ಹೊಸ ಅವತಾರದಲ್ಲಿ ಪ್ರಕಾಶಿಸಿದ ಸೂರ್ಯ
ಬೆಂಗಳೂರು ದಕ್ಷಿಣ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸಂಸದರಲ್ಲಿ ಒಬ್ಬರಾಗಿದ್ದಾರೆ. ಅದರಲ್ಲೂ ಅವರು ಡ್ರೇಸ್ ಕೂಡ ಅಷ್ಟೇ ಶಿಸ್ತುಬದ್ಧವಾಗಿ ಮೆಂಟೇನ್ ಮಾಡುತ್ತಾರೆ. ಯಾವ ಕಾರ್ಯಕ್ರಮಕ್ಕೆ ಯಾವ ಡ್ರೇಸ್? ಸಂಸತ್ ಅಧಿವೇಶನದಲ್ಲಿ ಯಾವ ಉಡುಪು ಧರಿಸಬೇಕೆನ್ನುವುದು ಅರಿತು ಅದನ್ನೇ ಫಾಲೋ ಮಾಡ್ತಾರೆ. ಇದೀಗ ಅವರು ಒಂದು ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ತೊಟ್ಟು ಮಿಂಚಿದ್ದಾರೆ.
ಕರ್ನಾಟಕ ಗಾನ ಕಲಾ ಪರಿಷತ್ ವತಿಯಿಂದ ಎನ್ ಆರ್ ಕಾಲೊನಿಯಲ್ಲಿ ವಿದ್ವಾನ್ ಶ್ರೀ ಆರ್ ಕೆ ಪದ್ಮನಾಭ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ '50ನೇ ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನ' ಮತ್ತು '32ನೇ ಯುವ ಸಂಗೀತ ವಿದ್ವಾಂಸರ ಸಮ್ಮೇಳನ' ನಡೆಯಿತು.
ಇದೇ ಸಮಾರಂಭದಲ್ಲಿ ಅಪೂರ್ವ ಸಂಗೀತ ಸೇವೆಗೈದಿರುವ ವಿದ್ವಾನ್ ಶ್ರೀ ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್ ರವರಿಗೆ ಗಾನಕಲಾ ಭೂಷಣ ಹಾಗೂ ವಿದ್ವಾನ್ ಶ್ರೀ ಗಿರಿಧರ್ ಉಡುಪ ಮತ್ತು ವಿದ್ವಾನ್ ಶ್ರೀ ಗುರುಪ್ರಸನ್ನ ರವರಿಗೆ ಗಾನಕಲಾಶ್ರೀ ಬಿರುದನ್ನು ನೀಡಿ ಗೌರವಿಸಲಾಯಿತು.
ಹೊಸ ಅವತಾರದಲ್ಲಿ ಪ್ರಕಾಶಿಸಿದ ಸೂರ್ಯ
ಈ ಸಮಾರಂಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಹಸ್ವಿ ಸೂರ್ಯ ಅವರು ಸಾಂಪ್ರದಾಯಿಕ ಉಡುಪು ತೊಟ್ಟ ಮಿಂಚಿದರು.
ಸಾಂಪ್ರದಾಯಿಕ ಉಡುಪು ಪಂಚೆ ಶಲ್ಯಯಲ್ಲಿ ಮಿಂಚಿಂಗ್
ಡ್ರೇಸ್ ಕೋಡ ಪಾಲನೆಯಲ್ಲಿ ಯುವ ಸಂಸದ ತೇಜಸ್ವಿ ಸೂರ್ಯ ಮುಂದು
ಇದೇ ಸಮಾರಂಭದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದ್ದು ಹೀಗೆ
ಕಾರ್ಯಕ್ರಮದಲ್ಲಿ ಹಿರಿಯರಿಗೆ ತಲೆಬಾಗಿ ನಮಸ್ಕರಿದ ಸೂರ್ಯ
ಈ ಹಿಂದೆ ಸಂಸದರಾಗಿ ಆಯ್ಕೆಯಾದ ಬಳಿಕ ಪ್ರಮಾಣವಚನ ಸ್ವೀಕರಿಸುವಾಗ ಪಂಚೆಯಲ್ಲೇ ಕಂಗೊಳಿಸಿದ್ದರು