ಚುನಾವಣೆ ಗಿಮಿಕ್, ಯುಗಾದಿ ಹಬ್ಬದ ಪ್ರಯುಕ್ತ ಜನರಿಗೆ ಕೋಳಿ ಹಂಚಿದ ಶಾಸಕ!
ಬೆಂಗಳೂರು ಗ್ರಾ.(ಮಾ.23): ಚುನಾವಣೆ ಸಮೀಸುತ್ತಿದ್ದಂತೆ ಮತದಾರನ್ನು ಸೆಳೆಯುವ ಸಲುವಾಗಿ ರಾಜಕಾರಣಿಗಳು ಒಂದಿಲ್ಲ ಒಂದು ಕಸರತ್ತು ಮಾಡುತ್ತಿದ್ದಾರೆ. ಯುಗಾದಿ ಹಬ್ಬ ನೆಪಮಾಡಿಕೊಂಡು ಮತದಾರರಿಗೆ ಬಲೆ ಬೀಸಿರುವ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಯುಗಾದಿ ಹಬ್ಬದ ಪ್ರಯುಕ್ತ ಕ್ಷೇತ್ರದ ಜನರಿಗೆ ಕೋಳಿ ಹಂಚಿಕೆ ಮಾಡಿದ್ದಾರೆ. ಪುಟ್ಟೇನಹಳ್ಳಿ ವಾರ್ಡ್ ನ 187 ರಲ್ಲಿ ಲೋಡ್ ಗಟ್ಟಲೆ ಕೋಳಿ ಹಂಚಿದ ಶಾಸಕರ ಬೆಂಬಲಿಗ ಮಾಜಿ ಉಪ ಮೇಯರ್ ಮೋಹನ್ ರಾಜ್. ಉಚಿತ ಕೋಳಿ ತೆಗೆದುಕೊಳ್ಳಲು ಮುಗಿಬಿದ್ದ ಸಾರ್ವಜನಿಕರು.

ಯುಗಾದಿ ಹಬ್ಬದ ಪ್ರಯುಕ್ತ ಕ್ಷೇತ್ರದ ಜನರಿಗೆ ಕೋಳಿ ಹಂಚಿದ ಶಾಸಕ ಸತೀಶ್ ರೆಡ್ಡಿ, ಹೊಸತಡ್ಕು ಮಾಡಲು ಕ್ಷೇತ್ರದ ಮಾತದಾರರಿಗೆ ಕೋಳಿ ಹಂಚಿಕೆ
ಪುಟ್ಟೇನಹಳ್ಳಿ ವಾರ್ಡ್ ನ 187 ರಲ್ಲಿ ಲೋಡ್ ಗಟ್ಟಲೆ ಕೋಳಿ ಹಂಚಿದ ಶಾಸಕ ಸತೀಶ್ ರೆಡ್ಡಿ ಬೆಂಬಲಿಗ ಮಾಜಿ ಉಪ ಮೇಯರ್ ಮೋಹನ್ ರಾಜ್.
ಪುಟ್ಟೇನಹಳ್ಳಿ ವಾರ್ಡ್ ನಲ್ಲಿ 6 ಸಾವಿರ ಕೋಳಿ ಹಂಚಿರುವ ಶಾಸಕ ಸತೀಶ್ ರೆಡ್ಡಿ. ಉಚಿತ ಕೋಳಿ ತೆಗೆದುಕೊಳ್ಳಲು ತಾ ಮುಂದು ನಾ ಮುಂದು ಎಂದು ಮುಗಿಬಿದ್ದ ಸಾರ್ವಜನಿಕರು
ಸಾಲುಗಟ್ಟಿ ನಿಂತು ಕೋಳಿ ತೆಗೆದುಕೊಂಡು ಮನೆಗೆ ತೆರಳಿದ ಸಾರ್ವಜನಿಕರು. ಯುಗಾದಿ ಹಬ್ಬದ ಪ್ರಯುಕ್ತ ಕ್ಷೇತ್ರದ ಜನತೆಗೆ ಭರ್ಜರಿ ಬಾಡೂಟ.
ಚುನಾವಣೆ ಸಮೀಸುತ್ತಿದ್ದಂತೆ ಮತದಾರನ್ನು ಸೆಳೆಯುವ ಸಲುವಾಗಿ ರಾಜಕಾರಣಿಗಳ ಇನ್ನಿಲ್ಲದ ಕಸರತ್ತು. ಕುಕ್ಕರ್, ಸೀರೆ, ಕೋಳಿ, ಮಿಕ್ಸಿ, ಪಾತ್ರೆಗಳು ಹೀಗೆ ಒಂದಿಲ್ಲ ಒಂದು ವಸ್ತುಗಳನ್ನು ಹಂಚುತ್ತಿರುವ ರಾಜಕಾರಣಿಗಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.