ಅತ್ತ ಅಧಿವೇಶನದಲ್ಲಿ ಸಿದ್ದು ಘರ್ಜಿಸುತ್ತಿದ್ರೆ, ಮತ್ತೊಂದೆಡೆ ಸಿಎಂ ಭೇಟಿಯಾದ ಡಿಕೆಶಿ

First Published 18, Feb 2020, 5:17 PM

ಅಧಿವೇಶನದಲ್ಲಿ ಆಡಳಿತ ಹಾಗೂ ವಿಪಕ್ಷಳ ನಡುವೆ ಭಾರೀ ವಾಗ್ವಾದಗಳು ನಡೆಯುತ್ತಿವೆ. ಅದರಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರವನ್ನ ತರಾಟೆಗೆ ತಗೆದುಕೊಳ್ಳುತ್ತಿದ್ರೆ, ಮತ್ತೊಂದೆಡೆ ಕಾಂಗ್ರೆಸ್ ಹಿರಿಯ ಶಾಸಕ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ್ದಾರೆ.  ಮಂಗಳವಾರ ವಿಧಾನಸೌಧದ ಕಚೇರಿಯಲ್ಲಿ ಮುಖ್ಯಮಂತ್ರಿ ಬಿಎಸ್‌ವೈ ಅವರನ್ನು ಭೇಟಿಯಾಗಿದ್ದಾರೆ. ಏನು ಸಮಾಚಾರ..?

ಕನಕಪುರಿಂದ ಚಿಕ್ಕಬಳ್ಳಾಪುರ ಶಿಫ್ಟ್‌ ಆಗಿರುವ ಮೆಡಿಕಲ್ ಕಾಲೇಜು ವಿವಾದ ಮತ್ತೆ ರಾಜ್ಯ ರಾಜಕಾರಣದಲ್ಲಿ ಮುನ್ನೆಲೆಗೆ ಬಂದಿದೆ.

ಇಂದು (ಮಂಗಳವಾರ) ಡಿಕೆ ಶಿವಕುಮಾರ್ ಅವರು ಸಿಎಂ ಯಡಿಯೂಪರನ್ನ ಭೇಟಿ ಮಾಡಿದ್ದು, ಕನಕಪುರ ವೈದ್ಯಕೀಯ ಕಾಲೇಜು ಸ್ಥಳಾಂತರ ರದ್ದು ಮಾಡುವಂತೆ ಮನವಿ ಮಾಡಿದರು.

ಈ ಹಿಂದೆ ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ರಾತ್ರೋ ರಾತ್ರಿ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿರುವ ಸರಿಯಲ್ಲ ಎಂದು ಸಿಎಂ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜನ್ನು ನೀಡಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ, ಬದಲಾಗಿ ಕನಕಪುದಿಂದ ಮಂಜೂರಾಗಿರುವುದನ್ನು ವಾಪಸ್‌ ಪಡೆದುಕೊಂಡಿರುವುದು ಸರಿಯಲ್ಲಎಂದಿರುವ ಡಿಕೆಶಿ, ನಿರ್ಧಾರವನ್ನು ವಾಪಸ್‌ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ಮೊದಲು ಮೈತ್ರಿ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಅವರು ಡಿಕೆಶಿ ಕ್ಷೇತ್ರವಾದ ರಾಮನಗರದ ಕನಕಪುಕರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದರು.  ಆದ್ರೆ, ಬಿಎಸ್‌ವೈ ಅಧಿಕಾರಕ್ಕೇರಿದ್ದೆ ತಡ ಕನಕಪುರದ ಮೆಡಿಕಲ್ ಕಾಲೇಜನ್ನು ಸುಧಾಕರ್‌ ಕ್ಷೇತ್ರ ಚಿಕ್ಕಬಳ್ಳಾಪುರಕ್ಕೆ ಟ್ರಾನ್ಸ್‌ಫರ್ ಮಾಡಲಾಗಿತ್ತು.

ಮೆಡಿಕಲ್ ಕಾಲೇಜನ್ನು ರಾಜಕೀಯ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಕ ಡಾ.ಕೆ. ಸುಧಾಕರ್, ಕೊನೆಗೂ ತಮ್ಮ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದರು.

ಸಿಎಂ ಭೇಟಿ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕುಣಿಗಲ್ ಶಾಸಕ ಡಾ. ರಂಗನಾಥ್, ವಿಧಾನಪರಿಷತ್ ಸದಸ್ಯರಾದ ಸಿ.ಎಂ. ಲಿಂಗಪ್ಪ, ಎಚ್.ಎಂ. ರೇವಣ್ಣ, ಎಸ್. ರವಿ ಹಾಜರಿದ್ದರು.

loader