ಕಾಂಗ್ರೆಸ್‌ನಲ್ಲಿ ಇನ್ನೂ ನಿಲ್ಲದ ಕಲಬುರಗಿ ಪಾಲಿಕೆ ಅಧಿಕಾರ ಹಿಡಿಯುವ ಸರ್ಕಸ್..!
ಬೆಂಗಳೂರು(ಸೆ.11): ಕಾಂಗ್ರೆಸ್‌ನಲ್ಲಿ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಸರ್ಕಸ್ ಇನ್ನೂ ನಿಂತಿಲ್ಲ. ಹೌದು, ಕಲಬುರಗಿ ಮಹಾನಗರ ಪಾಲಿಕೆಯ 6 ಕಾರ್ಪೊರೇಟರ್‌ಗಳು ಇಂದು(ಶನಿವಾರ) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನ ಭೇಟಿ ಚರ್ಚೆ ನಡೆಸಿದ್ದಾರೆ.
ಶಾಸಕ ಪ್ರಿಯಾಂಕ ಖರ್ಗೆ ಜೊತೆ ಕಲಬುರಗಿ ಮಹಾನಗರ ಪಾಲಿಕೆಯ 6 ಕಾರ್ಪೊರೇಟರ್‌ಗಳು ಬೆಂಗಳೂರಿನ ಸದಾಶಿವನಗರದ ಡಿಕೆಶಿ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದ್ದಾರೆ.
ಜೆಡಿಎಸ್ ಜೊತೆಗಿನ ಮಾತುಕತೆ ಸಂಬಂಧ ಡಿಕೆಶಿ ಜೊತೆ ಚರ್ಚೆ ನಡೆಸಲು ಕಲಬುರಗಿ ಮಹಾನಗರ ಪಾಲಿಕೆಯ ನೂತನ ಕಾರ್ಪೊರೇಟರ್‌ಗಳು ಆಗಮಿಸಿದ್ದಾರೆ.
ಕಲಬುರಗಿಯಲ್ಲಿ ಒಳ್ಳೆಯ ಫಲಿತಾಂಶ ಸಿಕ್ಕಿದೆ. ಬಿಜೆಪಿಯವರು ಸರ್ಕಾರನೇ ಇಟ್ಕೊಂಡು ಕೆಲವೇ ನಂಬರ್ ಬಂದಿದೆ. ಹುಬ್ಬಳ್ಳಿ ಧಾರವಾಡ ಸಿಎಂ, ಮಾಜಿ ಸಿಎಂ, ಸಚಿವರು, ಕೇಂದ್ರ ಸಚಿವರು ಇದ್ರೂ ಕೂಡ 33 ಸೀಟು ಬಂದಿವೆ. ಅಲ್ಲಿ ಟಿಕೆಟ್ ಕೊಡುವಲ್ಲಿ ನಾವು ಸ್ವಲ್ಪ ಯಡವಟ್ಟು ಮಾಡಿಕೊಂಡೆವು ಅಂತ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಾಳೆ ಹುಬ್ಬಳ್ಳಿ, ಬೆಳಗಾವಿ ಹೋಗಿ ಗೆದ್ದ, ಸೋತ ಅಭ್ಯರ್ಥಿಗಳು ಜೊತೆಗೆ ಮಾತುಕತೆ ಮಾಡುತ್ತೇನೆ. ನಮ್ಮ ರಾಷ್ಟ್ರೀಯ ನಾಯಕರು, ಜೆಡಿಎಸ್ ರಾಷ್ಟ್ರೀಯ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ ಅಂತ ಡಿಕೆಶಿ ತಿಳಿಸಿದ್ದಾರೆ.