ವಿಜಯೇಂದ್ರ ಜತೆ ಅಮಿತ್ ಶಾ ನಡೆದುಕೊಂಡ ರೀತಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ
ಬೆಂಗಳೂರು (ಮಾ.24): ಬೆಂಗಳೂರು ಪ್ರವಾಸದಲ್ಲಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕುಮಾರಕೃಪಾ ರಸ್ತೆಯಲ್ಲಿರುವ ಯಡಿಯೂರಪ್ಪನವರ ನಿವಾಸಕ್ಕೆ ಭೇಟಿ ನೀಡಿದರು. ಆ ವೇಳೆ ಕುತೂಹಲಕಾರಿ ಘಟನೆಯೊಂದು ನಡೆಯಿತು. ಅಮಿತ್ ಶಾ ಅವರನ್ನು ಸ್ವಾಗತಿಸಲು ಯಡಿಯೂರಪ್ಪ ಅವರು ತಮ್ಮ ನಿವಾಸದ ಅಂಗಳದಲ್ಲಿ ಹೂಗುಚ್ಛಗಳನ್ನು ಹಿಡಿದು ಕಾಯುತ್ತಾ ನಿಂತಿದ್ದರು. ಅವರ ಪುತ್ರ ವಿಜಯೇಂದ್ರ ಹಾಗೂ ಮಕ್ಕಳು ಕೂಡ ಇದ್ದರು. ಕಾರಿನಿಂದ ಇಳಿದ ತಕ್ಷಣ ಅಮಿತ್ ಶಾ ಅವರು ಯಡಿಯೂರಪ್ಪನವರ ಕಡೆಗೆ ನೋಡಿ ನಿಮ್ಮ ಕೈಯ್ಯಲ್ಲಿರುವ ಹೂಗುಚ್ಛವನ್ನು ನಿಮ್ಮ ಮಗನ ಕೈಗೆ ನೀಡಿ ಎಂದು ಹೇಳಿದರು. ಬಿಎಸ್‌ವೈಗೆ ಮೊದಲಿಗೆ ಇದರ ಒಳಾರ್ಥ ತಿಳಿಯಲಿಲ್ಲ. ಅದನ್ನು ಗಮನಿಸಿದ ಶಾ, ಮತ್ತೆ ಹೂಗುಚ್ಛವನ್ನು ಅವರಿಗೆ ಕೊಡಿ ಅಂತ ಕೈ ಸನ್ನೆ ಮಾಡಿ ತೋರಿಸಿದರು. ಆಗ ಯಡಿಯೂರಪ್ಪನವರು ತಮ್ಮ ಕೈಯ್ಯಲ್ಲಿದ್ದ ಗುಲಾಬಿ ಹೂಗುಚ್ಛವನ್ನು ಪುತ್ರ ವಿಜಯೇಂದ್ರಗೆ ಕೊಟ್ಟರು. ಬಳಿಕ ಅಮಿತ್ ಶಾ ವಿಜಯೇಂದ್ರೆಗೆ ಬೆನ್ನು ತಟ್ಟಿದರು. ಸದ್ಯ ಈ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಮಿತ್ ಶಾ ಅವರು ತಂದೆಯಿಂದಲೇ ಮಗನಿಗೆ ಹೂಗುಚ್ಚ ನೀಡುವಂತೆ ಹೇಳಿದ್ದು ಯಾಕೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
ಸದ್ಯ ಈ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಮಿತ್ ಶಾ ಅವರು ತಂದೆಯಿಂದಲೇ ಮಗನಿಗೆ ಹೂಗುಚ್ಚ ನೀಡುವಂತೆ ಹೇಳಿದ್ದು ಯಾಕೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
ಮಾತ್ರವಲ್ಲ ಬಿಎಸ್‌ವೈ ಮನೆಯಲ್ಲಿ ಖುದ್ದು ವಿಜಯೇಂದ್ರ ಅವರೇ ತಮ್ಮ ಕೈಯಾರೆ ಅಮಿತ್ ಶಾ ಗೆ ಪ್ರೀತಿಯಿಂದ ಉಣ ಬಡಿಸಿದರು. ಮುಖ್ಯಮಂತ್ರಿ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್ ಜತೆಯಲ್ಲಿದ್ದರು.
ಅಮಿತ್ ಶಾ ವಿಜಯೇಂದ್ರೆಗೆ ಬೆನ್ನು ತಟ್ಟಿದ ವಿಚಾರವಾಗಿ ಮಾತನಾಡಿದ ವಿಜಯೇಂದ್ರ, ಬೆನ್ನು ತಟ್ಟಿದ ಸದ್ದು ಯಾರು ಯಾರಿಗೆ ಹೇಗೆ ಕೇಳಿಸಿದೆ ಗೊತ್ತಿಲ್ಲ. ಅವರು ಸಂಘಟನೆ ಹೇಗೆ ನಡೆಯುತ್ತಿದೆ ಮೋರ್ಚಾ ಸಮಾವೇಶಗಳನ್ನ ಎಷ್ಟು ಮಾಡಿದ್ದೀಯಾ ನೀನು ಖುದ್ದಾಗಿ ಎಷ್ಟು ಜಿಲ್ಲೆ ಗಳಿಗೆ ಪ್ರವಾಸ ಹೋಗಿದ್ದೀಯಾ ಎಂದು ಕೇಳುತ್ತಾ ಬೆನ್ನು ತಟ್ಟಿದರು ಎಂದರು.
