಾಡಿದರು.

1321

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ  ಮಹೇಶ್ ತೆಂಗಿನಕಾಯಿ ಅವರು ಇಂದು ಬಸಮ್ಮ ಪಾಟೀಲ್ ಸರ್ಕಾರಿ ಶಾಲೆಯ ಭೂತ ನಂಬರ್ 133 ರಲ್ಲಿ ಇಂದು ಬೆಳಗ್ಗೆ ಮತದಾನವನ್ನು ಮಾಡಿದರು.

1421

ಮೈಸೂರು ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಅವರು ತಮ್ಮ  ಪತ್ನಿ ಸಮೇತ ಬಂದು ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದರು. 

1521

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ, ಹುಟ್ಟುರಾದ ಗುಂಗ್ರಾಲ್ ಛತ್ರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕುಟುಂಬ ಸಮೇತರಾಗಿ ಮತ ಚಲಾಯಿಸಿದ ಜಿ ಟಿ ದೇವೇಗೌಡ.

1621

ವರುಣ ವಿಧಾನಸಭಾ ಚುನಾವಣೆ: ಸುತ್ತೂರು ದೇಶೀಕೇಂದ್ರ ಸ್ವಾಮಿಗಳಿಂದ ಮತ ಚಲಾವಣೆ.
ನಂಜನಗೂಡು ತಾಲ್ಲೂಕಿನ ಸತ್ತೂರು ಗ್ರಾಮದಲ್ಲಿ ಮತ ಚಲಾಯಿಸಿದ ಶ್ರೀಗಳು.

1721

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ಮತದಾನ. ಕುಟುಂಬ ಸಮೇತವಾಗಿ ಬಂದು ಮತದಾನ ಮಾಡಿದ ಜೋಶಿ. ಹುಬ್ಬಳ್ಳಿ ಧಾರವಾಡ ಕೇಂದ್ರದ ಮತಗಟ್ಟೆ ಸಂಖ್ಯೆ 109ರಲ್ಲಿ ಮತದಾನ.

1821
Karnataka Assembly Election 2023 voting Shettar family

Karnataka Assembly Election 2023 voting Shettar family

ಹುಬ್ಬಳ್ಳಿಯ ಕೇಶ್ವಾಪೂರದ ಎಸ್‌ಬಿ‌ಐ ಶಾಲೆ ಮತಗಟ್ಟೆ ಸಂಖ್ಯೆ 125 ರಲ್ಲಿ  ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತದಾನ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಚೇತ್ರದ ಕೈ ಅಭ್ಯರ್ಥಿ ಜಗದೀಶ್ ಶೆಟ್ಟರ್. ಕುಟುಂಬ ಸಮೇತರಾಗಿ ಮತ ಚಲಾವಣೆ ಮಾಡಿದ ಶೆಟ್ಟರ್.

1921

ಪುತ್ತೂರಿನಲ್ಲಿ ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಮತದಾನ ಮಾಡಿದರು.  ಈ ಬಾರಿ ಚುನಾವಣೆಯಲ್ಲಿ ದ.ಕ ಜಿಲ್ಲೆಯ ಕುತೂಹಲದ ಕಣವಾದ ಪುತ್ತೂರು ಕ್ಷೇತ್ರ.

2021

ಸಾಣೇಹಳ್ಳಿ ಮತಗಟ್ಟೆಯಲ್ಲಿ ತರಳಬಾಳು‌ ಮಠದ ಡಾ.ಪಂಡಿತಾರಾಧ್ಶಶ್ರೀ ಮತದಾನ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಗ್ರಾಮ. ಸಾಣೇಹಳ್ಳಿಯ ಮತಗಟ್ಟೆ ಸಂಖ್ಯೆ 125ರಲ್ಲಿ ಮತದಾನ.  

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಚುನಾವಣೆ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved