ದೇವರಿಗೆ ತಪ್ಪು ಕಾಣಿಕೆ ಸಲ್ಲಿಸಿದ ಕುಮಾರಸ್ವಾಮಿ: ಮಾಜಿ ಸಿಎಂ ಮಾಡಿದ ತಪ್ಪಾದ್ರೂ ಏನು?
ರಾಮನಗರ ತಾಲ್ಲೂಕಿನ ಜಾಲಮಂಗಲದ ಲಕ್ಷ್ಮಿ ನಾರಾಯಣಸ್ವಾಮಿ ದೇಗುಲದಲ್ಲಿ ಶುಕ್ರವಾರ ಕುಟುಂಬದೊಂದಿಗೆ ಪೂಜೆ ಸಲ್ಲಿಸಿದ ಎಚ್.ಡಿ. ಕುಮಾರಸ್ವಾಮಿ, ದೇವರಿಗೆ 101 ರೂ. ತಪ್ಪು ಕಾಣಿಕೆಯನ್ನೂ ಅರ್ಪಿಸಿದರು. 101 ರೂಪಾಯಿಗಳ ತಪ್ಪು ಕಾಣಿಕೆ ಸಲ್ಲಿಸಿದ್ದು ಯಾಕೆ? ಇದಕ್ಕೆ ಕಾರಣವೇನು.? ಮಾಜಿ ಮಾಡಿದ ತಪ್ಪಾದ್ರೂ ಏನು..? ಎನ್ನುವ ಮಾಹಿತಿ ಇಲ್ಲಿದೆ ನೋಡಿ...
ರಾಮನಗರ ತಾಲ್ಲೂಕಿನ ಜಾಲಮಂಗಲದ ಲಕ್ಷ್ಮಿ ನಾರಾಯಣಸ್ವಾಮಿ ದೇಗುಲದಲ್ಲಿ ಶುಕ್ರವಾರ ಕುಟುಂಬದೊಂದಿಗೆ ಪೂಜೆ ಸಲ್ಲಿಸಿದ ಎಚ್.ಡಿ. ಕುಮಾರಸ್ವಾಮಿ
ಕುಟುಂಬ ಸಮೇತರಾಗಿ ರಾಮನಗರ ತಾಲ್ಲೂಕಿನ ಜಾಲಮಂಗಲದ ಲಕ್ಷ್ಮಿ ನಾರಾಯಣಸ್ವಾಮಿ ದೇಗುಲದಲ್ಲಿ ಶುಕ್ರವಾರ ಕುಟುಂಬದೊಂದಿಗೆ ಪೂಜೆ ಸಲ್ಲಿಸಿದ ಎಚ್.ಡಿ. ಕುಮಾರಸ್ವಾಮಿ, ದೇವರಿಗೆ 101 ರೂ. ತಪ್ಪು ಕಾಣಿಕೆ ಅರ್ಪಿಸಿದರು.
ಹಿಂದೆ ತಮ್ಮಿಂದ ಆಗಿರುವ ತಪ್ಪನ್ನು ಮನ್ನಿಸುವಂತೆ 101 ರೂ. ತಪ್ಪು ಕಾಣಿಕೆ ಅರ್ಪಿಸಿ ಪ್ರಾರ್ಥಿಸಿದರು.
ಈ ಹಿಂದೆ ಎಚ್‌ಡಿಕೆ ಇದೇ ದೇವರ ಮುಂದೆ 'ನನಗೆ ಯಾವುದೇ ಅಧಿಕಾರ ಬೇಡ' ಎಂದಿದ್ದರು. ಆದರೆ ನಂತರದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆದರೂ ಅಧಿಕಾರ ಅರ್ಧಕ್ಕೆ ಮೊಟಕಾಗಿತ್ತು. ಈ ಕೊರಗು ನೀಗಿಸಿಕೊಳ್ಳಲು ಕುಮಾರಸ್ವಾಮಿ ದೇವರಿಗೆ ಕಾಣಿಕೆ ಅರ್ಪಿಸಿ, ಹಿಂದೆ ತಮ್ಮಿಂದ ಆಗಿರುವ ತಪ್ಪನ್ನು ಮನ್ನಿಸುವಂತೆ ಪ್ರಾರ್ಥಿಸಿದರು.
5 ವರ್ಷ ಸಂಪೂರ್ಣವಾಗಿ ಅಧಿಕಾರವನ್ನು ನಡೆಸಲು ಬಿಡಲಿಲ್ಲ. ಇದಕ್ಕೆ ದೇವರ ಶಾಪವೇ ಕಾರಣ ಅಂತ ಎಚ್‌ಡಿಕೆ ಈ ಈ ವಿಶೇಷ ಪೂಜೆ ಮಾಡಿಸಿದ್ದಾರೆ.
ಈ ಸಂದರ್ಭ ಶಾಸಕಿ ಅನಿತಾ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಅವರ ಪತ್ನಿ ರೇವತಿ, ಮಾಗಡಿ ಶಾಸಕ ಎ.ಮಂಜುನಾಥ ಇದ್ದರು.