ನಾನು ಮೋರ್ಚಾ ಸಮಾವೇಶಗಳ ವರದಿಗಳನ್ನ ಅಮಿತ್ ಶಾ ಅವರಿಗೆ ಕೊಟ್ಟಿದ್ದೇನೆ. ಈ ಬಾರಿ ಸ್ಪಷ್ಟ ಬಹುಮತ ಬರಬೇಕು. ಅದಕ್ಕಾಗಿ ಇನ್ನೂ ಹೆಚ್ಚಿನ ಸಂಘಟನೆ ಮಾಡಿ ಎಂದು ಅಮಿತ್ ಶಾ ಸೂಚಿಸಿದ್ದಾರೆ. -ವಿಜಯೇಂದ್ರ
ಪಕ್ಷ ಈಗಾಗಲೇ ದೊಡ್ಡ ಜವಾಬ್ದಾರಿಯನ್ನೇ ಕೊಟ್ಟಿದೆ. ಅದನ್ನು ನಾನು ನಿಭಾಯಿಸುತ್ತಿದ್ದೇನೆ - ವಿಜಯೇಂದ್ರ ಯಡಿಯೂರಪ್ಪ ಹೇಳಿಕೆ.
ವರುಣಾ ಕ್ಷೇತ್ರದಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿಂತೆ ಮಾತನಾಡಿದ ವಿಜಯೇಂದ್ರ, ನಾನು ಈಗಾಗಲೇ ಶಿಖಾರಿಪುರದಿಂದ ಕೆಲಸ ಶುರು ಮಾಡಿದ್ದೇನೆ. ಕಾರ್ಯಕರ್ತರು ಕೆಲಸ ಮಾಡ್ತಾ ಇದ್ದಾರೆ.
ನಾನು ವರುಣದಿಂದ ಸ್ಪರ್ಧೆ ಮಾಡೋದು ಹೈಕಮಾಂಡ್ ನಿರ್ಧಾರ ಮಾಡುತ್ತೆ. ಆದರೆ ನಾನು ಶಿಖಾರಿಪುರದಲ್ಲೇ ಕೆಲಸ ಶುರು ಮಾಡಿದ್ದೇನೆ ಎಂದು ವಿಜಯೇಂದ್ರ ವರುಣಾ ಕ್ಷೇತ್ರದ ಸ್ಪರ್ಧೆ ಬಗ್ಗೆ ಆಸಕ್ತಿ ತೋರದಂತೆ ಕಂಡುಬಂತು.
ಅಮಿತ್ ಶಾ ನಿವಾಸಕ್ಕೆ ಬಂದಿದ್ದು ಸಂತೋಷ ಆಗಿದೆ. ಚುನಾವಣೆ ಸಂಬಂಧ ಚರ್ಚೆ ಆಗಿದೆ. ಅತಂತ್ರ ವಿಧಾನಸಭೆ ನಿರ್ಮಾಣ ಆಗೋದಿಲ್ಲ. ಹಾಗಾಗಲೂ ಬಿಡಬಾರದು. ಚುನಾವಣೆ ಸಮಯದಲ್ಲಿ ಚುನಾವಣೆ ವಿಚಾರ ಚರ್ಚೆ ಆಗಿದೆ ಎಂದು ವಿಜಯೇಂದ್ರ ತಿಳಿಸಿದರು.
ಯಡಿಯೂರಪ್ಪ ಮತ್ತು ಅಮಿತ್ ಶಾ ನಡುವೆ ರಾಜಕೀಯ ಬಿಟ್ಟು ಬೇರೆನೂ ಚರ್ಚೆ ಆಗೋದೆ ಇಲ್ಲ ವಿವರವಾಗಿ ಚರ್ಚೆ ನಡೆದಿದೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಯಡಿಯೂರಪ್ಪ ಸೈಡ್ ಲೈನ್ ವಿಷಯವಾಗಿ ಮಾತಾಡಿದ ಪುತ್ರ, ಅದು ಸುಳ್ಳು ಸತ್ಯಕ್ಕೆ ದೂರ
ಯಡಿಯೂರಪ್ಪರಿಗೆ ಪಕ್ಷ ಎಲ್ಲಾ ನೀಡಿದೆ ಎಂದಿದ್ದಾರೆ.
ಇಂದು ಅಮಿತ್ ಶಾ ಬೆನ್ನು ತಟ್ಟಿ ಮಾತಾಡಿಸಿದ್ದು ಆನೆ ಬಲ ಬಂದಂತಾಗಿದೆ. ಇದು ರಾಜಕೀಯ ಸಂದೇಶವೇ ಎನ್ನುವ ಪ್ರಶ್ನೆಗೆ ಇದು ಸಹಜ, ಇದು ರಾಜಕೀಯದಲ್ಲಿ ಸಹಜ. ಆನೆ ಬಲ ಬಂದಂತಾಗಿದೆ ಎನ್ನುವ ಮೂಲಕ ಸ್ವಪಕ್ಷದಲ್ಲೆ ಇರುವ ವಿರೋಧಿಗಳಿಗೆ ವಿಜಯೇಂದ್ರ ಟಾಂಗ್ ನೀಡಿದ್ದಾರೆ.