20 ಶಾಸಕರ ಜತೆ ಹೈದ್ರಾಬಾದ್‌ಗೆ ತೆರಳಿದ ಕುಮಾರಸ್ವಾಮಿ: ಹೆಚ್‌ಡಿಕೆ ರಾಜಕೀಯ ಲೆಕ್ಕಾಚಾರ ಏನಿದೆ?
ಹೈದ್ರಾಬಾದ್(ಅ.04): ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು 20 ಶಾಸಕರ ಜತೆ ಹೈದ್ರಾಬಾದ್‌ಗೆ ತೆರಳಿದ್ದಾರೆ. ಹೌದು, ನಾಳೆ(ಬುಧವಾರ) ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ನೂತನ ಪಕ್ಷ ಸ್ಥಾಪನೆ ಘೋಷಣೆ ಮಾಡಲಿದ್ದಾರೆ. ಹೀಗಾಗಿ ಆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ.
ಶಾಸಕರು ಮತ್ತು ಪಕ್ಷದ ನಾಯಕರ ಜೊತೆಗೆ ಹೈದರಾಬಾದ್ ತಲುಪಿದ ಕುಮಾರಸ್ವಾಮಿ ಅವರಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರ ತೆಲಂಗಾಣದ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವರೂ ಆದ ಕೆ.ಟಿ. ರಮಾ ರಾವ್ ಅವರು ಹೂಗೂಚ್ಛ ನೀಡಿ ಸ್ವಾಗತಿಸಿದ್ದಾರೆ.
ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು 20 ಶಾಸಕರ ಜತೆ ವಿಶೇಷ ವಿಮಾನದಲ್ಲಿ ಹೈದ್ರಾಬಾದ್‌ಗೆ ತೆರಳಿದ್ದಾರೆ. ನಾಳೆ ಉದ್ಘಾಟನೆ ಆಗಲಿರುವ ಬಿಆರ್‌ಎಸ್ ಪಕ್ಷದ ಸಮಾವೇಶದಲ್ಲಿ ಭಾಗಿಯಾಗಲಿರುವ ಕುಮಾರಸ್ವಾಮಿ.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ನಾಳೆ ಭಾರತ ರಾಷ್ಟ್ರ ಸಮಿತಿ (BRS) ಪಕ್ಷ ಸ್ಥಾಪನೆ ಮಾಡಲಿದ್ದಾರೆ. ಹೀಗಾಗಿ ಹೆಚ್.ಡಿ. ಕುಮಾರಸ್ವಾಮಿ ಅವರು 20 ಶಾಸಕರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಪಕ್ಷ ಸ್ಥಾಪನೆ ಬಗ್ಗೆ ಕೆಲ ತಿಂಗಳ ಹಿಂದೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಜತೆ ಚರ್ಚೆ ನಡೆಸಿದ್ದರು.
ಕೆಲ ತಿಂಗಳ ಹಿಂದೆಯಷ್ಟೇ ಹೆಚ್.ಡಿ.ಕುಮಾರಸ್ವಾಮಿ ಅವರು ಹೈದ್ರಾಬಾದ್‌ಗೆ ತೆರಳಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಜತೆ ಚರ್ಚೆ ನಡೆಸಿದ್ದರು. ಇಂದು ಹೈದ್ರಾಬಾದ್‌ನಲ್ಲೇ ಶಾಸಕರ ಜತೆ ವಾಸ್ತವ್ಯ ಹೂಡಲಿರುವ ಹೆಚ್.ಡಿ.ಕುಮಾರಸ್ವಾಮಿ