ಮಗ MLA, ತಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ: ಕರ್ನಾಟಕದಲ್ಲಿ ಅಪರೂಪದ ಬೆಳವಣಿಗೆ
ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಪತ್ನಿ, ಉಪಾಧ್ಯಕ್ಷರಾಗಿ ಪತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೊಂದು ಅಪರೂಪದ ಪ್ರಕರಣವಾಗಿದ್ದು, ಗ್ರಾಮಸ್ಥರು ಸಹ ಇದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ಹುಬ್ಬಳ್ಳಿ ತಾಲೂಕು ವರೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ವಿಶಾಲಾಕ್ಷಿ ಚನ್ನಬಸಗೌಡ ಹನುಮಂತಗೌಡರ, ಉಪಾಧ್ಯಕ್ಷರಾಗಿ ಚನ್ನಬಸಗೌಡ ಆಯ್ಕೆಯಾಗಿದ್ದಾರೆ. ಮತ್ತೊಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಬಿಜೆಪಿ ಶಾಸಕರ ತಾಯಿ ಆಯ್ಕೆಯಾಗಿರುವುದು ಅಚ್ಚರಿ ಮೂಡಿಸಿದೆ.
ರಾಯಚೂರು ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ತಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ.
ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಧಡೇಸ್ಗೂರ್ ಅವರ ತಾಯಿ ದುರ್ಗಮ್ಮ ಗಂಡ ದುರ್ಗಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿದ್ದಾರೆ.
ಇಂದು (ಬುಧವಾರ) ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ದಡೇಸುಗೂರು ಗ್ರಾಮ ಪಂಚಾಯಿತಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ದುರುಗಮ್ಮ ಅವರು ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆಯಾದರು.
ಹಿಂದೆ ಶಾಸಕ ಬಸವರಾಜ ಅವರ ತಂದೆ ದುರುಗಪ್ಪ ದಢೇಸೂಗೂರು ಅವರು ಇದೇ ಗ್ರಾಮ ಪಂಚಾಯಿತಿಯಿಂದ ಆರು ಸಲ ಸದಸ್ಯರಾಗಿ ಹಾಗೂ ಒಂದು ಸಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರೆ. ದುರುಗಮ್ಮ ಸಹ ಎರಡು ಸದಸ್ಯರಾಗಿ ಹಾಗೂ ಒಮ್ಮೆ ಉಪಾಧ್ಯಕ್ಷರಾಗಿದ್ದರು. ಇದೀಗ ಅಧ್ಯಕ್ಷರಾಗಿದ್ದಾರೆ.
ಇನ್ನು ಹುಬ್ಬಳ್ಳಿ ತಾಲೂಕು ವರೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಪತ್ನಿ ವಿಶಾಲಾಕ್ಷಿ ಚನ್ನಬಸಗೌಡ ಹನುಮಂತಗೌಡರ ಆಯ್ಕೆಯಾಗಿದ್ದರೆ, ಉಪಾಧ್ಯಕ್ಷರಾಗಿ ಚನ್ನಬಸಗೌಡ ಆಯ್ಕೆಯಾಗಿದ್ದಾರೆ.