ದಿಢೀರ್ ತೀರ್ಮಾನ ಬದಲು: ಕಾಂಗ್ರೆಸ್ ಸೇರ್ಪಡೆ ಬದಲಿಗೆ ಬೇರೆ ಹಾದಿ ತುಳಿದ ಶರತ್ ಬಚ್ಚೇಗೌಡ

First Published Feb 25, 2021, 3:05 PM IST

ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಇಂದು ( ಗುರುವಾರ)ಅಧಿಕೃತವಾಗಿ ಕಾಂಗ್ರೆಸ್​ನ ಸಹಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ. ಸಿದ್ದರಾಮಯ್ಯರ ಸರ್ಕಾರಿ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಹಸದಸ್ಯರಾಗಿ ಸೇರ್ಪಡೆಯಾದರು ಇನ್ನು ಸಿದ್ದರಾಮಯ್ಯ ಅವರು ಶರತ್ ಬಚ್ಚೇಗೌಡಗೆ ಬೆನ್ನೆಲುಬಾಗಿ ನಿಲ್ಲುವ ಭರವಸೆ ನೀಡಿದ್ದಾರೆ.