ದೀದಿ To ಟಗರು : ಭಾರತದ ರಾಜಕಾರಣಿಗಳಿಗೆ ಇರುವ ಜನಪ್ರಿಯ ನಿಕ್‌ನೇಮ್‌ಗಳು!
ದೀದಿಯಿಂದ ಟಗರು, ಭತೀಜಾದಿಂದ ಬುಲ್ಡೋಜರ್ ಬಾಬಾ: ಈ ಲೇಖನವು ಭಾರತೀಯ ರಾಜಕಾರಣಿಗಳ ಕೆಲವು ಆಕರ್ಷಕ ನಿಕ್‌ನೇಮ್‌ಗಳ ಹಿಂದಿನ ಕಥೆಗಳನ್ನು ಬಿಚ್ಚಿಡುತ್ತದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷಗಳು, ರಾಷ್ಟ್ರೀಯ ನಾಯಕರು ಹಾಗೂ ಮಾಧ್ಯಮಗಳು ದೀದಿ ಎನ್ನುವ ನಿಕ್‌ನೇಮ್‌ನಿಂದಲೇ ಕರೆಯುತ್ತವೆ.
ಉತ್ತರ ಪ್ರದೇಶದ ಮಾಜಿ ಸಿಎಂ ಹಾಗೂ ದಲಿತ ನಾಯಕಿ ಮಾಯಾವತಿ ಅವರನ್ನು ರಾಜಕೀಯ ಕ್ಷೇತ್ರದಲ್ಲಿ ಬುವಾ ಎನ್ನುವ ನಿಕ್‌ನೇಮ್‌ನಿಂದಲೇ ಗುರುತಿಸಲಾಗುತ್ತದೆ. ತಂದೆಯ ಸಹೋದರಿ ಎನ್ನುವ ಅರ್ಥ ಇದಾಗಿದೆ.
Akhilesh Yadav
ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರನ್ನು ವಿರೋಧಿಗಳು ಭತೀಜಾ ಎನ್ನುವ ನಿಕ್‌ನೇಮ್‌ನಿಂದ ಕರೆಯುತ್ತಾರೆ. ಇದರ ಅರ್ಥ ಸೋದರಳಿಯ.
ಮಧ್ಯಪ್ರದೇಶದ ಮಾಜಿ ಸಿಎಂ ಹಾಗೂ ಹಾಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ರನ್ನು ಪ್ರಸಿದ್ಧವಾಗಿ ಮಾಮಾಜಿ ಅಥವಾ ಮಾಮಾ ಎನ್ನುವ ನಿಕ್‌ನೇಮ್‌ನಿಂದ ಕರೆಯುತ್ತಾರೆ.
Jawaharlal Nehru
ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರನ್ನು ಪಂಡಿತ್ ಎನ್ನುವ ನಿಕ್‌ನೇಮ್‌ನಿಂದ ಗುರುತಿಸುತ್ತಿದ್ದರು. ಚಾಚಾ ಎನ್ನುವುದು ಅವರ ಮತ್ತೊಂದು ನಿಕ್‌ನೇಮ್.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ವಿರೋಧಿಗಳು ಹಾಗೂ ಮಾಧ್ಯಮದವರು ಸೈಲೆಂಟ್ ಪಿಎಂ ಎನ್ನುವ ಪ್ರಸಿದ್ಧ ನಿಕ್‌ನೇಮ್‌ನಿಂದ ಕರೆಯುತ್ತಿದ್ದರು.
Narendra Modi
ಪ್ರಧಾನಿ ನರೇಂದ್ರ ಮೋದಿ ಅವರನ್ನು ಆರಂಭದಿಂದಲೂ ನಮೋ ಎನ್ನುವ ನಿಕ್‌ನೇಮ್‌ನಿಂದ ಕರೆಯುತ್ತಾರೆ. ಚಾಯ್‌ವಾಲಾ ಎನ್ನುವುದು ಅವರ ಮತ್ತೊಂದು ಪ್ರಸಿದ್ಧ ನಿಕ್‌ನೇಮ್
Siddaramaiah budget
ಕಳೆದ ವಿಧಾನಸಭೆ ಚುನಾವಣೆಯಲ್ಲ ಭರ್ಜರಿ ಗೆಲುವಿನೊಂದಿಗೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇವರನ್ನು ಹೆಚ್ಚಾಗಿ ಟಗರು ಅನ್ನೋ ನಿಕ್‌ನೇಮ್‌ನಲ್ಲೇ ಕರೆಯಲಾಗುತ್ತದೆ.
bsy
ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಅಭಿಮಾನಿಗಳು, ಮಾಧ್ಯಮಗಳು ರಾಜಾಹುಲಿ ಅನ್ನೋ ನಿಕ್‌ನೇಮ್‌ನಲ್ಲೇ ಕರೆಯುತ್ತವೆ.
yogi adityanath
ಉತ್ತರ ಪ್ರದೇಶದ ಹಾಕಿ ಸಿಎಂ ಹಾಗೂ ಹಿಂದು ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥ್ ಅವರನ್ನು ಯೋಗಿ, ಬುಲ್ಡೋಜರ್ ಬಾಬಾ ಎನ್ನುವ ನಿಕ್‌ನೇಮ್‌ಅಲ್ಲಿ ಗುರುತಿಸ್ತಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವನ್ನು ಮಾಧ್ಯಮಗಳು ಅವರ ಹೆಸರನ್ನೇ ಸಂಕ್ಷಿಪ್ತ ಮಾಡಿ ರಾಗಾ ಎನ್ನುವ ನಿಕ್‌ನೇಮ್ ನೀಡಿದೆ.